ಶಿವಮೊಗ್ಗ : ನಗರದ ಹೊರವಲಯದಲ್ಲಿ ಓರ್ವನನ್ನ ಕೊಲೆ ಮಾಡಲಾಗಿದ್ದು ಆತನನ್ನ “ಹುಚ್ಚಿ ಕಿರಣ್” ಎಂದು ಗುರುತಿಸಲಾಗಿದೆ.
ಹೊಸಮನೆ ಏರಿಯಾದ ಹುಡುಗನಾಗಿರುವ ಈತನನ್ನ ಕೊಲೆ ಮಾಡಲಾಗಿದೆ. ನಿನ್ನೆ ಮಧ್ಯ ಕುಡಿಯಲು ತೆರಳಿದ್ದ ಕಿರಣ್ ಜೊತೆ ಇಬ್ಬರು ಸ್ನೇಹಿತರು ತೆರಳಿದ್ದು ಕುಡಿತದ ನಶೆಯಲ್ಲಿ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಕಿರಣ್ ಮತ್ತು ಇಬ್ಬರ ಸ್ನೇಹಿರ ನಡುವೆ ಜಗಳ ಉಂಟಾಗಿದ್ದು ಸ್ನೇಹಿತರು ಬಿಯರ್ ಬಾಟಲಿಯಿಂದ ಒಡೆದು ಮತ್ತು ಕಲ್ಲಿಗೆ ಜಜ್ಜಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿದವನನ್ನ ಕಾರ್ತಿಕ್ ಎಂದು ಗುರುತಿಸಲಾಗಿದೆ. ಮತ್ತೋರ್ವನನ್ನು ಇನ್ನೂ ಪತ್ತೆ ಹಚ್ಚಬೇಕಿದೆ.
ಪ್ರಕರಣ ಸಾಗರ ರಸ್ತೆಯ ನಂಜಪ್ಪ ಲೈಫ಼್ ಕೇರ್ ಸಮೀಪದ ಗಂಧರ್ವ ಬಾರ್ ಬಳಿ ನಡೆದಿದೆ.
ವಿನೋಬ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆಗಿ19 ದಿನಗಳ ನಂತರ ಮತ್ತೊಂದು ಕೊಲೆ ಶಿವಮೊಗ್ಗದ ಜನರನ್ನ ಬೆಚ್ಚಿ ಬೀಳಿಸಿದೆ.
ಕಿರಣ್ ಹೊಡೆದಾಟ ಮತ್ತು ಇತರೆ ಸಣ್ಣಪುಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.