Headlines

ರಿಪ್ಪನ್‌ಪೇಟೆ ಬಳಿ ಬೈಕ್ ಗೆ ಹಿಂಬದಿಯಿಂದ ಗುದ್ದಿದ ಟ್ಯಾಂಕರ್ ಲಾರಿ : ಬೈಕ್ ಸವಾರ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು

ರಿಪ್ಪನ್ ಪೇಟೆ: ಪಟ್ಟಣದ ಸಿದ್ದಪ್ಪನಗುಡಿಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.


ಇಂದು ಬೆನವಳ್ಳಿ ಗ್ರಾಮದ ನಿವಾಸಿ ನಿವೃತ್ತ ಅರಣ್ಯ ಅಧಿಕಾರಿ ಮಂಜುನಾಥ್ ರಿಪ್ಪನ್‌ಪೇಟೆ ಯಿಂದ ಬೆನವಳ್ಳಿಗೆ ಬೈಕ್ ನಲ್ಲಿ ಹೋಗುತಿದ್ದಾಗ ಸಿದ್ಧಪ್ಪನಗುಡಿ ಹತ್ತಿರ ಹಿಂಬದಿಯಿಂದ ಟ್ಯಾಂಕರ್‌ ಲಾರಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸಮೇತ ಟಾರ್ ರಸ್ತೆಗೆ ಬಿದ್ದು, ಬೈಕ್ ಸವಾರ ಮಂಜುನಾಥ್ ರವರ ತಲೆಗೆ ತೀವ್ರತರವಾದ ಪೆಟ್ಟಾಗಿದೆ.


ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಗಾಯಾಳು ಮಂಜುನಾಥ್ ರವರನ್ನು ಆಂಬ್ಯುಲೆನ್ಸ್ ಮೂಲಕ ರಿಪ್ಪನ್ ಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ

About The Author

Leave a Reply

Your email address will not be published. Required fields are marked *