ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತವೃಂದದವರು ಶ್ರದ್ಧಾಭಕ್ತಿಯಿಂದ ಜಿನನಾಮ ಸ್ತುತಿಸಿ, ಭಕ್ತಿಕಾಣಿಕೆ ಸಮರ್ಪಿಸಿದರು. ಸಂಪ್ರದಾಯದಂತೆ ಉಡಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಆಗಮಿಸಿದ್ದ ಭಕ್ತಾದಿಗಳಿಗೆ ಅಭೀಷ್ಠ ಪ್ರಸಾಧ ಭವನದಲ್ಲಿ ಸೂಕ್ತ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.
ನಂತರ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀಗಳವರು ನಮ್ಮ ಆಚಾರ-ವಿಚಾರಗಳಲ್ಲಿ ನ್ಯೂನತೆಯುಂಟಾದಾಗ, ಮನಸ್ಸಿನ ವಿಕಾರಗಳು ಹೆಚ್ಚಾದಾಗ ಚಂಚಲತೆಯಿಂದ ಅದು ಅಶುಭವಾಗಿ ಪರಿಣಮಿಸುತ್ತದೆ. ಧರ್ಮವು ಶಾಶ್ವತ ಸುಖ ಕೊಡುವ ಮಾರ್ಗವಾಗಿದ್ದು, ಮಹಾನ್ ಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಆಶೀರ್ವಚನ ನೀಡಿದರು.

