ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಧ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಮರು ತನಿಖೆ ನಡೆಸುವಂತೆ ಆಗ್ರಹ

ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಧ್ಯಾರ್ಥಿನಿಯೊಬ್ಬರ ಮೇಲೆ ಹಿರಿಯ ವೈದ್ಯರೊಬ್ಬರಿಂದ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮುಚ್ಚಿಹಾಕಲಾಗಿದ್ದು, ಈ ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ಪೀಪಲ್ಸ್ ಲಾಯರ್ ಗಿಲ್ಡ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಕಳೆದ ಶುಕ್ರವಾರ ಅಂದರೆ ದಿನಾಂಕ:15-07-2022 ರಂದು ಸಿಮ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಹಿರಿಯ ಶಸ್ತ್ರ ಚಿಕಿತ್ಸೆ ವೈದ್ಯರಾದ ಆಶ್ವಿನ್ ಹೆಬ್ಬಾರ್, ಎಂಬುವರಿಂದ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಉತ್ತರಭಾರತೀಯ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಸಿಮ್ಸ್  ನಿರ್ದೇಶಕರಿಗೆ ಲಿಖಿತ ದೂರನ್ನು ನೀಡಿದ್ದಾರೆ.

ದೂರನ್ನು ಗಂಭೀರವಾಗಿ ಪರಿಗಣಿಸದ ಸಿಮ್ಸ್ ನಿರ್ದೇಶಕ ಡಾ|| ಓ.ಎಸ್. ಸಿದ್ದಪ್ಪ ಮತ್ತು ತನಿಖಾ ಸಂಸ್ಥೆಯ ಮುಖ್ಯಸ್ಥರಾದ ಡಾ| ರೇಖಾ ದೌರ್ಜನ್ಯಕೊಳಗಾದ ವಿದ್ಯಾರ್ಥಿನಿಯ ಮೇಲೆ ಒತ್ತಡ ಹೇರಿ ನೀಡಿರುವ ದೂರನ್ನು ಹಿಂಪಡೆಯುವಂತೆ ಮಾಡಿರುವುದು ಖಂಡನೀಯ ಎಂದು ಗಿಲ್ಡ್ ಆಗ್ರಹಿಸಿದೆ.

ಲೈಂಗಿಕ ದೌರ್ಜನ್ಯದ ವಿಷಯವ ಹಲವು ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದು, ಸಾರ್ವಜನಿಕವಾಗಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ವೈದ್ಯಕೀಯ ಕಾಲೇಜೊಂದರಲ್ಲಿಯೇ ಈ ಪರಿಸ್ಥಿತಿ ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇದೆಯೇ ಎಂಬ ಅನುಮಾನಗಳು ವ್ಯಕ್ತವಾಗಿರುತ್ತದೆ ಎಂದು ಗಿಲ್ಡ್ ಮನವಿಯಲ್ಲಿ ಆಕ ವ್ಯಕ್ತಪಡಿಸಿದೆ.

ನೊಂದ ಮಹಿಳೆ ಉತ್ತರ ಭಾರತೀಯದವಳಾಗಿರುವುದರಿಂದ ಅವರಿಗೆ ಇಲ್ಲಿ ಯಾವುದೇ ಬೆಂಬಲ್ಲವಿಲ್ಲದೇ ಇರುವುದರಿಂದಾಗಿ ಅಸಹಾಯಕರಾಗಿರುವುದನ್ನು ದುರುಪಯೋಗ ಪಡಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ವಕೀಲರ ಸಂಘಟನೆ ಆರೋಪಿಸಿದೆ.

ಮನವಿ ನೀಡುವ ಸಂದರ್ಭದಲ್ಲಿ ಪೀಪಲ್ಸ್ ಲಾಯರ್ ಗಿಲ್ಡ್ ನ ಶ್ರೀಪಾಲ್, ವಿಜಯ ಕುಮಾರ್, ರಾಜ್ ಚರಣ್ ಮೊದಲಾದ ವಕೀಲರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *