ಸಂತೋಷ್ ಲಾಡ್ ಬಗ್ಗೆ ಕೀಳುಮಟ್ಟದ ಪದ ಬಳಕೆ – ಬಿ ವೈ ವಿಜಯೇಂದ್ರ ವಿರುದ್ದ ಮರಾಠ ಸಮುದಾಯದ ಅಕ್ರೋಶ | Protest

ಸಂತೋಷ್ ಲಾಡ್ ಬಗ್ಗೆ ಕೀಳುಮಟ್ಟದ ಪದ ಬಳಕೆ – ಬಿ ವೈ ವಿಜಯೇಂದ್ರ ವಿರುದ್ದ ಮರಾಠ ಸಮುದಾಯದ ಅಕ್ರೋಶ ಶಿವಮೊಗ್ಗ :  ಸಚಿವ ಸಂತೋಷ್ ಲಾಡ್ ವಿರುದ್ಧ ಕೀಳುಮಟ್ಟದ ಪದಬಳಕೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮರಾಠಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಮರಾಠ ಸಮುದಾಯದಿಂದ ಪ್ರತಿಭಟನೆ ನಡೆಸಲಾಗಿದೆ. ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ವಿಜಯೇಂದ್ರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರ…

Read More

ಎದೆನೋವಿನಿಂದ ಮೃತಪಟ್ಟ ಮಾಲೀಕನಿಗಾಗಿ ಆಸ್ಪತ್ರೆಯಲ್ಲೆ ಠಿಕಾಣಿ ಹೂಡಿದ ನಾಯಿ

ಎದೆನೋವಿನಿಂದ ಮೃತಪಟ್ಟ ಮಾಲೀಕನಿಗಾಗಿ ಆಸ್ಪತ್ರೆಯಲ್ಲೆ ಠಿಕಾಣಿ ಹೂಡಿದ ನಾಯಿ ಶಿವಮೊಗ್ಗ : ಮೃತ ಯಜಮಾನನನ್ನು ಹುಡುಕಿಕೊಂಡು ಆಸ್ಪತ್ರೆ ಆವರಣದಲ್ಲಿ ಠಿಕಾಣಿ ಹೂಡಿದ ನಾಯಿಯೊಂದನ್ನು ಹಿಡಿಯಲಾಗಿದೆ. ಕನ್ನೆಕೊಪ್ಪದ ಪಾಲಾಕ್ಷಪ್ಪ ಹದಿನೈದು ದಿನಗಳ ಹಿಂದೆ ಎದೆನೋವಿನಿಂದ ಬಳಲಿ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯಘಾತವನ್ನು ದೃಡಪಡಿಸಿದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿದ್ದಾರೆ. ಚಿಕಿತ್ಸೆ ಪಲಿಸದೆ ಮೆಗ್ಗಾನ್‌ನಲ್ಲಿ ಪಾಲಾಕ್ಷಪ್ಪ ಮೃತಪಟ್ಟಿದ್ದಾರೆ. ಆದರೆ ಎದೆನೋವಿನಿಂದ ಬಳಲುತ್ತಿದ ವ್ಯಕ್ತಿಯೊಂದಿಗೆ ಬಂದಿದ ನಾಯಿ ತನ್ನ ಮಾಲೀಕ ಪಾಲಾಕ್ಷಪ್ಪ ಆಸ್ಪತ್ರೆಯಲ್ಲೆ ಉಳಿದಿದ್ದಾರೆಂದು ತಿಳಿದು…

Read More

ಮಳೆಯಲ್ಲೂ ರಾಷ್ಟ್ರಧ್ವಜ ಹಿಡಿದು ನಡೆದು ಯಶಸ್ವಿಯಾದ ವಿಜಯ ತಿರಂಗಾ ಯಾತ್ರೆ

ಮಳೆಯಲ್ಲೂ ರಾಷ್ಟ್ರಧ್ವಜ ಹಿಡಿದು ನಡೆದು ಯಶಸ್ವಿಯಾದ ವಿಜಯ ತಿರಂಗಾ ಯಾತ್ರೆ ಪಾಕ್ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಿದ ಸೈನಿಕರಿಗೆ ಕೃತಜ್ಞತೆ ತಿಳಿಸುವ ವಿಜಯ ತಿರಂಗಾ ಯಾತ್ರೆಯನ್ನು ಮಳೆಯಲ್ಲೂ ಯಶಸ್ವಿಯಾಗಿ ನಡೆಸಲಾಯಿತು. ಶಿವಮೊಗ್ಗದ ನಾಗರಿಕರ ವೇದಿಕೆ ಈ ಯಾತ್ರೆ ಆಯೋಜಿಸಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಗಾಂಧಿ ಬಜಾರ್ ಮೂಲಕ, ಶಿವಪ್ಪ ನಾಯಕ ವೃತ್ತದಿಂದ ಟಿ.ಸೀನಪ್ಪ‌ ಶೆಟ್ಟಿ ವೃತ್ತದ ವರೆಗೂ ವಿಜಯ ತಿರಂಗಾ ಯಾತ್ರೆ ನಡೆಸಲಾಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಪ್ರಾರಂಭವಾದ ತಿರಂಗಾ ಯಾತ್ರೆಯಲ್ಲಿ ಸುಮಾರು 700 ಮೀಟರ್…

Read More

10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವು ಸೊರಬ : ಹೃದಯಾಘಾತದಿಂದ 10ನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದೆ. 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಮೃತ ದುರ್ದೈವಿ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ. ಜಯಂತ್ ಎಂದಿನಂತೆ ಬೆಳಗ್ಗೆ ಎದ್ದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್​ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ…

Read More

ಶಿವಮೊಗ್ಗದಲ್ಲಿ ಪೊಲೀಸ್ ಗುಪ್ತಚರ ಇಲಾಖೆ ಸಂಪೂರ್ಣ ವಿಫಲ : ಚಕ್ರವರ್ತಿ ಸೂಲಿಬೆಲೆ

ಶಿವಮೊಗ್ಗದಲ್ಲಿ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದು ಯುವ ಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಬೆಲಿ ಅಭಿಪ್ರಾಯಪಟ್ಟರು.ಇಂದು ಮೃತ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಹಲ್ಲೆ ಕೊಲೆಯಾಗಿದೆ. ಕೊಲೆಯ ಹಿಂದೆ ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವಿಫಲವಾಗಿದೆ ಎಂದರು.ಶಿವಮೊಗ್ಗ ಯಾವತ್ರು ಶಾಂತವಾಗಿಲ್ಲ. ಮುಸ್ಲಿಂ ಸಂಘಟನೆಗಳು ಯಾವಾಗಲೂ ಆಕ್ಟಿವ್ ಆಗಿರುವ ಜಿಲ್ಲೆ ಶಿವಮೊಗ್ಗ ಸರ್ಕಾರ ಕಣ್ಣು ಹೊರೆಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಇರುವ…

Read More

ಮಿದುಳು ನಿಷ್ಕ್ರಿಯಗೊಂಡು ಏಳು ವರ್ಷದ ಬಾಲಕ ಸಾವು : ನೇತ್ರದಾನ ಮಾಡಿ ಉದಾರತೆ ಮೆರೆದ ಪೋಷಕರು|Eyedonate

ರಿಪ್ಪನ್ ಪೇಟೆ : ಏಳು ವರ್ಷದ ಮಗುವಿನ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಮಗನನ್ನು ಬದುಕಿಸುವುದಕ್ಕೆ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಮೆದುಳು ನಿಷ್ಕ್ರೀಯಗೊಂಡ ಬಳಿಕ ಬಾಲಕ ಸಾವಿನ ಮನೆಯ ಅಂಚು ತಲುಪಿಯಾಗಿತ್ತು. ಎತ್ತಿ ಮುದ್ದಾಡಿ ಸಾಕಿ ಸಲುಹಿದ ಪುಟ್ಟ ಮಗನ ಸಾವಿನ ನೋವಿನ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮಗನ ಸಾವಿನ ನೋವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಹೌದು…

Read More

ಹೈಕಮಾಂಡ್ ನಿಂದ ಯಾವುದೇ ಒತ್ತಡ ಇಲ್ಲ: ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ:ಹಂಗಾಮಿ ಸಿಎಂ ಬಿ ಎಸ್ ವೈ

ಬೆಂಗಳೂರು: ನನಗೆ ಕೇಂದ್ರ ನಾಯಕರಿಂದ ಯಾವುದೇ ಒತ್ತಡ ಬಂದಿಲ್ಲ. ಹೊಸಬರಿಗೆ ಅವಕಾಶ ಸಿಗಬೇಕೆಂದು ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹಂಗಾಮಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಎರಡು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕೇಂದ್ರದ ನಾಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದಿನ ಸಿಎಂಗೆ ಯಾರ ಹೆಸರನ್ನು…

Read More

ಭದ್ರಾ ಜಲಾಶಯದ ನಾಲ್ಕು ಗೇಟ್ ಗಳು ಓಪನ್ | bhadra Dam

ಭದ್ರಾ ಜಲಾಶಯದ ನಾಲ್ಕು ಗೇಟ್ ಗಳು ಓಪನ್ | bhadra Dam ಭದ್ರಾ ಜಲಾಶಯ ಗರಿಷ್ಠ ಮಟ್ಟಕ್ಕೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ನಾಲ್ಕು ಕ್ರಸ್ಟ್‌ ಗೇಟ್‌ಗಳನ್ನು ಮೇಲೆತ್ತಲಾಗಿದೆ. ಇಂದು ನಾಲ್ಕು ಕ್ರಸ್ಟ್‌ ಗೇಟ್‌ಗಳನ್ನು ಓಪನ್ ಮಾಡಲಾಯಿತು ನೀರು ಬಿಡುವ ವಿಷಯ ತಿಳಿಯುತಿದ್ದಂತೆ ವಿವಿಧೆಡೆಯ ಜನರು ಜಲಾಶಯದ ಮುಂದೆ ಆಗಮಿಸಿದ್ದರು. ಪ್ರತಿ ಗೇಟ್‌ ಮೇಲೆತ್ತಿದಾಗಲೂ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಇವತ್ತು ಭದ್ರಾ ಜಲಾಶಯಕ್ಕೆ 20,774 ಕ್ಯೂಸೆಕ್‌ ಒಳ ಹರಿವು ಇದೆ. ಈಗ 6 ಸಾವಿರ…

Read More

ಕಾರು ಕಳ್ಳತನ ಪ್ರಕರಣ – ತನಿಖೆ ನಡೆಸಿ ಕಾರು ಮಾಲೀಕನನ್ನೆ ಬಂಧಿಸಿದ ಪೊಲೀಸರು : ವಿಶೇಷ ಪ್ರಕರಣ ಇಲ್ಲಿದೆ ನೋಡಿ…..!!!|theft

ಕಾರು ಕಳ್ಳತನದ ಪ್ರಕರಣವೊಂದರಲ್ಲಿ  ದೂರು ನೀಡಿದ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಆರೋಪಿ ಕಾರಿನ ಮಾಲೀಕ ಕಾರಿನ ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ ತನ್ನ ಕಾರಿನ ನಂಬರ್ ಬದಲಾಯಿಸಿ, ಸ್ನೇಹಿತನ ಬಳಿ ಕೊಟ್ಟು ಕಳ್ಳತನದ ದೂರು ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಶಿವಮೊಗ್ಗ ವಿದ್ಯಾನಗರದ ಚಂದ್ರು ಕುಮಾರ (28), ದಾವಣೆಗೆರೆ ಸರಸ್ವತಿ ನಗರದ ಪ್ರಶಾಂತ್ (29) ಬಂಧಿತರು. 14 ಮೇ 2022 ರಂದು ಸೂಳೆಬೈಲು ಸಮೀಪದ ಕುಂಚಿಟಿಗರ…

Read More

ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ -ಬೈಕ್ ಸವಾರನಿಗೆ  ಗಂಭೀರ ಗಾಯ

ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ -ಬೈಕ್ ಸವಾರನಿಗೆ  ಗಂಭೀರ ಗಾಯ ತೀರ್ಥಹಳ್ಳಿ : ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಅರೆಕಲ್ ಬಳಿ ಅ.19ರ ಶನಿವಾರ ನಡೆದಿದೆ. ತಾಲೂಕಿನ ಮೇಗರವಳ್ಳಿ ಸಮೀಪದ ಅರೆಕಲ್ ಬಳಿ ಈ ಅವಘಡ ಸಂಭವಿಸಿದ್ದು ಹಾಲಾಡಿ ಶಿವರಾಮ್ (45) ಗಂಭೀರ ಗಾಯಗೊಂಡ ವ್ಯಕ್ತಿ. ಬೈಕ್ ನಲ್ಲಿ ಬರುತ್ತಿದ್ದ ಶಿವರಾಮ್ ಅವರಿಗೆ ಲಾರಿ ಗುದ್ದಿದೆ. ಈ ಪರಿಣಾಮ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು…

Read More