ರಿಪ್ಪನ್ ಪೇಟೆ : ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳನ್ನೊಳಗೊಂಡ ಭಂಡಾರಿ ಸಮಾಜದ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೇವರಾಜ್ ಭಂಡಾರಿ ಬಾಳೂರು ರಾಜಜೀನಾಮೆ ನೀಡಿದ್ದಾರೆ.
ಡಿ,3 ಶುಕ್ರವಾರ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನ ಸಿದ್ದಪ್ಪನ ಗುಡಿ ದೇವಸ್ಥಾನ ಇಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಸಂಘದ ಕಾರ್ಯವೈಖರಿಗೆ ಬೇಸತ್ತು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿ ಸಂಘದ ಅಧ್ಯಕ್ಷ ಹಿರಿಯಣ್ಣ ಭಂಡಾರಿ ಯವರಿಗೆ ರಾಜೀನಾಮೆಯನ್ನು ಸಲ್ಲಿಸಿದರು.
ಈ ಸಭೆಯಲ್ಲಿ ಭಂಡಾರಿ ಸಮಾಜದ ಮುಖಂಡರಾದ ನಾಗರಾಜ್ ಭಂಡಾರಿ ಅರಸಾಳು,ವಾಸು ಎಂ,ಬಾಲು ದೂನ,ಪಾಂಡುರಂಗ ದೂನ,ರಾಘವೇಂದ್ರ ಅರಸಾಳು,ಮಂಜುನಾಥ್ ಭೈರಪುರ, ಲೋಕೇಶ್ ಎಂ ಮತ್ತಿತರರು ಉಪಸ್ಥಿತರಿದ್ದರು