POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಅಪಘಾತಕ್ಕೀಡಾದ ಕುಟುಂಬದ ನೆರವಿಗೆ ತಕ್ಷಣ ಧಾವಿಸಿ ಉಪಚಾರಗೈದಾ ಸಾಗರದ ಯುವ ಪತ್ರಕರ್ತ ಜಮೀಲ್ ಸಾಗರ್

ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ರಟ್ಟಿಹಳ್ಳಿ ತಾಲ್ಲೂಕಿನ  ಒಂದು ಕುಟುಂಬದವರು ಸಿಗಂದೂರು ಶ್ರೀಚೌಡೇಶ್ವರಿ ದರ್ಶನಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯೆ ಅಪಘಾತ ಸಂಭವಿಸುತ್ತದೆ ತಕ್ಷಣ ಅವರು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಬರುತ್ತಾರೆ.ಇದೇ ಸಮಯಕ್ಕೆ ಸಾಗರದ ಆಸ್ಪತ್ರೆಗೆ ಧಾವಿಸಿದ ಯುವ ಪತ್ರಕರ್ತ ಜಮೀಲ್ ಸಾಗರ್ ರವರು ಮುತವರ್ಜಿ ವಹಿಸಿ ವೈದ್ಯರ ಬಳಿ ಇವರನ್ನು ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆಯನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಇಬ್ಬರು ಪುಟ್ಟ ಮಕ್ಕಳೊಂದಿಗೆ ವೃದ್ಧರೂ ಆಗಮಿಸಿದಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇವರ ಜೊತೆಗಿದ್ದು ಇವರಿಗೆ ಚಿಕಿತ್ಸೆಯನ್ನು ಕೊಡಿಸಿದ್ದಾರೆ ಅಪಘಾತದಲ್ಲಿ ಈ ಕುಟುಂಬದ ಪುರುಷನ ಬಟ್ಟೆ ತುಂಬಾ ಹರಿದು ರಕ್ತಸ್ರಾವವಾಗಿ ರಕ್ತದ ಕಲೆಯಾಗಿತ್ತು ಇದನ್ನು ನೋಡಿದ ಜಮೀಲ್ ಸಾಗರ್ ರವರು ತಕ್ಷಣ ಹೊಸ ಬಟ್ಟೆಯನ್ನು ತಂದು ಇವರಿಗೆ ತೊಡಿಸಿ ನಂತರ ಇವರ ಕುಟುಂಬದ ಸದಸ್ಯರಿಗೆ ಜ್ಯೂಸ್ ಹಾಗೂ ವಾಟರ್ ಬಾಟಲ್  ಕೊಡಿಸಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿ ನಂತರ ರಟ್ಟಿಹಳ್ಳಿಗೆ ಹೋಗಲು ಪ್ರಯಾಣದ ವ್ಯವಸ್ಥೆಯನ್ನು ಸಹ ಮಾಡಿ ಮಾನವೀಯತೆ ಮೆರೆದಿದ್ದಾರೆ .

ವರದಿ:  ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.