ಸಾಗರ: ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಜೆ ಸುಮಾರಿಗೆ ದ್ವಿಚಕ್ರವಾಹನ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಸಾಗರ ತಾಲೂಕಿನ ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮತ್ತೋರ್ವ ವ್ಯಕ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಮೂಲದ ಮಧು ಅಂದಾಜು 40 ವರ್ಷ ಹಾಗೂ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿ ಶಿವಮೊಗ್ಗ ಮೂಲದ ಗಿರೀಶ್ ಅಂದಾಜು 35ವರ್ಷ ಎಂದು ತಿಳಿದುಬಂದಿದೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.