Headlines

ನ್ಯಾಯಲಯದ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ : ಮಹಾಲಕ್ಷ್ಮಿ ಅಣ್ಣಪ್ಪ

ರಿಪ್ಪನ್‌ಪೇಟೆ: ಕಳೆದ ವರ್ಷ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಬರುವೆ 1ನೇ ವಾರ್ಡ್ ನಲ್ಲಿ ನಡೆದ ಮತದಾನದಲ್ಲಿ ಅಕ್ರಮವಾಗಿದೆ ಎಂದು ದಾಖಲಾಗಿದ್ದ ಮೊಕದ್ದಮೆಯನ್ನು ಹೊಸನಗರ ಜೆ ಎಂಎಫ್ ಸಿ ನ್ಯಾಯಾಲಯ ವಜಾ ಮಾಡಿದೆ.

ಘಟನೆಯ ಹಿನ್ನಲೆ:

 ಒಬ್ಬನೇ ವ್ಯಕ್ತಿ ಎರಡು-ಮೂರು ವಾರ್ಡ್‌ಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಮತದಾನದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಬರುವೆ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿ ಮೆಣಸೆ ಆನಂದ್ ರವರು ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜಯಗಳಿಸಿದ ಅಭ್ಯರ್ಥಿಗಳ ವಿರುದ್ಧ ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಸದರಿ ಪ್ರಕರಣವನ್ನು ವಿಚಾರಿಸಿದ ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯವು ಎರಡು ಮೂರು ಗುರುತಿನ (ಎಪಿಕ್) ಕಾರ್ಡ್ ಹೊಂದಿದ್ದರೂ ಕೂಡಾ ಮತದಾನ ಮಾಡಿರುವುದು ಒಂದೇ ಮತದಾನ ಕೇಂದ್ರದಲ್ಲಿ ಹಾಗಾಗಿ ಜಯಗಳಿಸಿರುವ ಹಾಲಿ ಗ್ರಾಪಂ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ ಮತ್ತು ಡಿ.ಈ ಮಧುಸೂದನ್  ಪರ ತೀರ್ಪು ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಸದಸ್ಯರಾದ ಡಿ ಈ ಮಧುಸೂದನ್ ನ್ಯಾಯಾಲಯದ ಈ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ ಎಂದರು.

ನಂತರ ಪ್ರತಿಕ್ರಿಯೆ ನೀಡಿದ ರಿಪ್ಪನ್ ಪೇಟೆ ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ನನ್ನನ್ನು ಬರುವೆ 1ನೇ ವಾರ್ಡ್ ನ ಜನರು ಪ್ರೀತಿ ಮತ್ತು ನಂಬಿಕೆಯಿಂದ  ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ.ಇದನ್ನು ಸಹಿಸದ ಕೆಲ ವ್ಯಕ್ತಿಗಳು ನನ್ನ ಗೆಲುವನ್ನು ಪ್ರಶ್ನಿಸಿದ್ದರು ಹಾಗೂ ಸದಸ್ಯತ್ವ ವಜಾ ಆಗುವುದು ಎಂದು ಅಪಹಾಸ್ಯ ಮಾಡುತ್ತಿದ್ದವರಿಗೆ ನ್ಯಾಯಲಯ ತಕ್ಕ ಉತ್ತರ ನೀಡಿದೆ ಎಂದರು.

Leave a Reply

Your email address will not be published. Required fields are marked *