Headlines

ಮಳೆಯಲ್ಲೂ ರಾಷ್ಟ್ರಧ್ವಜ ಹಿಡಿದು ನಡೆದು ಯಶಸ್ವಿಯಾದ ವಿಜಯ ತಿರಂಗಾ ಯಾತ್ರೆ

ಮಳೆಯಲ್ಲೂ ರಾಷ್ಟ್ರಧ್ವಜ ಹಿಡಿದು ನಡೆದು ಯಶಸ್ವಿಯಾದ ವಿಜಯ ತಿರಂಗಾ ಯಾತ್ರೆ

ಪಾಕ್ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಿದ ಸೈನಿಕರಿಗೆ ಕೃತಜ್ಞತೆ ತಿಳಿಸುವ ವಿಜಯ ತಿರಂಗಾ ಯಾತ್ರೆಯನ್ನು ಮಳೆಯಲ್ಲೂ ಯಶಸ್ವಿಯಾಗಿ ನಡೆಸಲಾಯಿತು. ಶಿವಮೊಗ್ಗದ ನಾಗರಿಕರ ವೇದಿಕೆ ಈ ಯಾತ್ರೆ ಆಯೋಜಿಸಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಗಾಂಧಿ ಬಜಾರ್ ಮೂಲಕ, ಶಿವಪ್ಪ ನಾಯಕ ವೃತ್ತದಿಂದ ಟಿ.ಸೀನಪ್ಪ‌ ಶೆಟ್ಟಿ ವೃತ್ತದ ವರೆಗೂ ವಿಜಯ ತಿರಂಗಾ ಯಾತ್ರೆ ನಡೆಸಲಾಯಿತು.

ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಪ್ರಾರಂಭವಾದ ತಿರಂಗಾ ಯಾತ್ರೆಯಲ್ಲಿ ಸುಮಾರು 700 ಮೀಟರ್ ಉದ್ದದ ಭಾರತದ ರಾಷ್ಟ್ರಧ್ವಜವನ್ನಿಟ್ಟುಕೊಂಡು ಸಾಗಲಾಯಿತು. ಯಾತ್ರೆ ಪ್ರಾರಂಭವಾಗುತ್ತಿದ್ದಂತಯೇ ವರುಣನ ಆಗಮನವಾಯಿತು. ಮಳೆ ಬಂದರೂ ಸಹ ಯಾತ್ರೆಯನ್ನು ನಿಲ್ಲಿಸದೇ ರಾಷ್ಟ್ರಧ್ವಜ ಹಿಡಿದುಕೊಂಡು ವಿದ್ಯಾರ್ಥಿಗಳು, ಶಿವಮೊಗ್ಗದ ನಾಗರಿಕರು ಸಾಗಿದ್ದು ವಿಶೇಷವಾಗಿತ್ತು. ಮಳೆಯಲ್ಲೂ ಸಹ ಸುಮಾರು ಒಂದು ಸಾವಿರ ಜನರು ರಾಷ್ಟ್ರಧ್ವಜ ಹಿಡಿದರು. ಯಾತ್ರೆಯ ಮೂಲಕ ಪ್ರತಿಯೊಬ್ಬ ಜನರಲ್ಲೂ ದೇಶ ಭಕ್ತಿ ಜಾಗೃತಗೊಳಿಸುವ ಕೆಲಸ ಮಾಡಲಾಯಿತು. ಯಾತ್ರೆಯಲ್ಲಿ ಮಾಜಿ ಸೈನಿಕರು, ರಾಷ್ಟ್ರಭಕ್ತರು, ದೇಶಪ್ರೇಮಿಗಳು ಸೇರಿದಂತೆ ಹಲವಾರು ಭಾಗಿದ್ದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ‌ ಪ್ರೊ.ಪುನೀತ್ ಕುಮಾರ್, ನಮ್ಮ ದೇಶದ ಸೈನಿಕರ ಶಕ್ತಿಯನ್ನು ನೆರೆದಿದ್ದವರಿಗೆ ಪುನರ್ ಮನನ ಮಾಡಿಕೊಟ್ಟರು. ಪಾಕ್ ಅಣು ಬಾಂಬ್ ಅನ್ನು ಯಾವಾಗ ಬೇಕಾದರೂ ಹಾಕಬಹುದೆಂದು ಗೊತ್ತಿದ್ದರೂ ಭಾರತೀಯ ಸೇನೆ ದಾಳಿ ಬಂದಿದೆ. ಪುಲ್ವಾಮಾ ದಾಳಿಯಲ್ಲೂ ಸಹ ಏರ್ ಸ್ಟ್ರೈಕ್ ಮಾಡಿ ನಮ್ಮ ಸೈನಿಕರು ವಾಪಸ್ ಆಗಿದ್ದರು. ಭಾರತವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ನಮ್ಮ ಸೇನೆ ಹೊಡೆದು ಹಾಕುವ ಕೆಲಸ ಮಾಡುತ್ತಿದೆ. ದೇಶದ ರಕ್ಷಣೆ ಮಾಡಲು ಶಸ್ತ್ರ ತಯಾರು ಮಾಡಿದ ವಿಜ್ಞಾನಿಗಳಿಗೆ ಅಭಿನಂದನೆ ಎಂದರು.

ನಂತರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಮಳೆಯಲ್ಲೂ ನಮ್ಮ ತಿರಂಗಾಯಾತ್ರೆ ನಡೆಸಿದ್ದು ವಿಶೇಷವಾಗಿತ್ತು. ಭಾರತ ಮಾತೆಯ ಸಿಂಧೂರವನ್ನು ಮುಟ್ಟಲು ಬಂದ್ರೆ ಪಾಕ್ ಉಳಿಯುವುದಿಲ್ಲ ಎಂದು ಭಾರತದ ಸೈನಿಕರು ತೋರಿಸಿಕೊಟ್ಟಿದ್ದಾರೆ. ಪೆಹಲ್ಗಾಮ್​ನಲ್ಲಿ ಕುಂಕುಮ ಕಳೆದು ಕೊಂಡಿರುವ ಸಹೋದರಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಲು ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ಭಾರತದ ರಾಷ್ಟ್ರಧ್ವಜ ಕೆಳಗೆ ಇಳಿಯದಂತೆ ನೋಡಿಕೊಳ್ಳಬೇಕಿದೆ. ನಮ್ಮ ದೇಶದ ಸಿಂಧು ನದಿಯ ನೀರು ಕುಡಿದು ನಮಗೆ ದ್ರೋಹ ಮಾಡುವ ಕೆಲಸ ಪಾಕ್ ಮಾಡಿದೆ. ನಮ್ಮ‌ ದೇಶದ ಅನ್ನ ತಿಂದು ನಮಗೆ ದ್ರೋಹ ಮಾಡುತ್ತಿದ್ದಾರೆ. ನಮ್ಮ ಹೊರಗಿನ ಮತ್ತು ಒಳಗಿನ ಶತ್ರುಗಳ ಜೊತೆ ಹೋರಾಟ ಮಾಡಬೇಕಿದೆ ಎಂದರು.

Leave a Reply

Your email address will not be published. Required fields are marked *