ಶವ ಪರೀಕ್ಷೆ ವರದಿ ನೀಡಲು ಲಂಚ ಕೇಳಿದ ಸರ್ಕಾರಿ ವೈದ್ಯ – ಲೋಕಯುಕ್ತರ ದಾಳಿ , ಬಂಧನ
ಶವ ಪರೀಕ್ಷೆ ವರದಿ ನೀಡಲು ಲಂಚ ಕೇಳಿದ ಸರ್ಕಾರಿ ವೈದ್ಯ – ಲೋಕಯುಕ್ತರ ದಾಳಿ , ಬಂಧನ
ಶವ ಪರೀಕ್ಷೆ ವರದಿ ನೀಡಲು ಲಂಚ ಕೇಳಿದ ಸರ್ಕಾರಿ ವೈದ್ಯ – ಲೋಕಯುಕ್ತರ ದಾಳಿ , ಬಂಧನ
ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಶವ ಪರೀಕ್ಷೆ ವರದಿ ನೀಡುವುದಕ್ಕಾಗಿ ಮಂಗಳವಾರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೈದ್ಯರನ್ನು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ವೈದ್ಯ ಗೋಪಾಲ್ ಜಿ.ಹರಿಗಿ ಬಂಧಿತ ವೈದ್ಯ. ಸತೀಶ್ ಮಂಚಿ ಎಂಬುವರ ಶವ ಪರೀಕ್ಷೆ ವರದಿ ನೀಡುವುದಕ್ಕೆ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಎನ್.ವೈ.ಸುನೀಲ್ ಅರ್ಜಿ ಸಲ್ಲಿಸಿದ್ದರು.
ವರದಿ ನೀಡುವುದಕ್ಕೆ ವೈದ್ಯರು ₹ 20,000 ಲಂಚದ ಬೇಡಿಕೆ ಇಟ್ಟಿದ್ದರು. ಹಣ ನೀಡುವಾಗ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಗುರುರಾಜ್, ಯೋಗೀಶ್, ಮಂಜುನಾಥ್, ಸುರೇಂದ್ರ, ಚನ್ನೇಶ್, ದೇವರಾಜ್ ಇತರೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.