Headlines

ಸಾಗರದಲ್ಲಿ ಆಪರೇಷನ್ ಸಿಂದೂರ ವಿಜಯ ತಿರಂಗಾ ಯಾತ್ರೆ-ಒಂದು ಕಿ.ಮೀ ಉದ್ದದ ತಿರಂಗಾ

ಪಾಕಿಸ್ಥಾನದ ಬೆಂಬಲಿತ ಉಗ್ರರನ್ನು ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ನಿರ್ನಾಮ ಮಾಡಿದ ಭಾರತೀಯ ಸೇನೆಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ನಾಗರಿಕ ವೇದಿಕೆ ವತಿಯಿಂದ ಸಾಗರದಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ಸಿಂದೂರ ವಿಜಯ ತಿರಂಗಾ ಯಾತ್ರೆ ಸುರಿಯುತ್ತಿದ್ದ ಮಳೆ ಯಲ್ಲಿಯೂ ಯಶಸ್ವಿ ಯಾಯಿತು.

ಸೋಮವಾರ ಸಂಜೆ ೫-೩೦ ಕ್ಕೆ  ಸಾಗರದ ಗಣಪತಿ ದೇವಸ್ಥಾನದಿಂದ ಬೃಹತ್ ವಿಜಯ ತಿರಂಗಾ ಯಾತ್ರೆ ಆರಂಭಗೊಂಡಿತು.ಒಂದು ಕಿ.ಮೀ ಉದ್ದದ ತಿರಂಗಾ ಹೊತ್ತುಕೊಂಡು ಸಾಗುತ್ತಿರುವ ಜೊತೆಗೆ ಒಂದೇ ಮಾತರಂ ಎಂಬ ಘೋಷಣೆ ಆಕರ್ಷಕ ಹಾಗೂ ಸ್ಪೂರ್ತಿದಾಯಕವಾಗಿತ್ತು.

ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿರಂಗಾ ಹೊತ್ತು ಸಾಗಿದರೇ ಎಡಭಾಗದಲ್ಲಿ ಮಾಜಿ ಸಚಿವ ಹೆಚ್.ಹಾಲಪ್ಪ ನವರು ತಿರಂಗಾ ಹೊತ್ತು ಸಾಗಿದರು.ಸುಮಾರು ೨ಸಾವಿರಕ್ಕೂ ಹೆಚ್ಚು ಜನರು ತಿರಂಗಾ ಹೊತ್ತು ಸಾಗುತ್ತಿ ರುವ ದೃರ್ಶ್ಯ ಅವಿಸ್ಮರಣೀಯವಾಗಿತ್ತು.

ಸಾಗರದಲ್ಲಿನ ಸೈನಿಕರು ಮತ್ತು ಮಾಜಿ ಸೈನಿಕರು ಬೃಹತ್ ವಿಜಯ ತಿರಂಗಾ ಯಾತ್ರೆ ಯಲ್ಲಿ ಹೆಮ್ಮೆಯಿಂದ ಹೆಜ್ಜೆ ಹಾಕಿದರು.ಎನ್‌ಸಿಸಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ವಿಜಯ ತಿರಂಗಾ ಯಾತ್ರೆ ಯಲ್ಲಿ ಆಕರ್ಷಕ ಹೆಜ್ಜೆ ಹಾಕಿದರು.

Leave a Reply

Your email address will not be published. Required fields are marked *