w
Headlines
Home » ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ರಾಕ್ಷಸರು

ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ರಾಕ್ಷಸರು

N66503015117477525466412ff22b597b7bb7cad7746ff4ce8aa7694274ae8b0717f1e42f700c90a643299c.jpg

ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ರಾಕ್ಷಸರು

ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ರಾಕ್ಷಸರು

ಮಕ್ಕಳಾಗಲಿಲ್ಲವೆಂದು ಸೊಸೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ರಾಕ್ಷಸರು

ಸೊಸೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿ ಮತ್ತವನ ಪೋಷಕರು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ (Belagavi crime news) ಅಥಣಿ ತಾಲೂಕಿನ ಮಲಬಾದ್​ ಗ್ರಾಮದಲ್ಲಿ ನಡೆದಿದೆ.

ರೇಣುಕಾ ಸಂತೋಷ ಹೊನಕಾಂಡೆ (27) ಕೊಲೆಯಾದ ಮೃತ ದುರ್ದೈವಿ. ಸೊಸೆಗೆ ಮಕ್ಕಳಾಗಲಿಲ್ಲವೆಂದು ಕಳೆದ ಶನಿವಾರದಂದು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆ ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ ಹೊನಕಾಂಡೆ, ಅತ್ತೆ ಜಯಶ್ರೀ ಹೊನಕಾಂಡೆ ಎಂಬುವರನ್ನು ಅಥಣಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಿನಾಂಕ 17.05.2025 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಮಲಬಾದಿ ಗ್ರಾಮದ ಹತ್ತಿರ ಆರೋಪಿಗಳಾದ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಇವರು ತಮ್ಮ ಮೋಟಾರ್ ಸೈಕಲ್ ಮೇಲೆ ಅವರ ಸೊಸೆ ರೇಣುಕಾ ಸಂತೋಷ್ ಹೊನಕಾಂಡೆಯನ್ನು ಕೂರಿಸಿಕೊಂಡು ಹೋಗಿ, ರಸ್ತೆ ಮೇಲೆ ರೇಣುಕಾರನ್ನು ಕೆಳಕ್ಕೆ ಕೆಡವಿದ್ದಾರೆ. ನಂತರ ಅವಳ ತಲೆಗೆ ಕಲ್ಲಿನಿಂದ ಜಜ್ಜಿ, ಕುತ್ತಿಗೆಗೆ ಸೀರೆಯಿಂದ ಬಿಗಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಇದಾದ ನಂತರ ಆರೋಪಿತ ಹಂತಕರು ದ್ವಿಚಕ್ರ ವಾಹನಕ್ಕೆ ಸೀರೆ ತಗುಲಿ ಬಿದ್ದು ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದರು. ನಂತರ ಅವಳನ್ನು ಕೊಲೆ ಮಾಡಿದ ಸ್ಥಳದಿಂದ ಸುಮಾರು 120 ಅಡಿ ದೂರದವರೆಗೆ ಬೈಕ್​ನಿಂದ ಎಳೆದುಕೊಂಡು ಹೋಗಿ, ಅವಳು ಬೈಕ್ ಮೇಲಿನಿಂದ ಬಿದ್ದು ಸತ್ತುಹೋಗಿದ್ದಾಳೆ ಎಂಬ ಅಪಘಾತದ ದೃಶ್ಯ ಸೃಷ್ಟಿಸಿದ್ದಾರೆ.

ಆದರೆ ಪೊಲೀಸ್‌ ತನಿಖೆಯಲ್ಲಿ ಸತ್ಯ ಬಯಲಾಗಿದೆ. ಕೊಲೆ ಎಸಗಲಾಗಿದ್ದು, ಇದರಲ್ಲಿ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಹೊನಕಾಂಡೆ ಕೈವಾಡ ಕಂಡುಬಂದಿದ್ದರಿಂದ ಮತ್ತು ಕೊಲೆಗೆ ಆರೋಪಿತರ ಮಗ ಸಂತೋಷ್ ಬೆಂಬಲ ನೀಡಿದ್ದು ತಿಳಿದು ಬಂದಿದೆ. ಅಥಣಿ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.