w
Headlines

ರಂಜದಕಟ್ಟೆಯಲ್ಲಿ ಮೆಸ್ಕಾಂ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ !?

ತೀರ್ಥಹಳ್ಳಿ: ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಂಜದಕಟ್ಟೆಯ ಭೀಮನ ಕಟ್ಟೆ ತೂಗು ಸೇತುವೆಯ ಬಳಿ ವಿದ್ಯುತ್ ತಂತಿಯೊಂದು ನೆಲದ ಮೇಲೆ ಬಿದ್ದಿದ್ದನ್ನು ಗಮನಿಸದೆ ರೈತ ಮಹಿಳೆಯೊಬ್ಬರು ಜಾನುವಾರಿಗೆ ಹುಲ್ಲು ತರುವಾಗ ವಿದ್ಯುತ್ ಶಾಕ್ ತಗುಲಿ ಮೃತರಾಗಿರುವ ಘಟನೆ ಜರುಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳಲ್ಲಿ ತಂತಿ ಕೆಳಗೆ ಜೋತು ಬಿದ್ದಿರುತ್ತವೆ ಅದನ್ನು ಗಮನಿಸದೆ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಮಳೆಗಾಲ ಪ್ರಾರಂಭವಾಗುತ್ತಿದ್ದು ಕೆಲವು ತಂತಿಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿ…

Read Full News

ರಿಪ್ಪನ್‌ಪೇಟೆಯಲ್ಲಿ ಭೀಕರ ಬೈಕ್ ಅಪಘಾತ : ಓರ್ವ ಸಾವು,ಇನ್ನೊಬ್ಬನ ಸ್ಥಿತಿ ಗಂಭೀರ

ರಿಪ್ಪನ್ ಪೇಟೆ : ಸಮೀಪದ ಗವಟೂರು ಕೆರೆ ಬಳಿ 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಹೊಸನಗರ ಕಡೆಯಿಂದ ರಿಪ್ಪನ್ ಪೇಟೆ ಕಡೆಗೆ ಬರುತ್ತಿದ್ದ (KA 15 W 3356) ಟಿವಿಎಸ್ ಬೈಕ್ ಹಾಗೂ ರಿಪ್ಪನ್ ಪೇಟೆಯಿಂದ ಹೊಸನಗರ ಕಡೆಗೆ ತೆರಳುತ್ತಿದ್ದ ಟಿವಿಎಸ್ ಬೈಕ್(KA 15 ED 5303) ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಅಪಘಾತದ ರಭಸಕ್ಕೆ ವ್ಯಕ್ತಿಯೊಬ್ಬ  ಮೃತಪಟ್ಟಿದ್ದಾನೆ.ಇನ್ನೊರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ…

Read Full News

ಸಂಸ್ಕೃತಿಯೆಡೆಗೆ ಸೌಹಾರ್ದ ನಡಿಗೆ ಪಾದಯಾತ್ರೆಗೆ ನಾದಬ್ರಹ್ಮ ಹಂಸಲೇಖ ಚಾಲನೆ :

ತೀರ್ಥಹಳ್ಳಿ : ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ  ನಡೆಯುತ್ತಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು. ಕುವೆಂಪು ಜನ್ಮಸ್ಥಳವಾದ ಕುಪ್ಪಳಿಯಿಂದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಯುವ ಪಾದಯಾತ್ರೆಗೆ ಹಂಸಲೇಖ ಚಾಲನೆ ಕೊಟ್ಟರು ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಹಂಸಲೇಖ ನಮ್ಮ ನಾಡೇ ಒಂದು ಧ್ವಜ. ಇದೀಗ ನಾಡು ನುಡಿಗೆ ಅವಮಾನವಾಗುತ್ತಿದೆ. ಕನ್ನಡದ ನಡೆ ಮುರಿಯುವವರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ. ಭಾಷೆ ವಿಷಯ ಬಂದಾಗ ನಾವು ತಮಿಳರನ್ನು ಅನುಸರಿಸಬೇಕು. ತಮಿಳರು ಭಾಷೆಗೆ…

Read Full News

ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ :

ರಿಪ್ಪನ್ ಪೇಟೆ : ಇಲ್ಲಿನ ವಿನಾಯಕ ವೃತ್ತದಲ್ಲಿ ತಡರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.ಅಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಶಿವಮೊಗ್ಗದಿಂದ ಹೊಸನಗರಕ್ಕೆ ತೆರಳುತಿದ್ದ( KA15 N 6258)  ಮಾರುತಿ ಎರ್ಟಿಗಾ ಕಾರು ಹಾಗೂ ತೀರ್ಥಹಳ್ಳಿಯಿಂದ ಸಾಗರಕ್ಕೆ ತೆರಳುತಿದ್ದ (KA 02 AE 9621)ಇನ್ನೊವಾ ಕಾರುಗಳ ನಡುವೆ ವಿನಾಯಕ ವೃತ್ತದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ.ಆಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಎರಡು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಅದೃಷ್ಟವಶಾತ್ ಯಾರಿಗೂ ಯವುದೇ ಗಂಭೀರ ಗಾಯಗಳಾಗಿರುವುದಿಲ್ಲ.ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿದ್ದಾರೆ….

Read Full News

ದೇವಸ್ಥಾನ ಹುಂಡಿಗೆ ಕನ್ನ ಹಾಕಿದ ಇಬ್ಬರು ಖದೀಮರ ಬಂಧನ : ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ ವಶ

ಭದ್ರಾವತಿ : ಕುಮರಿ ನಾರಾಯಣಪುರ ಗ್ರಾಮದ ಚೌಡಮ್ಮ ದೇವಸ್ಥಾನದ‌ ಹುಂಡಿಗೆ ಕನ್ನ ಹಾಕಿದ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ. ಭದ್ರಾವತಿಯ ಹೊಸಮನೆ ನಿವಾಸಿ ವಸಂತರಾಜು ಅಲಿಯಾಸ್ ವಸಂತ(37), ಬೇಡರ ಹೊಸಳ್ಳಿಯ ಶ್ವೇತಾ ಅಲಿಯಾಸ್ ಆಸ್ಮಾ(32) ಬಂಧಿತರು. ಚೌಡಮ್ಮ ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳಗಡೆ ಇದ್ದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು ₹20,000 ರಿಂದ ₹30,000 ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ನೇತೃತ್ವದ ‌ತಂಡ ಕಾರ್ಯಾಚರಣೆ ‌ಕೈಗೊಂಡು…

Read Full News

ಪದವಿ ತರಗತಿಯಲ್ಲಿ ರ‍್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಸನ್ಮಾನ :

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಗ್ರಾಮದ ಇಬ್ಬರು ವಿದ್ಯಾರ್ಥಿನಿಯರು ಈ ಬಾರಿಯ ಕುವೆಂಪು ವಿಶ್ವವಿದ್ಯಾನಿಲಯ ನಡೆಸಿದ  ಪದವಿ ಪರೀಕ್ಷೆಯಲ್ಲಿ ಅಂತಿಮ ವರ್ಷದ ಕಲಾ ವಿಭಾಗದಲ್ಲಿ ರ‍್ಯಾಂಕ್ ಗಳಿಸಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ರಿಪ್ಪನ್‌ಪೇಟೆ ಪದವಿ‌ ಕಾಲೇಜಿಗೆ ಎರಡು ರ‍್ಯಾಂಕ್ ತಂದುಕೊಟ್ಟಂತಹ ಕಾವ್ಯ ಸಿ ಹಾಗೂ ಸಿಂಧು ಜೆ ರವರಿಗೆ ಕೂರಂಬಳ್ಳಿ ಗ್ರಾಮದ ಕಾವ್ಯ ಸಿ ರವರ ಸ್ವಗೃಹದಲ್ಲಿ ಇಬ್ಬರು…

Read Full News

ಜಿಂಕೆ ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಮಾಲು ಸಮೇತ ಸೆರೆ :

ಅರಣ್ಯ ಸಂಚಾರಿ ದಳದ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರವಾಗಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟದಲ್ಲಿ ತೊಡಗಿದ್ದಂತಹ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಿರಿಗೆರೆ ರಸ್ತೆಯ ಆಯನೂರು ಕೆರೆ ಬಳಿ ಜಿಂಕೆ ಕೊಂಬುಗಳ ಸಾಗಾಟದಲ್ಲಿ ತೊಡಗಿದ್ದ ಸಿರಿಗೆರೆ ನಿವಾಸಿ ಇಸ್ಮಾಯಿಲ್,ಹಾರನಹಳ್ಳಿ ನಿವಾಸಿ ನಯಾಜುಲ್ಲಾ ರನ್ನು ಬಂಧಿಸಿ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯನ್ನು ಚಂದ್ರಕಾಂತ್ ಐಪಿಎಸ್ ಎಸ್ಪಿ ಸಿಐಡಿ ಅರಣ್ಯ ಘಟಕ ಮಡಿಕೇರಿ ಇವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್  ಸಬ್ ಇನ್ಸ್ಪೆಕ್ಟರ್…

Read Full News

ತೀರ್ಥಹಳ್ಳಿಯಲ್ಲಿ ನೂತನ ಜೆಡಿಎಸ್ ಕಚೇರಿ ಉದ್ಘಾಟನೆ :

ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಸೋಮವಾರ ಜೆಡಿಎಸ್ ನ ನೂತನ ಶಾಖೆಯನ್ನು ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್ ಉದ್ಘಾಟನೆ ಮಾಡಿದರು. ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ತೀರ್ಥಹಳ್ಳಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸೂಕ್ತ ರೀತಿಯಲ್ಲಿ ಸಂಘಟಿಸುವ ಮೂಲಕ 2023 ವಿಧಾನಸಭಾ ಸಾರ್ವರ್ತಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು  ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಸೇರಿದಂತೆ ಎಲ್ಲರು ಶ್ರಮಿಸಬೇಕು ಎಂದರು.   ನಂತರ…

Read Full News

ನಾಳೆ ಆಯೋಜಿಸಿರುವ ಕುಪ್ಪಳ್ಳಿಯಿಂದ – ತೀರ್ಥಹಳ್ಳಿ ಪಾದಯಾತ್ರೆ ಬಗ್ಗೆ ಕಿಮ್ಮನೆ ರತ್ನಾಕರ್ ಹೇಳಿದ್ದೇನು??? ಈ ಸುದ್ದಿ ನೋಡಿ

ಬುಧವಾರ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ಮತ್ತು ರೋಹಿತ್ ಚಕ್ರತೀರ್ಥ ವಿರುದ್ಧ ಜೂ.15ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಯಲ್ಲಿದ್ದು, ಪಠ್ಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಬರಗೂರು ರಾಮಚಂದ್ರಪ್ಪ ಅವರ ಪಠ್ಯವನ್ನೇ ಮುಂದುವರಿಸಬೇಕು. ಈ ಪಾದಯಾತ್ರೆ ಪಕ್ಷಾತೀತವಾಗಿ ನಡೆಯಲಿದ್ದು ಎಲ್ಲಾ ಪಕ್ಷದವರು ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಬಹುದು ಎಂದರು. ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಕುಂ.ವೀರಭದ್ರಪ್ಪ,…

Read Full News

ಕಿಮ್ಮನೆ ರತ್ನಾಕರ್ ನೇತ್ರತ್ವದ ಪಾದಯಾತ್ರೆಗೆ ಬೆಂಬಲ ಸೂಚಿಸಿದ ಮಂಜುನಾಥ್ ಗೌಡ :ಕಿಮ್ಮನೆ & ಆರ್ ಎಂಎಂ ಅಭಿಮಾನಿಗಳಲ್ಲಿ ಚಿಮ್ಮಿದ ಉತ್ಸಾಹ

ತೀರ್ಥಹಳ್ಳಿ : ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ಎಡವಟ್ಟುಗಳ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನೆಡೆಯುತ್ತಿದ್ದು ಸಾಹಿತ್ಯದ ಬಗ್ಗೆ ಸರ್ಕಾರ ತೋರಿರುವ ಅಸಡ್ಡೆಯನ್ನು ಖಂಡಿಸಿ ಜೂನ್ 15 ರ ಬುಧವಾರ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನೆಡೆಯುವ ಕುಪ್ಪಳ್ಳಿಯ ಕವಿಶೈಲದಿಂದ ಪಾದಯಾತ್ರೆಗೆ ನಾನು ಸಹ ಬೆಂಬಲ ಕೊಡುತ್ತಿದ್ದೇನೆ ಎಂದು ತಿಳಿಸಿದರು. ಪಟ್ಟಣದ ಬೆಟ್ಟಮಕ್ಕಿಯ ತಮ್ಮ ಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ರಾಷ್ಟ್ರಕವಿ ಎಂದೇ ಹೆಸರುವಾಸಿಯಾಗಿರುವ ಕುವೆಂಪು ಅವರ ಗೀತೆಯನ್ನು ನಾವೆಲ್ಲರೂ ನಾಡಗೀತೆಯಾಗಿ ಒಪ್ಪಿಕೊಂಡಿದ್ದೆವೆ. ಆದರೆ ಅಧಿಕೃತ…

Read Full News

ಪತ್ರಕರ್ತರ ಆರೋಗ್ಯ ಚೆನ್ನಾಗಿದ್ದರೆ ಸುದ್ದಿ ಕೂಡಾ ಆರೋಗ್ಯಕರವಾಗಿರುತ್ತದೆ : ಎಸ್.ರುದ್ರೇಗೌಡ

ಶಿವಮೊಗ್ಗ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ನಗರದ ಮೇಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆ ಹಾಗೂ ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಸಹಯೋಗದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್‌ ಸದಸ್ಯರಾದ ಎಸ್ ರುದ್ರೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಿತ್ಯ ಒತ್ತಡದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂತಹದೊಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ನಿಜಕ್ಕೂ ಒಳ್ಳೆಯ…

Read Full News

ಮೀನುಗಾರರ ಮೇಲೆ ಹಲ್ಲೆ ಮಾಡಿದ್ದ ನಿಹಾಲ್ ಕೋಬ್ರಾ & ಗ್ಯಾಂಗ್ ಬಂಧನ

ತೀರ್ಥಹಳ್ಳಿ : ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಸರದಲ್ಲಿ ಮಂಡಗದ್ದೆ ಕ್ಯಾಂಪ್ ಮೀನುಗಾರರ ಮೇಲೆ ಕಳೆದ ಐದು ದಿನದ ಹಿಂದೆ ಹಲ್ಲೆ ನೆಡೆಸಿದ್ದ ನಿಹಾಲ್ ಕೋಬ್ರಾನಾ  ಬಂಧನವಾಗಿದೆ. ಇತ್ತೀಚಿಗೆ ಅನೇಕ ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ನಿಹಾಲ್ ಕೋಬ್ರಾ ಮತ್ತು ಅವನ ಸಹಚರರು ಮಂಡಗದ್ದೆ ಕ್ಯಾಂಪ್ ಯುವಕರ ಮೇಲೆ ಹಲ್ಲೆ ನೆಡೆಸಿ ಕಣ್ತಪ್ಪಿಸಿಕೊಂಡಿದ್ದರು. ಕಳೆದ 5 ದಿನಗಳಿಂದ ಹಗಲು ರಾತ್ರಿ ನಿರಂತರವಾಗಿ ಕೋಬ್ರಾನಾ ಬೇಟೆಯಾಡಿದ ತೀರ್ಥಹಳ್ಳಿ ಪೊಲೀಸರು ಬೆಂಗಳೂರು ಸೇರಿದಂತೆ ನಾನಾ ಭಾಗದಲ್ಲಿ ಓಡಾಡಿಕೊಂಡು…

Read Full News

ಸಾಗರದ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ತಡರಾತ್ರಿ ದಿಡೀರ್ ಪ್ರತಿಭಟನೆ :

ವಸತಿ ಶಾಲೆಯ ಪ್ರಾಂಶುಪಾರ ವಿರುದ್ಧ ವಿದ್ಯಾರ್ಥಿಗಳು ದಿಡೀರನೇ ಸಾಗರ ತಾಲೂಕು ಕಚೇರಿಯ ಎದುರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಸಾಗರದಲ್ಲಿ ನಡೆದಿದೆ. ಜೋಸೆಫ್ ನಗರದ ಅಟಲ್ ಬಿಹಾರಿ ವಾಜಪೇಯಿ ವಿದ್ಯಾರ್ಥಿನಿಲಯದ ಸುಮಾರು 60 ರಿಂದ 70 ಜನ ವಿದ್ಯಾರ್ಥಿಗಳು ಸುಮಾರು 10 ರಿಂದ 11-30 ರವರೆಗೆ ಸಾಗರ ತಾಲೂಕು ಕಚೇರಿ ಎದುರು ಬಂದು ದಿಡೀರನೇ ಪ್ರತಿಭಟನೆ ನಡೆಸಿದರು. ವಸತಿ ಶಾಲೆಯ ಪ್ರಾಂಶುಪಾಲರಾದ ರತ್ನಮ್ಮರವರು ಹಾಸ್ಟೆಲ್ ವಾರ್ಡನ್ ಐಸಾಕ್ ಅಹ್ಮದ್ ಮೇಲೆ ಹಲ್ಲೆ ಮಾಡಿದ್ದಾರೆ. ಬೈಯ್ಯುತ್ತಾರೆ ಎಂಬ ಆರೋಪವನ್ನು…

Read Full News

ರಿಪ್ಪನ್‌ಪೇಟೆಯಲ್ಲಿ ನೂತನ ಕಿರಣ್ ಹೆಲ್ತ್ ಕೇರ್ ಪ್ರಾರಂಭ : ಲಕ್ಷಾಂತರ ಸಂಬಳ ತಿರಸ್ಕರಿಸಿ ಹುಟ್ಟೂರಲ್ಲೇ ಸೇವೆ ಸಲ್ಲಿಸಲು‌ ಮುಂದಾದ MBBS ವೈದ್ಯ

ರಿಪ್ಪನ್ ಪೇಟೆ: ಸಮಾಜದಲ್ಲಿನ ದುರ್ಬಲ ವರ್ಗದವರು ಮತ್ತು ಬಡವರ ಉತ್ತಮ ಆರೋಗ್ಯಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದೇನೆ ಎಂದು ಡಾ. ಕಿರಣ್ ಶಾಸ್ತ್ರಿ ಹೇಳಿದರು. ರಿಪ್ಪನ್ ಪೇಟೆ ಪಟ್ಟಣ ವಿನಾಯಕ ವೃತ್ತದಲ್ಲಿ ನೂತನವಾಗಿ ಆರಂಭವಾಗಿರುವ ಕಿರಣ್ ಶಾಸ್ತ್ರಿ ಹೆಲ್ತ್ ಕೇರ್  ನಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು ವೈದ್ಯಕೀಯ ವೃತ್ತಿಯು ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಾಗಿದ್ದು, ಸಮಾಜದಲ್ಲಿನ ನಾಗರಿಕರಿಗೆ ಉತ್ತಮ ಆರೋಗ್ಯದ ಅರಿವನ್ನು ಮೂಡಿಸಲು ಈ ವೃತ್ತಿ ಸಹಕಾರಿಯಾಗಿದೆ ಎಂದ ಅವರು ರಿಪ್ಪನ್ ಪೇಟೆ…

Read Full News

ಖಾಸಗಿ ಪ್ರಭಾವಿ ವ್ಯಕ್ತಿಗಳ ಮೋಸದ ಜಾಲಕ್ಕೆ ಮನೆ ಕಳೆದುಕೊಂಡು ಬೀದಿ ಪಾಲಾಗಿರುವ 65 ರ ವೃದ್ದೆ :

ಹೊಸನಗರ : ಮಾನಸಿಕ ಅಸ್ವಸ್ಥ ಮಗನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವೃದ್ದ ಮಹಿಳೆಯೊಬ್ಬರಿಗೆ ಪ್ರಭಾವಿ ಖಾಸಗಿ ವ್ಯಕ್ತಿಯೊಬ್ಬ ಬೆದರಿಸಿ ಅವರ ಆಸ್ತಿ ಕಬಳಿಸಿ ಮನೆಯಿಂದ ಹೊರದಬ್ಬಿರುವ ಘಟನೆ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದಿದೆ. ಬ್ರಹ್ಮೇಶ್ವರ ಗ್ರಾಮದ ಶಾರದಮ್ಮ ಎಂಬ 65 ರ ವೃದ್ದೆ 30 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದು, ಮೊದಲನೆ ಮಗ ವೀರಪ್ಪ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ.ಮಾನಸಿಕ ಅಸ್ವಸ್ಥನಾಗಿರುವ ಎರಡನೇ ಮಗ ಜಗದೀಶ್ ಜೊತೆ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಬ್ರಹ್ಮೇಶ್ವರದ ವೃದ್ದೆಯ…

Read Full News

ಹಸು ಮೈ ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದ ಬಾಲಕನ ಮನೆಗೆ ಬೇಳೂರು ಭೇಟಿ :

ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ ಇತ್ತೀಚಿಗೆ ಹಸು ಮೈ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಾಲಕನ ಮನೆಗೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ರವರು ಭೇಟಿ ನೀಡಿದರು. ಇಂದು ಮೃತ ಬಾಲಕನ ಮನೆಗೆ ಭೇಟಿ ನೀಡಿ ಮೃತ ಬಾಲಕನ ಪೋಷಕರಾದ ರಮೇಶ್ ಹಾಗೂ ಸುಧಾ ದಂಪತಿಗಳಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದರು. ಈ ಸಂಧರ್ಭದಲ್ಲಿ ಪ್ರಶಾಂತ್,ಯೋಗೆಶ್ ,ರಮೇಶ್ , ದೇವೆಂದ್ರಪ್ಪ ,ಪೃಥ್ವಿ ಹಾಗೂ ಇನ್ನಿತರರಿದ್ದರು….

Read Full News

ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲ್ಲಲು ಸಿದ್ದರಾಮಯ್ಯನವರ ಕಾಣಿಕೆಯೂ ಇದೆ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮೂವರ ಗೆಲುವು ಸಾಧಿಸಿದ್ದಾರೆ. ಮೋದಿ ಅವರಿಗೆ ರಾಜ್ಯ ನಿಮ್ಮ ಜೊತೆ ಇದೆ ಎನ್ನುವ ಸಂದೇಶ ಈ ಫಲಿತಾಂಶದಿಂದ ರವಾನೆಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ರಾಜ್ಯಸಭೆ ಚುನಾವಣಾ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೂರನೇ ಅಭ್ಯರ್ಥಿ ಗೆಲ್ಲಲ್ಲು ಸಿದ್ದರಾಮಯ್ಯ ಪಾತ್ರ ಪ್ರಮುಖವಾಗಿದೆ. ಮೂರನೇ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ನೇರ ಕಾರಣ. ಈ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಪಕ್ಷವನ್ನು ಯಾರೂ…

Read Full News

ಶಿವಮೊಗ್ಗದಲ್ಲಿ ಪ್ರಾರಂಭವಾಗದ ಆಯುಷ್ ವಿಶ್ವವಿದ್ಯಾಲಯ : ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರ ಖಂಡನೆ

ಶಿವಮೊಗ್ಗ ನಗರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮಂಜೂರು ಮಾಡಿದ್ದು, ದಿನಾಂಕ: 17-022022ರಂದು ರಾಜ್ಯಪತ್ರದಲ್ಲಿ ಮಂಜೂರಾತಿ ಆದೇಶ ಪ್ರಕಟವಾಗಿದ್ದು, ಹಲವು ತಿಂಗಳು ಕಳೆದರೂ ಆಯುಷ್ ವಿವಿ ಪ್ರಾರಂಭವಾಗದೇ ಇರುವುದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಮುಖಂಡರಾದ ಕಲ್ಲೂರು ಮೇಘರಾಜ್ ಮತ್ತು ಆರ್ ಎ ಚಾಬುಸಾಬ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ಸಮೀಪದ ಸೋಗಾನೆಯಲ್ಲಿ ಅಂದಿನ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರ ಶಿಫಾರಸ್ಸಿನ ಮೇರೆಗೆ…

Read Full News

ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸದ ಶಾಸಕ ಹರತಾಳು ಹಾಲಪ್ಪ : ಬೇಳೂರು ಗೋಪಾಲಕೃಷ್ಣ ಆರೋಪ.

ರಿಪ್ಪನ್ ಪೇಟೆ: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುಷ್ಠಾನಗೊಂಡಿರುವ ಸರಕಾರಿ ಯೋಜನೆಗಳು ಜಾರಿಗೊಳ್ಳುತ್ತಿಲ್ಲ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಾಗರ ಪಟ್ಟಣದ ಗಣಪತಿ ಕೆರೆ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಪಟ್ಟಣದ ಗ್ರಾಮಪಂಚಾಯಿತಿಯ ಕುವೆಂಪು ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಗರ  ವಿಧಾನಸಭಾ ಕ್ಷೇತ್ರದಲ್ಲಿ ಉದ್ಯೋಗಖಾತ್ರಿ ಯೋಜನೆ ಹಾಗೂ ಆಶ್ರಯ ಯೋಜನೆಗಳು ಕಾಣೆಯಾಗಿದ್ದು ಕಳೆದ ಕೆಲವು ವರ್ಷಗಳಿಂದ 94ಸಿ ಅಡಿಯಲ್ಲಿ…

Read Full News

ಶಿವಮೊಗ್ಗದ ಗಾಂಧಿಬಜಾರ್ ನಲ್ಲಿ ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು :

ಶಿವಮೊಗ್ಗ : ಗಾಂಧಿ ಬಜಾರ್​ನ ಮಾರ್ಕೆಟ್​ನಲ್ಲಿ ಚಾಕುವಿನಿಂದ ಇರಿತಕ್ಕೆ ಒಳಗಾಗಿದ್ದ ಸೆಂಧಿಲ್ ಕುಮಾರ್  ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಒಂಬತ್ತು ತಿಂಗಳ ಹಿಂದೆ  ಸೆಂಧಿಲ್ ನ ಸ್ನೇಹಿತ ಸಂತೋಷ್ (ಜೋಗಿ ಸಂತು) ವಿನ ಜೊತೆಯಲ್ಲಿ ಹಣದ ವ್ಯವಹಾರದ ವಿಚಾರವಾಗಿ ಜಗಳವಾಗಿದ್ದು ಆ ಕಾರಣಕ್ಕೆ ಸೆಂಧಿಲ್ ಮೇಲೆ ಅಟ್ಯಾಕ್  ಮಾಡಲಾಗಿತ್ತು. ಈ ಅಟ್ಯಾಕ್ ನಿಂದ ಗಾಯಗೊಂಡಿದ್ದ  ಸೆಂಥಿಲ್ ನನ್ನ​ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಹೋಗಿದ್ದರು….

Read Full News

ಸಾಗರ ನಗರಸಭೆ ವಿರುದ್ದ ಪ್ರತಿಭಟನೆ ನಡೆಸಿದ್ದ ಹೋರಾಟಗಾರನಿಗೆ ಪೌರಕಾರ್ಮಿಕ ಸಂಘದ ಅಧ್ಯಕ್ಷರಿಂದ ಧಮ್ಕಿ : ಆಡಿಯೋ ವೈರಲ್

ಸಾಗರ: ಚುನಾಯಿತ ಪ್ರತಿನಿಧಿಗೆ ಗೌರವ ಕೊಡದ ನಗರಸಭೆ ಆಡಳಿತ ವೈಖರಿಯನ್ನು ಖಂಡಿಸಿ ಬುಧವಾರ ನಗರಸಭಾ ಕಾಂಗ್ರೆಸ್ ಸದಸ್ಯೆ ಮಧುಮಾಲತಿ ಪೌರಾಯುಕ್ತರ ಕೊಠಡಿ ಎದುರು ಏಕಾಂಗಿ ಧರಣಿ ನಡೆಸಿ, ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದರು ಈ ಸಂಧರ್ಭದಲ್ಲಿ ಅವರಿಗೆ ಬೆಂಬಲಿಸಿದ ಹೋರಾಟಗಾರ ಅನ್ವರ್ ಭಾಷಾ ರವರಿಗೆ ನಗರಸಭೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ನಾಗರಾಜ್ ರವರು ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಏಕೋ ಏನೋ ಇತ್ತೀಚೆಗೆ ಸಾಗರ ನಗರಸಭೆ ಜಿಲ್ಲೆಯಲ್ಲಿ…

Read Full News

ರಿಪ್ಪನ್‌ಪೇಟೆಯ ನೂತನ ಹೈಟೆಕ್ ಶೌಚಾಲಯ ಲೋಕಾರ್ಪಣೆ :

ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ವೃತ್ತದ ಸಮೀಪ ಸ್ಥಳೀಯ ಗ್ರಾಮಾಡಳಿತ ನೂತನವಾಗಿ ನಿರ್ಮಿಸಿರುವ ಸಮುದಾಯ ಶೌಚಾಲಯವನ್ನು ಗುರುವಾರ ಗ್ರಾಪಂ ಅಧ್ಯಕ್ಷರಾದ ಮಂಜುಳ ಕೇತಾರ್ಜಿ ರಾವ್ ರವರು ಸರಳ ಸಮಾರಂಭದ ಮೂಲಕ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷೆ  ಮಂಜುಳ ಕೇತಾರ್ಜಿ ರಾವ್ ದುರಸ್ಥಿಯಾಗಿದ್ದ ಹಳೆಯ ಶೌಚಾಲಯವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಯೋಜನೆಯನ್ನು ಗ್ರಾಮ ಪಂಚಾಯತಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಅನೇಕ ಅಡೆತಡೆಗಳು ಎದುರಾದವು ಎಂದರು. ಗ್ರಾಮ ಪಂಚಾಯತಿಯ 15 ಲಕ್ಷ ರೂ. ಅನುದಾನದಲ್ಲಿ ಶೌಚಾಲಯವು ನಿರ್ಮಾಣಗೊಂಡಿದ್ದು, ಮಹಿಳೆ…

Read Full News

ಕಿಡ್ನಿ ಸಂಬಂಧಿತ ಚಿಕಿತ್ಸೆಗಾಗಿ ಶಿವಮೊಗ್ಗದ ವಿದ್ಯಾರ್ಥಿನಿಯನ್ನು ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಶಿಫ್ಟ್ :

ಭದ್ರಾವತಿಯ18 ವರ್ಷದ ರಾಧಿಕ ಎಂಬ ವಿದ್ಯಾರ್ಥಿನಿಗೆ ತುರ್ತು ಲಿವರ್ ಕಸಿ ಅವಶ್ಯಕತೆ ಇದ್ದ ಹಿನ್ನಲೆಯಲ್ಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಜೀರೋ ಟ್ರಾಫಿಕ್ ನಲ್ಲಿ ಕರೆದೊಯ್ಯಲಾಯಿತು. ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ಮೂರು ಖಾಸಗಿ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಈ ಮೊದಲು ಭದ್ರಾವತಿಯ ನಿರ್ಮಲ ಆಸ್ಪತ್ರೆಗೆ ರಾಧಿಕಾರನ್ನ ಸೇರಿಸಲಾಗಿತ್ತು. ರಕ್ತ ಪರೀಕ್ಷೆ ನಡೆಸಿದ ನಂತರ ಯುವತಿಯ ಖಾಯಿಲೆ ಬಗ್ಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಐದು ದಿನದ ನಂತರ…

Read Full News

ಕುಡಿದ ಅಮಲಿನಲ್ಲಿ ವ್ಯಕ್ತಿಯ ಮೇಲೆ ಮಾರಾಣಂತಿಕ ಹಲ್ಲೆ ಮಾಡಿದ ಯುವಕರು : ಕುಡುಕರ ಹಾವಳಿಯಿಂದ ಬೆಚ್ಚಿ ಬೀಳುತ್ತಿರುವ ಜನತೆ!!!!! ರಿಪ್ಪನ್‌ಪೇಟೆಯ ಖಾಲಿ ಲೇಔಟ್ ಗಳೇ ಕುಡುಕರ ಸಾಮ್ರಾಜ್ಯ…!!!

ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಸಿದ್ದಪ್ಪನಗುಡಿಯಲ್ಲಿ ಮದ್ಯಪಾನ ಮಾಡುತ್ತಿದ್ದ ಯುವಕರಿಗೆ ಬುದ್ದಿ ಹೇಳಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪಟ್ಟಣದ ಸಿದ್ದಪ್ಪನಗುಡಿ ಸಮೀಪದಲ್ಲಿ ಕೃಷಿಕರೊಬ್ಬರು ತನ್ನ ಜಮೀನಿನಲ್ಲಿ ಶುಂಠಿ ನೆಡುವ ಕಾರ್ಯದಲ್ಲಿದ್ದಾಗ ಅವರದೇ ಜಮೀನಿನಲ್ಲಿ ಶಿವಮೊಗ್ಗ ಮೂಲದ ಅಮಾನುಲ್ಲಾ ಮತ್ತು ಕಿರಣ್ ಎಂಬ ಯುವಕರು ಮದ್ಯಪಾನ ಮಾಡುತಿದ್ದರು.ಮದ್ಯಪಾನ ಮಾಡಿ ಬಾಟಲ್ ಜಮೀನಿನಲ್ಲಿ ಒಡೆಯಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆ ಸಂಧರ್ಭದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯು ಕೂಗಿಕೊಂಡ…

Read Full News

ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣ ವರದಿಯನ್ನು ಸರಕಾರ ತಿರಸ್ಕರಿಸಿಲಿ : ಬಿ ಸ್ವಾಮಿರಾವ್

ರಿಪ್ಪನ್‌ಪೇಟೆ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪಠ್ಯಪುಸ್ತಕಗಳ ಪರಿಷ್ಕರಣ ವರದಿಯನ್ನು  ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಹೇಳಿದರು. ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ  ಜಗಜ್ಯೋತಿ ಬಸವಣ್ಣ ಮತ್ತು ರಾಷ್ಟ್ರಕವಿ ಕುವೆಂಪು ಹಾಗೂ ನಾರಾಯಣಗುರುಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಅವಮಾನಿಸಿರುವ ಸಂಗತಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು . ರಾಷ್ಟ್ರಕವಿ ಕುವೆಂಪು ಮತ್ತು ಬಸವಣ್ಣ, ನಾರಾಯಣ ಗುರುಗಳ ಬಗ್ಗೆ ಇತಿಹಾಸವನ್ನರಿಯದ ರೋಹಿತ್ ಚಕ್ರತೀರ್ಥ ಮತ್ತು ತಂಡ ಸಮಾಜದಲ್ಲಿನ …

Read Full News

ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಚಾಕು ಇರಿತ : ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ಕೊಟ್ಟ ಎಸ್ ಪಿ ಲಕ್ಷ್ಮಿಪ್ರಸಾದ್

ಶಿವಮೊಗ್ಗ : ನಿನ್ನೆ ಸಂಜೆ ಏಳು ಮೂವತ್ತರ ಸುಮಾರಿಗೆ ಶಿವಮೊಗ್ಗದ ಗಾಂಧಿಬಜಾರ್​ನಲ್ಲಿರುವ ಚೋರ್​ಬಜಾರ್​ ಬಟ್ಟೆಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕ ಸೆಂಥಿಲ್​ಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಘಟನೆಯ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ. 43 ವರ್ಷದ ಸೆಂಥಿಲ್​ ಎಂಬಾತನಿಗೆ ಚಾಕುವಿನಿಂದ ನಾಲ್ಕೈದು ಕಡೆ ಇರಿಯಲಾಗಿದೆ. ಅವರನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. 307 ಸೆಕ್ಷನ್​ ಅಡಿಯಲ್ಲಿ ಕೇಸ್​ ಆಗಿದ್ದು, ಜೋಗಿ ಸಂತು, ರಮೇಶ್, ಲೋಕೇಶ್ ಹಾಗೂ ಇನ್ನೊಬ್ಬನ…

Read Full News

ಶಿವಮೊಗ್ಗದ ಬಟ್ಟೆ ವ್ಯಾಪಾರಿಗೆ ಚಾಕು ಇರಿತ : ಹಬ್ಬಿದ ವದಂತಿಗೆ ನಗರದಲ್ಲಿ ಆತಂಕ

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಬಟ್ಟೆ ಮಾರುಕಟ್ಟೆಯಾಗಿರುವ ಚೋರ್ ಬಜಾರ್ ನಲ್ಲಿ ಇಂದು ಸಂಜೆ ವೇಳೆಗೆ ವ್ಯಾಪಾರಿಯೊಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಸುಮಾರು ನಲವತ್ತು ವರ್ಷದ ಸೆಂಥಿಲ್ ಎಂಬುವ ವ್ಯಾಪಾರಿಗೆ ಚಾಕು ಇರಿಯಲಾಗಿತ್ತು, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಶಿವಮೊಗ್ಗಾದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆಂಥಿಲ್ ಪರಿಸ್ಥಿತಿ ಸ್ಥಿರವಾಗಿದ್ದು ಸಾವಿನಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜೋಗಿ ಅಲಿಯಾಸ್ ಸಂತು ಎನ್ನುವ ವ್ಯಕ್ತಿಯ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ….

Read Full News

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನವರಿಗಿಲ್ಲ – ಬಿ ವೈ ರಾಘವೇಂದ್ರ

ತೀರ್ಥಹಳ್ಳಿ : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬಗ್ಗೆ ಕೆಲವು ನಾಯಕರು ತುಂಬಾ ಹಗುರವಾಗಿ ಮಾತನಾಡುತ್ತಿದ್ದಾರೆ. ರಾಜಕಾರಣ ಮಾಡಲು ಬೇರೆ ವಿಚಾರಗಳಿದೆ. ಅದನ್ನೆಲ್ಲ ಬಿಟ್ಟು ಅಲ್ಲಿ ಆರ್ ಎಸ್ ಎಸ್ ಅನ್ನು ಎಳೆಯುವಂತಹದ್ದು ಸರಿಯಲ್ಲ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನವರಿಗಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.  ತೀರ್ಥಹಳ್ಳಿಯಲ್ಲಿ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿ ಆರ್ ಎಸ್ ಎಸ್ ಎಂಬುದು ದೇಶಕ್ಕೋಸ್ಕರ, ಹಿಂದೂ ರಾಷ್ಟ್ರಕ್ಕೊಸ್ಕರ…

Read Full News

ರಾಜ್ಯ ಹೆದ್ದಾರಿ 1ರ ಆನಂದಪುರ -ತೀರ್ಥಹಳ್ಳಿ ಮಾರ್ಗದಲ್ಲಿ KSRTC ಬಸ್ಸುಗಳು ಸಂಚರಿಸುತ್ತಿಲ್ಲವೇಕೆ…?? ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷವೇ…???ಖಾಸಗಿ ಬಸ್ ಮಾಲೀಕರುಗಳ ಹುನ್ನಾರವೇ…..?

ರಿಪ್ಪನ್ ಪೇಟೆ: ರಾಜ್ಯ ಹೆದ್ದಾರಿ 1ರ ಆನಂದಪುರ ದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಒಂದೇ ಒಂದು  ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸುತ್ತಿಲ್ಲ. ಇದಕ್ಕೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷವೇ. ಖಾಸಗಿ  ಬಸ್ ಮಾಲೀಕರುಗಳ ಹುನ್ನಾರವೇ ಕಾರಣವೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಉಂಟುಮಾಡಿದೆ.  ರಾಜ್ಯ ಹೆದ್ದಾರಿ 1ರ ಆನಂದಪುರ -ತೀರ್ಥಹಳ್ಳಿ ಮಾರ್ಗದಲ್ಲಿ ದಿನನಿತ್ಯ  ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಸಾರ್ವಜನಿಕರು  ವಿವಿಧ ಉದ್ಯೋಗ ನಿಮಿತ್ತ ದಿನನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಮುಂದೆ ಒಂದು ಕೆ ಎಸ್ ಆರ್ ಟಿ ಸಿ ಬಸ್…

Read Full News

ಮಾದಾಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ :

ಹೊಸನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ವೃಕ್ಷ ಜಾಗೃತಿ ಸಂಘ ಮತ್ತು ಶನಿಪರಮೇಶ್ವರ ಯುವಕ ಸಂಘದ ಜಂಟಿ ಆಶ್ರಯದಲ್ಲಿ ನಡೆಸಲಾಯಿತು. ಮಾದಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ರೇವಣಪ್ಪ ಸ್ವರಚಿತ ಪರಿಸರ ಗೀತೆ ಹಾಡುವ ಮೂಲಕ ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಊರಿನ ಹಿರಿಯರು ಹಾಗೂ ಗ್ರಾಪಂ ಮಾಜಿ ಸದಸ್ಯರಾದ ಕೆ ಎಲ್ ವಿಜಯ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯು ಪರಿಸರ ಉಳಿಸುವ ನಿಟ್ಟಿನಲ್ಲಿ ಒಂದೊಂದು ಗಿಡ ನೆಡುವ ಮೂಲಕ ಗಾಂಧೀಜಿ ಕಂಡ ಕನಸು…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.