ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಕರಾವಳಿ- ಮಲೆನಾಡು ಭಾಗದಲ್ಲಂತೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿದ್ದು, ಗುಡ್ಡ ಕುಸಿತ, ಸೇತುವೆ
ಮುಳುಗಡೆ, ನೆರೆಯಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ತೀರ್ಥಹಳ್ಳಿ, ಸಾಗರ,ಹೊಸನಗರದಲ್ಲಿ ಅವಘಡಗಳು ಹೆಚ್ಚಾಗುತ್ತಿವೆ ಭಾರಿ ಮಳೆಗೆ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಸಾಗರ- ಸಿಗಂದೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಸಿಗಂದೂರು ಹೊಳೆಬಾಗಿಲು ಸಮೀಪದ ಅಂಬಾರಗೊಡ್ಡು ಬಳಿ ರಸ್ತೆಗೆ ಅಡ್ಡಲಾಗಿ ಹಲವಾರು ಮರಗಳು ಬಿದ್ದಿದ್ದು, ಕಳೆದ 1 ಗಂಟೆಯಿಂದ
ಸಿಗಂದೂರು ರಸ್ತೆ ಸಂಪೂರ್ಣ ಬಂದ್ ಆಗಿದೆ.
ಸಿಗಂದೂರು ದೇವಾಲಯಕ್ಕೆ ತೆರಳುತ್ತಿದ್ದ ಹಾಗೂ ವಾಪಸ್ ಬರುತ್ತಿದ್ದ ಭಕ್ತರಿಗೆ ತೊಂದರೆ ಆಗಿದ್ದು,ಮೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಮರತೆರವು ಕಾರ್ಯಾಚರಣೆ ನಡೆಯುತ್ತಿದೆ.
ಭಾರಿ ಮಳೆ ನಡುವೆಯೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು ರಸ್ತೆ ತೆರವುಗೊಳ್ಳಲು ಇನ್ನೂ ಒಂದು ಗಂಟೆ ತಗಲುವ ಸಾಧ್ಯತೆ ಇದೆ.