ರಿಪ್ಪನ್ ಪೇಟೆ : ಆಧುನಿಕ ತಂತ್ರಜ್ಞಾನದ ನಡುವೆ ಒತ್ತಡದ ಬದುಕಿನಲ್ಲಿ ಜ್ಞಾನದ ಬೆಳಕಿನ ದೀವಿಗೆ ನೀಡಿದ ಗುರು ಸ್ಮರಣೆ ಅತಿ ಅಗತ್ಯ ಎಂದು ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಹೇಳಿದರು.
ಇಂದು ರಾಜ್ಯದ ಆರ್ಯ ಈಡಿಗರ ಪವಿತ್ರ ಯಾತ್ರಾ ಸ್ಥಳವಾದ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಇಂದಿನ ಜನರಿಗೆ ಶಿಕ್ಷಣ ಹಾಗೂ ಸಂಸ್ಕಾರದ ಅಗತ್ಯವಿದೆ.ಸಂಪತ್ತು ಹಾಗೂ ಭೌತಿಕ ಆಸ್ತಿ ಇದ್ದರೂ ಯಾರು ಸಹ ನೆಮ್ಮದಿಯಿಂದ ಬಾಳುತ್ತಿಲ್ಲ,ಸಮಾಧಾನ ಎಂಬುದು ಅಂತರಂಗದ ಸಂಪತ್ತಾಗಿದ್ದು ನಮ್ಮ ಹಿರಿಯರು ತಿಳಿಸಿರುವ ಜ್ಞಾನದ ಬೆಳಕು ಮಾತ್ರ ನಮ್ಮ ಅಜ್ಞಾನದ ಕತ್ತಲೆ ನಿವಾರಿಸಿ ಬೆಳಕಿನ ದಾರಿ ತೋರಿಸಿ ಜೀವನದಲ್ಲಿ ಶಾಂತಿ ನೆಮ್ಮದಿ ನೀಡುತ್ತದೆ ಆದುದರಿಂದ ನಾವೆಲ್ಲರೂ ವ್ಯಾಸ ಪೂರ್ಣಿಮೆಯಂದು ಗುರುವಿನ ಸ್ಮರಣೆ ಮಾಡುವ ಮೂಲಕ ಅವರು ತಿಳಿಸಿರುವ ಸದ್ವಿಚಾರದ ಹಾದಿಯಲ್ಲಿ ಸಾಗೋಣ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಹೊಸನಗರ ತಾಲೂಕು ಆರ್ಯ ಈಡಿಗ ಸಂಘ ಅಧ್ಯಕ್ಷ ಬಿ.ಪಿ ರಾಮಚಂದ್ರ. ರಿಪ್ಪನ್ ಪೇಟೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ವೇತಾ ಬಂಡಿ, ತೀರ್ಥಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ,ಪಾಂಡುರಂಗಪ್ಪ, ನಾಗವೇಣಿ ಚಂದ್ರಶೇಖರ್, ವಿಶಾಲ್ ಕುಮಾರ್, ಲೋಕೇಶ್, ಗಂಗಾಧರ ಹಾರಂಬಳ್ಳಿ, ಶಿವು ಹೊದಲ. ಇನ್ನಿತರರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ. ದ್ವಿತೀಯ ಪಿಯುಸಿ ಅಂತಿಮ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನಿತರ ಪೋಟೋಗಳನ್ನು ಇಲ್ಲಿ ವೀಕ್ಷಿಸಿ👇