ಹೊಸನಗರ ತಾಲ್ಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ಹಿತ ದೃಷ್ಟಿಯಿಂದ ನಾಳೆ ಗುರುವಾರ ದಿನಾಂಕ 14/07/2022 ರಂದು ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ರವರು ತಿಳಿಸಿದ್ದಾರೆ.
ತಾಲ್ಲೂಕಿನ ಇತರೆ 3 ಹೋಬಳಿಗಳಲ್ಲಿ ಎಡಬಿಡದೆ ಸುರಿಯುತ್ತಿರುವ
ಮಳೆಯಿಂದ ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುತ್ತಿದ್ದಲ್ಲಿ ಅಂತಹ ಮಕ್ಕಳ ಪೋಷಕರಿಗೆ ಶಾಲೆಗೆ ಮಕ್ಕಳನ್ನು ಕಳಿಸಿವುದು ಬೇಡವೆಂದು ತಿಳಿಸುವುದು.
ಒಂದು ವೇಳೆ ಹೆಚ್ಚು ಮಕ್ಕಳಿಗೆ ತೊಂದರೆಯಾಗುತಿದ್ದಲ್ಲಿ SDMC ಯವರೊಂದಿಗೆ ಮುಖ್ಯೋಪಾಧ್ಯಾಯರು ಸಮಾಲೋಚಿಸಿ, ರಜೆಯನ್ನು ನೀಡುವುದು. ರಜೆ ನೀಡಿದ್ದರಿಂದ ಕೊರತೆಯಾಗುವ ಶಾಲಾ ದಿನಗಳನ್ನು ಮುಂಬರುವ ಶನಿವಾರಗಳಂದು ಪೂರ್ಣ ತರಗತಿ ನಡೆಸುವುದರ ಮೂಲಕ ಸರಿದೂಗಿಸುವುದು ಎಂದು ತಿಳಿಸಿದ್ದಾರೆ.
ಸಾಗರ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಣೆ:
ಸಾಗರ ತಾಲ್ಲೂಕಿನಾದ್ಯಂತ ವಿಪರೀತ ಮಳೆಯಾಗುತ್ತಿದೆ ಮಳೆಯ ಅಬ್ಬರದಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳುವುದು ಸಾಕಷ್ಟು ತೊಂದರೆಯಾಗುತ್ತಿರುವುದರಿಂದ ದಿನಾಂಕ 14/07/2022 ರ ಗುರುವಾರದಂದು ಸಾಗರ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ.
ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾಪತ್ತೆ:
ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾಪತ್ತೆಯಾಗಿದ್ದು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ,ಸಾರ್ವಜನಿಕರು ಹಾಗೂ ಪೋಷಕರು ಶಾಲೆಯ ರಜೆಯ ಬಗ್ಗೆ ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣ ಅಧಿಕಾರಿ ಆನಂದ್ ಕುಮಾರ್ ರವರ ನಂಬರ್ ಗೆ ಕರೆ ಮಾಡಿದರೆ ಯಾವುದೇ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಭಾರಿ ಮಳೆಯ ನಡುವೆ ಶಾಲೆ ರಜೆಯ ಬಗ್ಗೆ ಪೋಷಕರಲ್ಲಿ ಗೊಂದಲ ಉಂಟಾಗುವುದು ಸಹಜ,ಹಾಗಾಗಿ ಪೋಷಕರು ಮಾಹಿತಿಗಾಗಿ ಪರಿತಪಿಸುತ್ತಿರುತ್ತಾರೆ.ಶಾಲೆಯ ರಜೆಗಳ ಬಗ್ಗೆ ಮಾಹಿತಿ ನೀಡಬೇಕಾದ ಜಡ್ಡುಗಟ್ಟಿದ, ಗಟ್ಟಿ ಚರ್ಮದ ಅಧಿಕಾರಿ ವರ್ಗದವರು ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂಬುದು ಸಾರ್ವಜನಿಕರಲ್ಲಿ ಮೂಡಿರುವ ಯಕ್ಷ ಪ್ರಶ್ನೆಯಾಗಿದೆ