w
Headlines

23 ಕೋಟಿ ಮೌಲ್ಯದ ಚಿನ್ನ ಸೀಜ್

ತರೀಕೆರೆಯಲ್ಲಿ ಚುನಾವಣಾ ಸಿಬ್ಬಂದಿ  ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 23 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಸೀಜ್​ ಆದ ಬಂಗಾರದ ತೂಕ 40 ಕೆ.ಜಿ.  ಚಿಕ್ಕಮಗಳೂರು ಜಿಲ್ಲೆ  ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 40 ಕೆ.ಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.   ಚಿನ್ನವನ್ನು ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿತ್ತು.ಚೆಕ್‌ಪೋಸ್ಟ್‌ನಲ್ಲಿ ಕಂಟೇನರ್‌ ತಡೆದು ತಪಾಸಣೆ ನಡೆಸಿದಾಗ ಆಭರಣಗಳು ಸಾಗಿಸುತ್ತಿರುವುದು ಕಂಡುಬಂದಿದೆ. ಆಭರಣಗಳಿಗೆ ಪೂರಕವಾಗಿ ಯಾವುದೇ ದಾಖಲೆಗಳು ನೀಡದೇ ಹಿನ್ನೆಲೆಯಲ್ಲಿ ಅದನ್ನು ಸೀಜ್​…

Read Full News

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ – ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ|Ramadan

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮುಪ್ತಿ ಇಜ್ ಹಾರ್ ಅಹಮದ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಶುಕ್ರವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ  ಇಂದು…

Read Full News

PU RESULT | ಕಲಾ ವಿಭಾಗದಲ್ಲಿ ಶೇ 95% ಅಂಕ ಪಡೆದ ಮಿಸ್ಬಾ – ಆನಂದಪುರ ಪಿಯು ಕಾಲೇಜಿಗೆ ಶೇ 77% ರಷ್ಟು ಫಲಿತಾಂಶ

PUC RESULT | ಆನಂದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 77% ರಷ್ಟು ಫಲಿತಾಂಶ ಆನಂದಪುರ : ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇಕಡಾ 77 ರಷ್ಟು ಫಲಿತಾಂಶ ಬಂದಿದೆ. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಿಸ್ಬಾ ಶೇಕಡಾ 95% ಅಂಕ ಗಳಿಸುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 143 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 110 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಕಲಾ…

Read Full News

ಚೂರಿ ಇರಿದು ಯುವಕನ ಹತ್ಯೆ | crime news

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯ ಸಾಯಿನಗರದಲ್ಲಿ ಶುಕ್ರವಾರ ಚೂರಿ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ.  ಕೋಡಿಹಳ್ಳಿ ನಿವಾಸಿ ನವೀನ್ ಕುಮಾರ್ (25) ಮೃತ. ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹೊಸಮನೆ ಸತ್ಯಸಾಯಿನಗರದಲ್ಲಿ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ನವೀನ್ ಗೆ ಇತ್ತೀಚೆನ ಒಂದು…

Read Full News

ಜ್ಞಾನೇಂದ್ರ ಮತ್ತು ಹಾಲಪ್ಪ ಗೆಲುವಿಗೆ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ-ಉದ್ಯಾಪನ ಹೋಮ

ಶ್ರೀ ಕರಿಬಸವೇಶ್ವರ ಮತ್ತು ಬಾಲಸುಬ್ರಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಆಶ್ಲೇಷ ಬಲಿ ರಿಪ್ಪನ್‌ಪೇಟೆ : ಇಲ್ಲಿಗೆ ಸಮೀಪದ ತಮ್ಮಡಿ ಕೊಪ್ಪದ ಉಕ್ಕಡಗಾತ್ರಿ ಶ್ರೀ ಗುರು ಕರಿಬಸವೇಶ್ವರ ಹಾಗೂ ಬಾಲಸುಬ್ರಮಣ್ಯ ಸ್ವಾಮಿ ಮತ್ತು ನಾಗದೇವತೆಗಳ ದೇವಾಲಯದಲ್ಲಿ ಏಪ್ರಿಲ್ 23ರ ಭಾನುವಾರ ವಿಶೇಷ ಆಶ್ಲೇಷ ಬಲಿ ಉದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವನ್ನು ಏರ್ಪಡಿಸಲಾಗಿದೆ. ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ಹಾಗೂ ದೇವಸ್ಥಾನದ ಭಕ್ತಾದಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಇವರುಗಳು ಮುಂಬರುವ ವಿಧಾನಸಭಾ…

Read Full News

ರಿಪ್ಪನ್‌ಪೇಟೆ ಕಾಲೇಜ್‌ಗೆ ಪಿಯು ಪರೀಕ್ಷೆಯಲ್ಲಿ 81.96% ರಷ್ಟು ಫಲಿತಾಂಶ

ರಿಪ್ಪನ್‌ಪೇಟೆ ಕಾಲೇಜ್‌ಗೆ ಪಿಯು ಪರೀಕ್ಷೆಯಲ್ಲಿ ಶೇಕಡಾ 81.96 ರಷ್ಟು ಫಲಿತಾಂಶ ರಿಪ್ಪನ್‌ಪೇಟೆ : ಕಳೆದ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇಕಡಾ 81.96 ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜ್ ಪ್ರಾಚಾರ್ಯ ಎ.ಮಂಜುನಾಥ ತಿಳಿಸಿದರು. ಕಾಲೇಜಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 244 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 200 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಕಲಾ ವಿಭಾಗದಲ್ಲಿ 101 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ…

Read Full News

ಪಿಯುಸಿ ಫಲಿತಾಂಶ ಪ್ರಕಟ : ತೀರ್ಥಹಳ್ಳಿಯ ಅನ್ವಿತಾ ರಾಜ್ಯಕ್ಕೆ ಎರಡನೇ ರ‍್ಯಾಂಕ್‌ – ಅಮೃತಾ ಕಾಲೇಜಿಗೆ 90.28% ಫಲಿತಾಂಶ

ಕರ್ನಾಟಕದಾದ್ಯಂತ ಯಶಸ್ವಿಯಾಗಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇಂದು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, 7,26,195 ವಿದ್ಯಾರ್ಥಿಗಳ ಪೈಕಿ 5 ಲಕ್ಷದ 24 ಸಾವಿರ 209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ1,34,876 ಶ್ರ( ಶೇಕಡಾ 61.22ರಷ್ಟು) ವಿದ್ಯಾರ್ಥಿ ಪಾಸ್ ಆಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 1,82,246 (ಶೇಕಡಾ 75.89ರಷ್ಟು) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ 2,07,087 (ಶೇಕಡಾ 85.71ರಷ್ಟು) ಪಾಸ್…

Read Full News

ಕಂತೆ ಕಂತೆ ಹಣ ಎಣಿಸಿದ ಸಾಗರ ನಗರಸಭೆ ಉಪಾಧ್ಯಕ್ಷ – ವೀಡಿಯೋ ವೈರಲ್| ಶಾಸಕ ಹಾಲಪ್ಪ ಆಪ್ತನ ವಿರುದ್ದ ಪ್ರಕರಣ ದಾಖಲು|sagara

ಸಾಗರ ನಗರಸಭೆ ಉಪಾಧ್ಯಕ್ಷರ ಮನೆಯಲ್ಲಿ ಹಣ ತುಂಬುತ್ತಿರುವ ವಿಡಿಯೋ ವೈರಲ್ ಆಗಿದ್ದು, ಚುನಾವಣೆ ಆಯೋಗ ಎಫ್ಐಆರ್ ದಾಖಲಿಸಿಕೊಂಡಿದೆ. ಸಾಗರ ನಗರಸಭೆ ಉಪಾಧ್ಯಕ್ಷ ಮಹೇಶ್ ವಿರುದ್ಧ ಎಪ್ಐಆರ್ ದಾಖಲಾಗಿದೆ. ಸಾಗರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರ ಆಪ್ತನಾಗಿರುವ  ಮಹೇಶ್ ಹಣವನ್ನ ಬ್ಯಾಗಿಗೆ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಗರ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ದಾನಪ್ಪ ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು  ಸಾಗರ ಠಾಣೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಮಹೇಶ್ ಬ್ಯಾಗಿಗೆ…

Read Full News

ಸಾಗರ ವಿಧಾನಸಭಾ ಚುನಾವಣೆಗೆ ಕೆಆರ್ ಎಸ್ ಪಕ್ಷದಿಂದ ಸ್ಪರ್ಧೆಗಿಳಿದ ಟಿಕ್ಕಿ ಅಬ್ಬಿ ಕಿರಣ್|election

ಸಾಗರ ವಿಧಾನಸಭಾ ಚುನಾವಣೆಗೆ ಕೆಆರ್ ಎಸ್ ಪಕ್ಷದಿಂದ ಸ್ಪರ್ಧೆಗಿಳಿದ ಟಿಕ್ಕಿ ಅಬ್ಬಿ ಕಿರಣ್ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ಅಬ್ಬರದ ಪ್ರಚಾರ ಮೆರವಣಿಗೆಗಳು ನಡೆಯುತ್ತಿವೆ. ಆದರೆ ಈ ಅಬ್ಬರದ ಪ್ರಚಾರದ ಮಧ್ಯೆ ಒಬ್ಬ ಇಂಜಿನಿಯರ್ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು, ಹಣವಂತರು- ಅಬ್ಬರದ ಪ್ರಚಾರದ ಮಧ್ಯೆ ಟೆಕ್ಕಿ (Techie) ಸರಳ ರೀತಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ.  ಹೌದು ಹೊಸನಗರ ತಾಲೂಕಿನ ಮುಂಬಾರು ಗ್ರಾಪಂ ವ್ಯಾಪ್ತಿಯ ಬೇಹಳ್ಳಿ ಗ್ರಾಮದ…

Read Full News

ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ|Rain

ಶಿವಮೊಗ್ಗ : ಬಾರಿ ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆಯಾಗುತ್ತಿದೆ . ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿ, ಗುಡುಗು ಸಹಿತ ಜೋರಾಗಿ ಮಳೆಯ ಸುರಿಯಲು ಆರಂಭವಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.ಇನ್ನು ಭದ್ರಾವತಿ ಯಲ್ಲೂ ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.  ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಾಗುತ್ತಿದ್ದಂತೆ ಖುಷಿಯಾದರು. ದಿಢೀರ್‌ ಮಳೆಯಿಂದಾಗಿ ಜನರು ಅಂಗಡಿಗಳು,…

Read Full News

ಶಿವಮೊಗ್ಗ ನಗರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ , ಚೆನ್ನಬಸಪ್ಪ ,ಯೋಗೀಶ್ ನಾಮಪತ್ರ ಸಲ್ಲಿಕೆ – ತ್ರಿಕೋನ ಸ್ಪರ್ಧೆಗೆ ಸಜ್ಜಾದ ಕ್ಷೇತ್ರ|election

 ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷದ ಘಟಾನುಗಟಿಗಳು ಇಂದು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣ ಕಣ ರಂಗೇರಿದೆ.  ಕಾಂಗ್ರೆಸ್‌ನಿಂದ ಹೆಚ್.ಸಿ. ಯೋಗೀಶ್, ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಹಾಗೂ ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಇಂದು ವಿಧಾನಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದರು. ಇಂದು ಮೊದಲು ಬಿಜೆಪಿಯಿಂದ ಜೆಡಿಎಸ್ ಪಕ್ಷ ಸೇರಿ ಬಿ ಫಾರಂ ಪಡೆಯಲು ಯಶಸ್ವಿಯಾದ ಆಯನೂರು ಮಂಜುನಾಥ್ ಪ್ರಥಮ ಬಾರಿಗೆ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ನಂತರ ಜಿಲ್ಲಾ ಜೆಡಿಎಸ್…

Read Full News

ಕೊನೆಗೂ ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯ ಹೆಸರು ಪ್ರಕಟ|election

ಶಿವಮೊಗ್ಗ ನಗರದ ಬಿಜೆಪಿ ಪಕ್ಷದ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂತಿಮ ಪಟ್ಟಿಯನ್ನು ಪಕ್ಷ ಪ್ರಕಟಿಸಿದ್ದು ಶಿವಮೊಗ್ಗದಿಂದ ಎಸ್‍.ಎನ್.ಚನ್ನಬಸಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮಹಾನಗರ ಪಾಲಿಕೆ ಸದಸ್ಯರಾಗಿರುವ ಎಸ್‍.ಎನ್.ಚನ್ನಬಸಪ್ಪ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.ಚನ್ನಬಸಪ್ಪ ಮಹಾನಗರ ಪಾಲಿಕೆ ಉಪ ಮೇಯರ್ ಆಗಿದ್ದರು. ಬಳಿಕ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿಯು ಜವಾಬ್ದಾರಿ ನಿಭಾಯಿಸಿದ್ದರು. ಎಸ್‍.ಎನ್.ಚನ್ನಬಸಪ್ಪ ಅವರು ಈಶ್ವರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಳೆದು ತೂಗಿ ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.

Read Full News

ಆರಗ ಆಸ್ತಿ ಮೂರು ಪಟ್ಟು ಹೆಚ್ಚು – ಕಿಮ್ಮನೆ ಆಸ್ತಿಯಷ್ಟೇ ಸಾಲ|ಜಿಲ್ಲೆಯ ಪ್ರಮುಖ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ.???? ಈ ಸುದ್ದಿ ನೋಡಿ

ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರ (Karnataka assembly election 2023)ಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೆಳಗಿನಂತಿದೆ. ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆರಗ ಅವರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಏರಿಕೆಯಾಗಿದೆ. ₹6.28 ಕೋಟಿ ಆಸ್ತಿ ಘೋಷಿಸಿದ್ದಾರೆ. 20 ಎಕರೆ ಜಮೀನು ಇದೆ, ಮೂರು ಕಾರು, ಪತ್ನಿ ಬಳಿ 250 ಗ್ರಾಂ ಚಿನ್ನವಿದೆ. ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು…

Read Full News

ರಿಪ್ಪನ್‌ಪೇಟೆ : ನೇಣಿಗೆ ಶರಣಾದ ಆಟೋ ಚಾಲಕ ವೆಂಕಟೇಶ್|crime news

ರಿಪ್ಪನ್‌ಪೇಟೆ : ನೇಣಿಗೆ ಶರಣಾದ ಆಟೋ ಚಾಲಕ ರಿಪ್ಪನ್‌ಪೇಟೆ;- ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿ ಆಟೋ ಚಾಲಕ ವೆಂಕಟೇಶ್ (೫೩)ಎಂಬುವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೋವಿಡ್ ಮುಂಜಾಗ್ರತಾ ಚುಚ್ಚುಮದ್ದು ಪಡೆದ ನಂತರ  ದೇಹದ ಎಡಭಾಗ ಸ್ವಾದೀನ ಕಳೆದುಕೊಂಡಿದ್ದು ಮಣಿಪಾಲ ಸೇರಿದಂತೆ ವಿವಿಧಡೆಯಲ್ಲಿ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಬುಧವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಕೊರಳೊಡಿದ್ದಾರೆ ಎಂದು ಕುಟುಂಬ ವರ್ಗದವರು ದೂರು ದಾಖಲಿಸಿದ್ದಾರೆ. ಮೃತ…

Read Full News

ಗರ್ತಿಕೆರೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು|accident

ರಿಪ್ಪನ್‌ಪೇಟೆ : ಗರ್ತಿಕೆರೆ ಬಳಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಗರ್ತಿಕೆರೆ ನಿವಾಸಿ ನದೀಮ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ  ಸಮೀಪದ ಗರ್ತಿಕೆರೆಯಲ್ಲಿ ಏಪ್ರಿಲ್ 2 ರಂದು ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಹಾಗೂ ಬೈಕ್ ಸವಾರ ಇಬ್ಬರಿಗೆ ಗಂಭೀರವಾದ  ಗಾಯವಾಗಿತ್ತು. ಇಬ್ಬರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು.ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ…

Read Full News

ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಯ ಮೇಲೆ ಪೊಲೀಸರ ದಾಳಿ – ಮೂವರ ಬಂಧನ : 25 ಲಕ್ಷ ರೂ ಸೀಜ್

ಚುನಾವಣೆಯ ಚಟುವಟಿಕೆಗಳ ನಡುವೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್​ ಕೂಡ ಜೋರಾಗಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸ್ ಆನ್‌ ಲೈನ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ದಂಧೆಗೆ ಕಡಿವಾಣ ಹಾಕಿದ್ದಾರೆ.  ಶಿವಮೊಗ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್​(ipl betting) ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಇಎನ್​ ಪೊಲೀಸ್​ ಸ್ಟೇಷನ್​ ಪಿಐ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಟೀಂವೊಂದನ್ನ ರಚಿಸಲಾಗಿತ್ತು. ಸದ್ಯ ಈ ಟೀಂ ಕಳೆದ  15-04-2023 ರಂದು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ದಾಳಿ ನಡೆಸಿದೆ. ಇನ್ನೂ ಈ…

Read Full News

ರಿಪ್ಪನ್‌ಪೇಟೆ : ಅಧಿಕಾರಿಗಳ ನಿರ್ಲಕ್ಷ್ಯ – ನಾಡಕಛೇರಿ ಮುಂಭಾದಲ್ಲಿ ರಾರಾಜಿಸುತ್ತಿದೆ 2018 ರ ಚುನಾವಣೆಯ ಬ್ಯಾನರ್

ಅಧಿಕಾರಿಗಳ ನಿರ್ಲಕ್ಷ್ಯ – ನಾಡಕಛೇರಿ ಮುಂಭಾಗದಲ್ಲಿ ರಾರಾಜಿಸುತ್ತಿದೆ 2018 ರ ಚುನಾವಣೆಯ ಬ್ಯಾನರ್ ರಿಪ್ಪನ್‌ಪೇಟೆ;- ಐದು ವರ್ಷಕ್ಕೊಮ್ಮೆ ನಡೆಯುವ ವಿಧಾನಸಭಾ ಚುನಾವಣೆ ಕಳೆದು ಪುನ: ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿನ ನಾಡಕಛೇರಿ ಮತ್ತು ಗ್ರಾಮ ಪಂಚಾಯ್ತಿ ಕಛೇರಿ ಮುಂಭಾಗ ಇನ್ನೂ ಚುನಾವಣಾ ಅಯೋಗದವರು 2018 ರ ವಿಧಾನಸಭಾ ಚುನಾವಣೆ ಬ್ಯಾನರ್ ತಗೆಯದೇ ನಿರ್ಲಕ್ಷö್ಯ ವಹಿಸಿದ್ದಾರೆಂಬುದಕ್ಕೆ ಇಲ್ಲಿ ರಾರಾಜಿಸುತ್ತಿರುವ ಹಳೆಯ ಬ್ಯಾನರ್‌ಗಳೇ ಸಾಕ್ಷಿಕರಿಸುತ್ತಿವೆ. ಈಗಾಗಲೇ 2023 ರ ವಿಧಾನಸಭಾ ಚುನಾವಣೆ ಪ್ರಕಟಗೊಂಡು ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದರೂ…

Read Full News

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಬಿ ವೈ ವಿಜಯೇಂದ್ರ ರ ಒಟ್ಟು ಆಸ್ತಿ ಎಷ್ಟು ಗೊತ್ತಾ???? ಪತ್ನಿಗೆ ಸಾಲ ಕೊಟ್ಟಿರುವ BYV ಗೆ ಸ್ವಂತ ಕಾರು ಇಲ್ಲ!!! ಈ ಸುದ್ದಿ ನೋಡಿ

ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಶಿಕಾರಿಪುರದಲ್ಲಿ ಕಣಕ್ಕಿಳಿದಿದ್ದಾರೆ. ಯಡಿಯೂರಪ್ಪ ಅವರು ಚುನಾವಣೆ ರಾಜಕೀಯದಿಂದ ಹಿಂದೆ ಸರಿದು ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ಬಿಟ್ಟುಕೊಟ್ಟಿದ್ದಾರೆ. ಅದರಂತೆ ವಿಜಯೇಂದ್ರ ಅವರು ಶಿಕಾರಿಪುರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ತಮ್ಮ ಕುಟುಂಬದ ಆಸ್ತಿ ಎಷ್ಟು? ಅವರ ಬಳಿ ಏನೆಲ್ಲಾ ಇದೆ ಎನ್ನುವುದನ್ನು ವಿಜಯೇಂದ್ರ ಅವರು ನಾಮಿನೇಷನ್​ನಲ್ಲಿ ಮಾಹಿತಿ ನೀಡಿದ್ದಾರೆ.  ಬಿವೈ ವಿಜಯೇಂದ್ರ ಮತ್ತು ಅವರ ಪತ್ನಿ ಪ್ರೇಮಾ ವಿಜಯೇಂದ್ರ ಒಟ್ಟು…

Read Full News

ಇದು ನನ್ನ ಕೊನೆಯ ಚುನಾವಣೆ – ಆರಗ ಜ್ಞಾನೇಂದ್ರ |ಸಾವಿರಾರು ಅಭಿಮಾನಿಗಳೊಂದಿಗೆ ಮೆರವಣಿಗೆ ತೆರಳಿ ನಾಮಪತ್ರ ಸಲ್ಲಿಸಿದ ಆರಗ

ತೀರ್ಥಹಳ್ಳಿ : ಈ ಬಾರಿಯ ಚುನಾವಣೆ ನನ್ನ ಕೊನೆ ಚುನಾವಣೆಯಾಗಿದ್ದು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಹತ್ತನೇ ಬಾರಿಗೆ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 9 ಚುನಾವಣೆಯಲ್ಲಿ 4 ಬಾರಿ ತೀರ್ಥಹಳ್ಳಿ ಜನ ನನ್ನನ್ನು ಗೆಲ್ಲಿಸಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನ ಇವತ್ತು ಬಂದು ನನಗೆ ಆಶೀರ್ವದಿಸಿದ್ದಾರೆ ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು…

Read Full News

ಹಾಲಪ್ಪ ಮನೆ ಹಾಳು ಮಾಡೋದ್ರಲ್ಲಿ ನಂಬರ್ ಒನ್: ಬೇಳೂರು ಗೋಪಾಲಕೃಷ್ಣ ಆರೋಪ|political news

ಹಾಲಪ್ಪ ಮನೆ ಹಾಳು ಮಾಡೋದ್ರಲ್ಲಿ ನಂಬರ್ ಒನ್, : ಬೇಳೂರು ಗೋಪಾಲ ಕೃಷ್ಣ ಆರೋಪ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ಭರ್ಜರಿ ಚುನಾವಣಾ ಪ್ರಚಾರ. ರಿಪ್ಪನ್ ಪೇಟೆ :ಹಿಂದೆ ಸೊರಬದಲ್ಲಿ ಬಂಗಾರಪ್ಪ ಕುಟುಂಬ ಒಡೆದು, ಮನೆ ಹಾಳು ಮಾಡಿದ್ರು.ಈಗ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಕುಟುಂಬ ಒಡೆದು, ಮನೆ ಹಾಳು ಮಾಡೋಕೆ ರೆಡಿ ಆಗಿದ್ದಾರೆ. ಎಂದು ಮಾಜಿ ಶಾಸಕ ಹಾಗೂ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಪಟ್ಟಣದಲ್ಲಿ  ಚುನಾವಣಾ ಪ್ರಚಾರ  ಭಾಷಣ …

Read Full News

ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ಪೂರ್ಣ – ವಾಹನ ಸಂಚಾರ ಪುನರಾರಂಭ|hulikal ghat

ಕರಾವಳಿ ಹಾಗೂ ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಬಾಳೆಬರೆ (ಹುಲಿಕಲ್‌) ಘಾಟ್‌ನ ‌ಕಾಂಕ್ರಿಟೀಕರಣ ಕಾಮಗಾರಿಯು ಪೂರ್ಣಗೊಂಡಿದ್ದು, ಶನಿವಾರ (ಏ.15) ರಾತ್ರಿಯಿಂದ ವಾಹನ ಸಂಚಾರ ಪುನಃ ಆರಂಭಗೊಂಡಿದೆ. ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗಾಗಿ ಫೆ. 5 ರಿಂದ ಏ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಏ. 5ರಂದು ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ 10 ದಿನಗಳ ವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ….

Read Full News

ಐಶರಾಮಿ ಜೀವನ ನಡೆಸುವ ಬೇಳೂರು ದೇಣಿಗೆಯ ನಾಟಕವಾಡುತಿದ್ದಾರೆ – ಹರತಾಳು ಹಾಲಪ್ಪ ವಾಗ್ದಾಳಿ|election

ರಿಪ್ಪನ್‌ಪೇಟೆ : ಯಡಿಯೂರಪ್ಪನವರ ರಾಜ್ಯದ ಮುಖ್ಯಮಮತ್ರಿಗಳಾಗಿದ್ದ ಆವಧಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರೆಸಾರ್ಟ್ ರಾಜಕೀಯ ಮಾಡುವ ಮೂಲಕ ಕಣ್ಣಿರು ಹಾಕಿಸಿದರ ಪರಿಣಾಮ ಈಗ ಮತದಾರರ ಮುಂದೆ ಕಣ್ಣಿರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ, ಈಗ ಹೋದಲ್ಲಿ ಬಂದಲ್ಲಿ ಕಣ್ಣೀರು ಹಾಕುತ್ತಿರುವುದು ಯಡಿಯೂರಪ್ಪ ನವರಿಗೆ ಕಣ್ಣೀರು ಹಾಕಿಸಿದ ಪಾಪ,ಯಡಿಯೂರಪ್ಪ ನವರಿಗೆ ಕಣ್ಣಿರು ಹಾಕಿಸಿದ ಮೊದಲ ವ್ಯಕ್ತಿ ಈ ಬೇಳೂರು ಗೋಪಾಲಕೃಷ್ಣ ಎಂದು ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು. ಅವರು ಇಂದು ರಿಪ್ಪನ್‌ಪೇಟೆಯಲ್ಲಿ ಕಾರ್ಯಕರ್ತರ…

Read Full News

ಬೇಳೂರು ಗೋಪಾಲಕೃಷ್ಣ ನಾಮಪತ್ರ ಸಲ್ಲಿಕೆ – ಸಾಗರದಲ್ಲಿ ಪ್ರೀತಿಯಿಂದ ಹರಿದು ಬಂದ ಅಭಿಮಾನಿಗಳ ಜನಸಾಗರ|nomination

ಸಾಗರ : ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಮೊದಲು ಸಾಗರದ ಗಣಪತಿ ದೇವಸ್ಥಾನದಲ್ಲಿ ದಂಪತಿ ಸಮೇತ ಪೂಜೆ ಸಲ್ಲಿಸಿ ಕಾಂಗ್ರೆಸ್ ಕಚೇರಿ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಂತರ ಮಾಧ್ಯಮಗಳಿಗೆ ಮಾತನಾಡಿದ, ಗೋಪಾಲಕೃಷ್ಣ ಬೇಳೂರು, ಇವತ್ತು ಒಳ್ಳೆಯ ದಿನ ಎಂದು ನಾಮಪತ್ರ ಸಲ್ಲಿಸಿದ್ದೆನೆ. ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಕಾಂಗ್ರೆಸ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದೇನೆ. ಸರಳವಾಗಿ ನಾಮಪತ್ರ ಸಲ್ಲಿಸುವ ಉದ್ದೇಶದಿಂದ ಯಾವ ಕಾರ್ಯಕರ್ತರಿಗೂ ಕರೆ ಕೊಟ್ಟಿಲ್ಲ. ಅದರೂ,…

Read Full News

ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ – ಮಧು ಬಂಗಾರಪ್ಪ

ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ‌ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು ಹಾಗೂ ಸೊರಬ ವಿಧಾನಸಭಾ ಅಭ್ಯರ್ಥಿಯಾದ ಮಧುಬಂಗಾರಪ್ಪ ಹೇಳಿದರು. ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಪುರ ಸಮೀಪದ ಕಗ್ಗಲಿಜಡ್ಡು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಶರಾವತಿ ಮುಳುಗಡೆಯಾಗಿ ಅಲ್ಲಿನ ರೈತರು ಮನೆಮಠವನ್ನು ಕಳೆದು ಕೊಂಡ ಸಂತ್ರಸ್ಥರು ಹೆಚ್ಚು ಹೊಸನಗರ…

Read Full News

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ – ಸ್ಥಳದಲ್ಲಿಯೇ ಯುವಕ ಸಾವು|accident

ಶಿವಮೊಗ್ಗ ನಗರದ ಹೊರವಲಯದ ಅಗಸವಳ್ಳಿಯಲ್ಲಿ  ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಗೋವಿಂದಾಪುರದ ನಿವಾಸಿ ಕಿಶನ್ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಗಾರೆ ಕೆಲಸಕ್ಕೆಂದು ಗೋವಿಂದಾಪುರದಿಂದ ಲಕ್ಷಣ.ಪಿ ಎಂಬುವವರ ಜೊತೆ ಬೈಕ್ ನಲ್ಲಿ ಬರುವಾಗ‌ ಈ ಅಪಘಾತ ಸಂಭವಿಸಿದೆ. ಅಗಸವಳ್ಳಿಯ ಸಂಪತ್ ಮನೆಯ ಎದುರಿನ ರಸ್ತೆಯಲ್ಲಿ ಕೆಎ28-7851 ಕ್ರಮ ಸಂಖ್ಯೆಯ ನೀರಿನ ಟ್ಯಾಂಕ್ ಲಾರಿಯು ಎದುರಿನಿಂದ ಬಂದು ಡಿಕ್ಕಿಯಾದ ಪರಿಣಾಮ ಕಿಶನ್ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ….

Read Full News

ಸಾಗರ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪಗಿಂತ ಪತ್ನಿ ಯಶೋಧ ಶ್ರೀಮಂತೆ!!! ಆಸ್ತಿ ಎಷ್ಟು ಗೊತ್ತಾ ?|halappa

ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಲಪ್ಪ ಹರತಾಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯಲ್ಲಿ ಹಾಲಪ್ಪನವರು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರದಲ್ಲಿ ಹಾಲಪ್ಪ ಅವರಿಗಿಂತ ಅವರ ಪತ್ನಿ ಯಶೋಧ ಅವರು ಹೆಚ್ಚು ಆಸ್ತಿ ಹೊಂದಿರುವುದಾಗಿ ತೋರಿಸಲಾಗಿದೆ. ಹಾಲಪ್ಪನವರು 2,75,11,577 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಯಶೋಧ ಅವರು 3,49,90,897 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು, ಹಾಲಪ್ಪ ಅವರ ತಾಯಿಯವರು 67,91,324 ರೂ. ಮೌಲ್ಯದ…

Read Full News

ಪಿಎಸ್ ಐ ಹಗರಣದ ಆರೋಪಿಗಳು ತೀರ್ಥಹಳ್ಳಿಯಲ್ಲಿ ಆರಗ ಪರ ಪ್ರಚಾರ ನಡೆಸುತಿದ್ದಾರೆ – ಕಿಮ್ಮನೆ|election campaign

ಪಿಎಸ್ ಐ ಹಗರಣದ ಆರೋಪಿಗಳು ತೀರ್ಥಹಳ್ಳಿಯಲ್ಲಿ ಆರಗ ಪರ ಪ್ರಚಾರ ನಡೆಸುತಿದ್ದಾರೆ – ಕಿಮ್ಮನೆ ರಿಪ್ಪನ್‌ಪೇಟೆ : ಪಿಎಸ್ ಐ ಹಗರಣದ ಆರೋಪಿಗಳಲ್ಲಿ ಮೂವರು ತೀರ್ಥಹಳ್ಳಿಯಲ್ಲಿ ಗೃಹ ಸಚಿವರ ಪರ ಪ್ರಚಾರ ನಡೆಸುತಿದ್ದಾರೆ ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ಕಗಲಿಜಡ್ಡು ಗ್ರಾಮದಲ್ಲಿ ಚುನಾವಣ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಿಎಸ್ ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ,ಸ್ಯಾಂಟ್ರೋ ರವಿ ಹಾಗೂ…

Read Full News

ಏ 17 ರ ಸೋಮವಾರ ಸರಳವಾಗಿ ನಾಮಪತ್ರ ಸಲ್ಲಿಸುತ್ತೇನೆ – ಬೇಳೂರು

ಏ 17 ರ ಸೋಮವಾರ ಸರಳವಾಗಿ ನಾಮಪತ್ರ ಸಲ್ಲಿಸುತ್ತೇನೆ – ಬೇಳೂರು  ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಕಾವು ರಂಗೇರಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಸಿದ್ದು ,ಇನ್ನೂ ಹಲವರು ನಾಮಪತ್ರ ಸಲ್ಲಿಸಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಬೇಳೂರು ಗೋಪಾಲಕೃಷ್ಣ ನಾಳೆ ಸೋಮವಾರ ಸರಳವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಬೇಳೂರು ನಾಳೆ 11 ಗಂಟೆಗೆ ಕಾರ್ಯಕರ್ತರು ,ಅಭಿಮಾನಿಗಳು ಹಾಗೂ ಹಿತೈಶಿಗಳನ್ನು…

Read Full News

ಹರತಾಳು ಹಾಲಪ್ಪ ಸಚಿವರಾಗಲು ನಿಮ್ಮ ಒಂದೊಂದು ಮತವು ಸಹಕಾರಿ – ಬಿ ವೈ ರಾಘವೇಂದ್ರ|BYR

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹರತಾಳು ಹಾಲಪ್ಪ ರಿಗೆ ಮತ ನೀಡಿ ಬೆಂಬಲಿಸುವ ಮೂಲಕ ಸಾಗರ ಕ್ಷೇತ್ರದಿಂದ ಮಂತ್ರಿಯೊಬ್ಬರನ್ನು ಗೆಲ್ಲಿಸಲಿದ್ದೀರಿ ಎಂದು ಸಂಸದ ಬಿ ವೈ.ರಾಘವೇಂದ್ರ ಹೇಳಿದ್ದಾರೆ. ಅವರು ಸಾಗರದಲ್ಲಿ ಹರತಾಳು ಹಾಲಪ್ಪನವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಹಾಲಪ್ಪನವರು ಕಟ್ಟಕಡೆಯ ಮನುಷ್ಯನಿಗೆ ಸರ್ಕಾರದ ಕಾರ್ಯಕ್ರಮ ತಲುಪಿಸಿದವರು. ರೈತನ ಮೇಲೆ ಹಲ್ಲೆ ಆದಾಗ ರಾತ್ರಿ ಧರಣಿ ನಡೆಸಿದ್ದವರು,ಶೋಷಿತ ವರ್ಗಕ್ಕೆ ಅನ್ಯಾಯವಾದಗ ಸೆಟೆದು ನಿಂತ ನಾಯಕ ಹರತಾಳು ಹಾಲಪ್ಪ ರವರು ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ…

Read Full News

Political News ಕಿಮ್ಮನೆ ಕಾಲದಲ್ಲಿ ಅನುದಾನ ತಂದಿದ್ದರೇ ಕಾಮಗಾರಿ ಕಳಪೆಯೋ – ಸರಿಯೋ ಗೊತ್ತಾಗುತಿತ್ತು : ಆರಗ ಜ್ಞಾನೇಂದ್ರ

ಯಾರದ್ದೋ ಮಕ್ಕಳಿಗೆ ನಾನು ತಂದೆ ಎಂದು ಹೇಳಿಕೊಳ್ಳುವುದಿಲ್ಲ – ಮಾಜಿ ಸಚಿವರ ಹೇಳಿಕೆಗೆ ಆರಗ ಟಾಂಗ್ ತೀರ್ಥಹಳ್ಳಿ : 1983 ಚುನಾವಣೆಯಿಂದ 9 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.  ಈಗ ಹತ್ತನೇ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ.  ಕಳೆದ 9 ಬಾರಿ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದು ಐದು ಬಾರಿ ಸೋತಿದ್ದೇನೆ. ತತ್ವ ಸಿದ್ದಾಂತಕ್ಕಾಗಿ 1975 ರಿಂದ ನನ್ನನ್ನು ನಾನು ಈ ರಾಜಕೀಯದಲ್ಲಿ ತೊಡಗಿಸಿ ಕೊಂಡಿದ್ದೇನೆ. ತುರ್ತು ಪರಿಸ್ಥಿತಿಯ ಕರಾಳ ಕಾಯ್ದೆಯನ್ನ ಈ ದೇಶದ ಮೇಲೆ ಇಂದಿರಾಗಾಂಧಿ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.