w
Headlines

ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ|rpet news

ಬೇಡಿದ ವರವನ್ನು ವರ್ಷದೊಳಗೆ ಪೂರ್ಣಗೊಳಿಸುವ ಮಹಾತಾಯಿ;- “ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ’’ ರಿಪ್ಪನ್‌ಪೇಟೆ;-ಪುರಾತನ ಕಾಲದ ದೇವಾಲಯಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೂಲಧಾರಗಳು ಹಾಗೆಯೇ ಅಲ್ಲಿ ವಾಸಿಸಿದ ಋಷಿಮುನಿಗಳು ಶಿವಯೋಗ್ಯವರೇಣ್ಯರು ತಮ್ಮ ಪವಾಡ-ಪೂಜೆಗಳಿಂದ ಆಯಾ ಭಾಗದ ಕ್ಷೇತ್ರಗಳನ್ನು ಪಾವನಗೊಲಿಸಿ ಜಗದಿಂದ ಮರೆಯಾಗಿ ಹೋಗಿದ್ದಾರೆ.ಅಂತಹ ಸಾಧಕರ ಪಾದಸ್ಫರ್ಶದ ಸ್ಥಳಗಿಳಿಂದು ಪ್ರಚಾರವಿಲ್ಲದೆ.ಮೂಲೆಗುಂಪಾಗುತ್ತಾ ಎಷ್ಟೋ ಪ್ರಮುಖ ಇತಿಹಾಸವೂಳ್ಳ ದೇವಸ್ಥಾನಗಳು ಮತ್ತು ಧಾರ್ಮಿಕ ಪವಾಡದ ಹಲವು ಗುಹೆಗಳು ಆಳಿಯುವಂತಾಗಿರುವುದು ಕಾಣಬಹುದಾಗಿದ್ದರೂ ಕೂಡಾ ಅಳಿದುಳಿದಿರುವ ಕೆಲವು ಪ್ರಮುಖ ಧಾರ್ಮಿಕ ಕೇಂದ್ರಗಳಲೊಂದಾದ…

Read Full News

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು|Farmers death

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು..?? ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಜೇಡಿಸರದ ಬಳಿಯಲ್ಲಿ ವ್ಯಕ್ತಿಯೊಬ್ಬರು ಎಮ್ಮೆಯನ್ನು ಹುಡುಕಿಕೊಂಡು ಕೆರೆ ಏರಿ ಮೇಲೆ ಹೋಗುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯ ನಿವಾಸಿ ಸತೀಶ್ ಗೌಡ(51) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಸತೀಶ್​ರವರು ಅಡುಗೆ ಕಂಟ್ರಾಕ್ಟ್ ಮಾಡುತ್ತಿದ್ದರು.  ತಮ್ಮ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗೆ ಅಂತಾ ತೆರಳಿದ್ದ  ವೇಳೇ ಕೆರೆಯ ಆಳ ನೋಡಲು ಹೋದ ಸಂದರ್ಭದಲ್ಲಿ…

Read Full News

ರಿಪ್ಪನ್‌ಪೇಟೆ : ಬಾಳೆಕೊನೆ ಕಟಾವು ಮಾಡುವ ವಿಚಾರದಲ್ಲಿ ಗಲಾಟೆ – ಎರಡು ಪ್ರತ್ಯೇಕ ಪ್ರಕರಣ ದಾಖಲು|crime news

ರಿಪ್ಪನ್‌ಪೇಟೆ : ಬಾಳೆಕೊನೆ ಕಟಾವು ಮಾಡುವ ವಿಚಾರದಲ್ಲಿ ಗಲಾಟೆ – ಎರಡು ಪ್ರತ್ಯೇಕ ಪ್ರಕರಣ ದಾಖಲು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದಲ್ಲಿ ಬಾಳೆಕೊನೆ ಕಡಿಯುವ ವಿಚಾರದಲ್ಲಿ ಗಲಾಟೆ ನಡೆದಿದ್ದು ಎರಡು ಪ್ರತ್ಯೇಕ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಗರ ಮೂಲದ ಇಮ್ರಾನ್ ಎಂಬುವವರಿಗೆ ಗೌಡಕೊಪ್ಪ ಗ್ರಾಮದ ಅರುಣ್ ಕುಮಾರ್ ಎಂಬುವವರಿಗೆ ಸೇರಿದ ಬಾಳೆ ತೋಟದ ಬಾಳೆಕೊನೆಯನ್ನು ತೂಕದ ಲೆಕ್ಕದಲ್ಲಿ ಕಟಾವು ಮಾಡಲು ಮಾತುಕತೆ ನಡೆದಿತ್ತು. ಆ ಹಿನ್ನಲೆಯಲ್ಲಿ ಸೋಮವಾರ ಬಾಳೆಕೊನೆ…

Read Full News

ಆಟೋದಲ್ಲಿ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ|Honest driver

ಆಟೋದಲ್ಲಿ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ ಸಾಗರ : ಪ್ರಯಾಣಿಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಮೌಲ್ಯದ ಆಭರಣಗಳಿದ್ದ ಬ್ಯಾಗನ್ನು ಆಟೋ ಚಾಲಕರೊಬ್ಬರು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸಾಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಚಂದ್ರಮಾವಿನಕೊಪ್ಪಲಿಂದ ಆಟೋ ಹತ್ತಿದ್ದ ಪ್ರಯಾಣಿಕರು ಸೊರಬ ರಸ್ತೆ ಬೈಪಾಸ್ ಬಳಿ ಇಳಿಯುವಾಗ ತಮ್ಮ ಬ್ಯಾಗ್‌ವೊಂದನ್ನು ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ ಲಕ್ಷಾಂತರ ಮೌಲ್ಯದ ಆಭರಣಗಳು ಕೂಡ ಇದ್ದವು. ಇದೇ ವೇಳೆ ಹಿಂದಿನ ಆಸನದಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಮನಿಸಿದ…

Read Full News

ಒಂಟಿ ಮಹಿಳೆಯರು ಇರುವ ಮನೆ ಲೂಟಿ ಮಾಡುತ್ತಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಬಂಧನ|arrested

ಒಂಟಿ ಮಹಿಳೆಯರು ಇರುವ ಮನೆ ಲೂಟಿ ಮಾಡುತ್ತಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಬಂಧನ ಸಾಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಂಟಿ ಮನೆಗಳ ಗುರುತಿಸಿ ದರೋಡೆ ಮತ್ತು ಹಲ್ಲೆಗೆ ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪಶ್ಚಿಮಬಂಗಾಳ ರಾಜ್ಯದ ಮುರ್ಷಿದಾಬಾದ್ ಜಿಲ್ಲೆ, ಭಗಂಗೋಲ್ ತಾಲೂಕಿನ ರಾಣಿಲ್ ಗ್ರಾಮದ ಹದೀದ್ ಷಾ ಬಂಧಿತ ಆರೋಪಿ. ಈತ ಆವಿನಹಳ್ಳಿ ಹೋಬಳಿಯ ಕೋಳೂರು, ಗೆಣಸಿನಕುಣಿ, ಗಿಣಿವಾರ, ಕೌತಿ, ಹುಲಿದೇವರಬನ, ಅಂಬಾರಗೋಡ್ಲು ಗ್ರಾಮ ವ್ಯಾಪ್ತಿಯ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದ….

Read Full News

ತುಂಗಾ ನದಿಯಲ್ಲಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು! ಓರ್ವನ ಮೃತದೇಹ ಪತ್ತೆ !!!|students drowned in Tunga river

ತುಂಗಾ ನದಿಯಲ್ಲಿ ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು! ಓರ್ವನ ಮೃತದೇಹ ಪತ್ತೆ !! ಶಿವಮೊಗ್ಗ : ಮೀನು ಹಿಡಿಯಲೆಂದು ತುಂಗಾ ನದಿಗೆ ಇಳಿದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳಾದ ಮೊಯಿನ್‌ ಖಾನ್‌(18) ಮತ್ತು ಅಂಜುಂ ಖಾನ್‌(18) ನೀರಿನಲ್ಲಿ ಕಣ್ಮರೆಯಾದವರು. ಶಿವಮೊಗ್ಗದ ಶಿವಮೊಗ್ಗದ ಕುರುಬರ ಪಾಳ್ಯದಲ್ಲಿ ದುರ್ಘಟನೆ ನಡೆದಿದೆ. ಸವಾಯಿಪಾಳ್ಯದ ಮೊಯಿನ್ ಖಾನ್(18), ಇಲ್ಯಾಸ್ ನಗರದ ಅಂಜುಂ ಖಾನ್(18) ಇಬ್ಬರೂ ಬೇರೆ ಕೆಲವು ಸ್ನೇಹಿತರ ಜತೆ ಮೀನು ಹಿಡಿಯಲೆಂದು ನದಿ ತೀರಕ್ಕೆ ಬಂದಿದ್ದರು. ಅಲ್ಲಿ ನೀರಿಗಿಳಿದು ಮೀನು…

Read Full News

ರಿಪ್ಪನ್‌ಪೇಟೆ – ಶ್ರದ್ದಾಭಕ್ತಿಯೊಂದಿಗೆ ಗೌರಿ ಗಣೇಶನನ್ನು ಸಂಭ್ರಮದಿಂದ ಸ್ವಾಗತಿಸಿ ಬರಮಾಡಿಕೊಂಡ ಭಕ್ತರು|rpet

ರಿಪ್ಪನ್‌ಪೇಟೆ – ಶ್ರದ್ದಾಭಕ್ತಿಯೊಂದಿಗೆ ಗೌರಿ ಗಣೇಶನನ್ನು ಸಂಭ್ರಮದಿಂದ ಸ್ವಾಗತಿಸಿ ಬರಮಾಡಿಕೊಂಡ ಭಕ್ತರು ರಿಪ್ಪನ್‌ಪೇಟೆ;-ಗೌರಿ ಗಣೇಶನನ್ನು ಇಂದು ಇಲ್ಲಿನ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಮುತ್ತೈದೆಯರು ಗೌರಿಯನ್ನು ಶ್ರದ್ದಾಭಕ್ತಿಯಿಂದ ತರುವುದರೊಂದಿಗೆ ಪ್ರತಿಷ್ಠಾಪನಾ ಪೂಜೆಯೊಂದಿಗೆ ಸಂಭ್ರಮದೊಂದಿಗೆ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ ಮತ್ತು ಪದಾಧಿಕಾರಿಗಳಾದ ಎನ್.ಸತೀಶ್, ಆಶಾ ಸತೀಶ್,ಎಂ.ಡಿ.ಇಂದ್ರಮ್ಮ,ಸರಸ್ವತಿ,ವನಮಾಲ,ಜಯಲಕ್ಷಿö್ಮ,ಗಣೇಶಕಾಮತ್,ಅರವಿಂದ,ಯಶೋಧೀಶ್ವರಪ್ಪಗೌಡ ಗವಟೂರು, ಇನ್ನಿತರ ಹಲವು ಪಾಲ್ಗೊಂಡು ಗೌರಿ ಪೂಜೆಯಲ್ಲಿ ಮುತ್ತೈದೆಯರು ಉಡಿ ತುಂಬಿ ಸಂಭ್ರಮಿಸಿದರು. ಇದೇ…

Read Full News

ಅಕ್ರಮವಾಗಿ ಸಾಗುವಾನಿ ಮರ‌ ಸಾಗಣೆ: ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ|arrested

ಅಕ್ರಮವಾಗಿ ಸಾಗುವಾನಿ ಮರ‌ ಸಾಗಣೆ: ಇಬ್ಬರು ಆರೋಪಿಗಳ ಬಂಧನ, ಮೂವರು ಪರಾರಿ ಶಿವಮೊಗ್ಗ : ಸಾಗುವಾನಿ ತುಂಡುಗಳನ್ನು ಕಡಿದು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂದಿಸಿದ್ದು,ಮೂವರು ತಲೆ ಮರೆಸಿಕೊಂಡಿದ್ದಾರೆ. ಭಾರತಿ ನಗರದ ವಾಸಿಗಳಾದ ಶರತ್ ಹಾಗೂ ಮಂಜುನಾಥ್ ಬಂಧಿತ ಆರೋಪಿತಗಳು ಎಂದು ತಿಳಿದು ಬಂದಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ಹಾಯ್ ಹೊಳೆ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರವನ್ನು ಕೊಯ್ದು ಸಾಗಾಣಿಕೆ ಮಾಡಲು ಯತ್ನಿಸುವಾಗ‌ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ…

Read Full News

ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ|rpet

ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ –  ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ 56 ನೇ ವರ್ಷದ 11 ದಿನಗಳ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಮಹೋತ್ಸವ  ಮತ್ತು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದ ತಿಲಕ್ ಮಹಾಮಂಟಪದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಪವಾರ್ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷಣ…

Read Full News

ಸಮಟಗಾರು ಶಾಲೆಯಲ್ಲಿ ಪ್ರತಿಭಾ ಕಾರಂಜಿ |ಮಕ್ಕಳ ಸುಪ್ತ ಪ್ರತಿಭೆಗೆ ರಂಗಮಂಚಿಕೆಯಾದ ಪರಿಸರ ಸ್ನೇಹಿ ಆ್ಯಂಪಿ ಥಿಯೇಟರ್‌ ಉದ್ಘಾಟನೆ|pratibha karanji

ಮಕ್ಕಳ ಸುಪ್ತ ಪ್ರತಿಭೆಗೆ ರಂಗಮಂಚಿಕೆಯಾದ ಪರಿಸರ ಸ್ನೇಹಿ ಆ್ಯಂಪಿ ಥಿಯೇಟರ್‌ Ripponpet | ಗ್ರಾಮೀಣ ಭಾಗದಲ್ಲಿ ಪ್ರತಿಭಾ ಕಾರಂಜಿಯ ಮಕ್ಕಳ ಕಲೋತ್ಸವವನ್ನು ತಮ್ಮೂರಿನ ಜಾತ್ರೆ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಹುಂಚಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಲ ದೇವರಾಜ್ ಹೇಳಿದರು. ಹುಂಚ ಗ್ರಾಪಂ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ನಡೆಸಲು ಎಲ್ಲರ ಸಹಕಾರ ಮುಖ್ಯ. ಮಕ್ಕಳು…

Read Full News

ಶಾಂತಿ ಸುವ್ಯವಸ್ಥೆಯಿಂದ ಹಬ್ಬಗಳನ್ನು ಆಚರಿಸಿ – ಡಿವೈಎಸ್ಪಿ|ಗಣೇಶೋತ್ಸವದ ಹಿನ್ನಲೆ ಈದ್ ಮಿಲಾದ್ ಆಚರಣೆ ಮುಂದೂಡಿಕೆಗೆ ಮಸೀದಿ ಸಮಿತಿ ನಿರ್ಧಾರ|dysp

ರಿಪ್ಪನ್‌ಪೇಟೆ :ಗೌರಿ ಗಣೇಶ ಹಬ್ಬ ಸೇರಿದಂತೆ ಈದ್‌ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು.ಹಬ್ಬದ ಮೆರವಣಿಗೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಡಿಜೆ ಬಳಸುವಂತಿಲ್ಲ ಎಂದು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್‌ಪಿ.ಗಜಾನನ ವಾಮನ ಸುತಾರ್ ಹೇಳಿದರು. ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈದ್‌ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳ ಆಚರಣೆಯ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಆಯೋಜಿಸಲಾದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಎಲ್ಲಾ ಸಮುದಾಯದವರು ಎಲ್ಲಾ ಹಬ್ಬಗಳನ್ನು ಶಾಂತಿಯಿಂದ ಆಚರಣೆ ಮಾಡುತ್ತಾ…

Read Full News

ಬಸ್ ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ|arrested

ಬಸ್ ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಬಂಧನ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಿಂದ ಖಾಸಗಿ ಬಸ್‌ನಲ್ಲಿ ಸಾಗರಕ್ಕೆ ದನದ ಮಾಂಸ ತಂದು ಮಾರಾಟ ಮಾಡುತ್ತಿದ್ದ ಸಾಗರ ಮೂಲದ ಇಮ್ತಿಯಾಜ್ ಎನ್ನುವವನನ್ನು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ದನದ ಮಾಂಸ ಸಾಗಾಟಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ಹಲವು ಪ್ರಕರಣದಲ್ಲಿ ಆರೋಪಿಯಾಗಿರುವ ಈತ ಗುರುವಾರ 40 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ವಾರದ ಹಿಂದೆ…

Read Full News

ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ – ಶಾಸಕ ಬೇಳೂರು ಗೋಪಾಲಕೃಷ್ಣ|beluru

ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ ಶಾಸಕ ಬೇಳೂರು ರು ಗೋಪಾಲಕೃಷ್ಣ ಅಭಿಮತ ಹೊಸನಗರ : ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ, ಮಲೆನಾಡಿನಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಉತ್ತಮ ಸಾಧನೆಯನ್ನು ಪ್ರಕಟಿಸುತ್ತಿರುವುದು ಸ್ವಾಗತವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ಹೊಸನಗರ ನೆಹರು ಮೈದಾನದಲ್ಲಿ 23 – 24ನೇ ಸಾಲಿನ 17 ವರ್ಷ ವಯೋಮಿತಿ ಒಳಗಿನ ಪ್ರೌಢಶಾಲಾ ಬಾಲಕ ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ…

Read Full News

ಸಾಗರ – ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ|chine snatching

ಸಾಗರ – ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ|chine snatching ಸಾಗರ : ಇಲ್ಲಿನ ವಿನೋಬಾ ನಗರದ 65 ವರ್ಷದ ವಿಜಯಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ವಿಜಯಮ್ಮ ಅವರು ಅಂಗಡಿಗೆ ಹೋಗಿ ಮನೆಗೆ ಹಿಂದಿರುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳಿದ್ದಾರೆ. ವಿಜಯಮ್ಮ ಅವರು ವಿಳಾಸ ಹೇಳುತ್ತಿದ್ದಾಗ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ…

Read Full News

ರಿಪ್ಪನ್‌ಪೇಟೆ : ಅಕ್ರಮ ಮರಳು ಮತ್ತು ಕಲ್ಲು ಸಾಗಾಟ – ಎರಡು ಟಿಪ್ಪರ್ ಲಾರಿ ವಶ|sand

ರಿಪ್ಪನ್‌ಪೇಟೆ : ಅಕ್ರಮ ಮರಳು ಮತ್ತು ಕಲ್ಲು ಸಾಗಾಟ – ಎರಡು ಟಿಪ್ಪರ್ ಲಾರಿ ವಶ ರಿಪ್ಪನ್‌ಪೇಟೆ : ಅಕ್ರಮವಾಗಿ ಕಲ್ಲು ಮತ್ತು ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ಲಾರಿಯನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನಾದ್ಯಂತ ವಿವಿಧ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪಿಎಸ್‌ಐ ಪ್ರವೀಣ್ ನೇತೃತ್ವದ ಸಿಬ್ಬಂದಿಗಳ ತಂಡ ಗಸ್ತು ತಿರುಗುತ್ತಿರುವಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತಿದ್ದ ಟಿಪ್ಪರ್ ಲಾರಿ ಹಾಗೂ ಅಕ್ರಮವಾಗಿ…

Read Full News

ತೀರ್ಥಹಳ್ಳಿಯಲ್ಲಿ ಮತ್ತೊಂದು ಅಶ್ಲೀಲ ವೀಡಿಯೋ ವೈರಲ್|viral

ತೀರ್ಥಹಳ್ಳಿ ಮತ್ತೊಂದು ಅಶ್ಲೀಲ ವೀಡಿಯೋ ವೈರಲ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಶ್ಲೀಲ ವಿಡಿಯೋಗಳು ಹೆಚ್ಚಾಗಿ ವೈರಲ್​ ಆಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಶ್ಲೀಲ ವಿಡಿಯೋಗಳು ವೈರಲ್​ ಆಗಿ ಕೇಸ್​ ಕೂಡ ದಾಖಲಾಗಿದ್ದವು. ಇದೀಗ ಮತ್ತೊಂದು ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿದೆ.  ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೆ ಅಶ್ಲೀಲ ವಿಡಿಯೋಗಳು ಹರಿದಾಡಿದ್ದು, ಆ ಸಂಬಂಧ  ಕೇಸ್​ ಗಳು ಸಹ ದಾಖಲಾಗಿದ್ದವು. ಆನಂತರ ಹನಿಟ್ರ್ಯಾಪ್ ಸಂಬಂಧ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣ ಹೈಪ್ರೊಫೈಲ್ ಕೇಸ್ ಆಗಿ ಮಾರ್ಪಟ್ಟಿತ್ತು….

Read Full News

ಮೇಲಿನಸಂಪಳ್ಳಿ ಬಡ ಮಹಿಳೆಯ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru

ನೊಂದವರ ಪರ ಧ್ವನಿ ಎತ್ತಿ ಅವರಿಗೆ ಸಹಕಾರ ನೀಡಿದ ಕಾರ್ಯಗಳೇ ನನ್ನ ಜೀವನದಲ್ಲಿ ಅತಿ ಹೆಚ್ಚು ತೃಪ್ತಿ ನೀಡುವ ಕ್ಷಣಗಳಾಗಿದ್ದು ಆ ನಿಟ್ಟಿನಲ್ಲಿ ಬಡ,ನಿರ್ಗತಿಕರ ಧ್ವನಿಯಾಗಿ ಕಾರ್ಯ ನಿರ್ವಹಿಸುತಿದ್ದೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಹೊಸನಗರ ತಾಲೂಕಿನ ಮೇಲಿನಸಂಪಳ್ಳಿ ಗ್ರಾಮದ ಬಡ ಮಹಿಳೆಗೆ ಮಾರುತಿಪುರ ಗ್ರಾಪಂ ಆಶ್ರಯದಲ್ಲಿ ಆಸರೆ ಸಮಿತಿ ನಿರ್ಮಿಸಿಕೊಡುತ್ತಿರುವ ಮನೆಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ ಕಳೆದ ಆರು ವರ್ಷಗಳಿಂದ ಮಹಿಳೆ ತನ್ನ ವಿಕಲಚೇತನ ಮಗಳೊಂದಿಗೆ ನರಕಯಾತನೆ ಅನುಭವಿಸುವಿರುವುದನ್ನು ಸಂಬಂಧಪಟ್ಟವರು ಗಮನಿಸದೇ…

Read Full News

ರಿಪ್ಪನ್‌ಪೇಟೆ : ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ನಾಳೆ(15-09-2023) ಎಸ್ ಪಿ ನೇತ್ರತ್ವದಲ್ಲಿ ಶಾಂತಿಸಭೆ

ರಿಪ್ಪನ್‌ಪೇಟೆ : ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ನಾಳೆ(15-09-2023) ಎಸ್ ಪಿ ನೇತ್ರತ್ವದಲ್ಲಿ ಶಾಂತಿಸಭೆ ರಿಪ್ಪನ್‌ಪೇಟೆ : ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಪ್ರಯುಕ್ತ ನಾಳೆ ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 03:00 ಗಂಟೆಗೆ ರಿಪ್ಪನಪೇಟೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಮುಂಬರುವ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್  ಹಬ್ಬದ ಪ್ರಯುಕ್ತ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಹಾಗೂ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಶಾಂತಿ ಸಭೆಯನ್ನು…

Read Full News

ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್|rpet

ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್ ರಿಪ್ಪನ್‌ಪೇಟೆ : ಹಬ್ಬ ಹರಿದಿನಗಳಲ್ಲಿ ತವರು ಮನೆಗೆ ಹೋಗಿ ಬರುವಷ್ಟು ಸಮಯವಿರದಂತಹ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೊಂಬುಜ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ವರ್ಗದವರು ಬಾಗಿನ ನೀಡಿ ಸತ್ಕರಿಸಿದರು. ರಾಖಿ ಕಟ್ಟುವುದರಿಂದ ಅಣ್ಣ-ತಂಗಿಯರ ಸಂಬಂಧ ಸಹೋದರತ್ವ ಗಟ್ಟಿಯಾಗಿರುತ್ತದೆಂಬ ನಂಬಿಕೆ ನಮ್ಮ ಹಿಂದುಗಳದ್ದಾಗಿದ್ದು ಪೊಲೀಸರು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ಷಣೆಯ…

Read Full News

ರೈಲ್ವೆ ಪೊಲೀಸರ ಮಿಂಚಿನ ಕಾರ್ಯಾಚರಣೆ – ತಾಮ್ರದ ತಂತಿ ಕಳ್ಳತನವೆಸಗಿದ್ದ ಆರೋಪಿಗಳ ಬಂಧನ|arrested

2 ಲಕ್ಷ ರೂ. ಮೌಲ್ಯದ ರೈಲ್ವೇ ಒಹೆಚ್‍ಇ ತಾಮ್ರದ ತಂತಿ ಕಳ್ಳತನ ; ಆರೋಪಿಗಳ ಬಂಧನ ಸಾಗರ : ಆನಂದಪುರ ಬಳಿ ಸುಮಾರು 2 ಲಕ್ಷ ರೂ. ಮೌಲ್ಯದ ರೈಲ್ವೇ ಒಹೆಚ್‍ಇ ತಾಮ್ರದ ತಂತಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ 3 ಮಂದಿ ಆರೋಪಿಗಳು ಮತ್ತು ತಂತಿ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಮೈಸೂರು ರೈಲ್ವೇ ರಕ್ಷಣಾ ವಿಶೇಷ ತಂಡ ಬಂಧಿಸಿದೆ. ಸೆ.13 ರಂದು ರಾತ್ರಿ ರೈಲ್ವೆ ರಕ್ಷಣಾ ಪಡೆಯ ವಿಶೇಷ ತಂಡ, ಮೈಸೂರು ಅಪರಾಧ ವಿಭಾಗದ…

Read Full News

ಶಿವಮೊಗ್ಗ ಮೂಲದ ಶಂಕಿತ ಐಸಿಸ್‌ ಉಗ್ರ ಅರಾಫತ್‌ ಅಲಿ ದೆಹಲಿಯಲ್ಲಿ ಸೆರೆ|arrested

ಶಿವಮೊಗ್ಗ ಮೂಲದ ಶಂಕಿತ ಐಸಿಸ್‌ ಉಗ್ರ ಅರಾಫತ್‌ ಅಲಿ ದೆಹಲಿಯಲ್ಲಿ ಸೆರೆ ಶಿವಮೊಗ್ಗ ಮೂಲದ ಐಸಿಸ್ ಉಗ್ರ ಆರೋಪಿ ಅರಾಫತ್ ಅಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿದೆ. 2020ರಿಂದ ತಲೆಮರೆಸಿಕೊಂಡಿದ್ದ ಅರಾಫತ್ ಅಲಿಯನ್ನು ಬಂಧಿಸುವಲ್ಲಿ ಎನ್‌ಐಎ ಸಫಲವಾಗಿದೆ. ಅರಾಫತ್ ಅಲಿ ಕೀನ್ಯಾದ ನೈರೋಬಿಯಿಂದ ಬರುತ್ತಿದ್ದಾಗ ದೆಹಲಿಯಲ್ಲಿ ಬಂಧನ ಮಾಡಲಾಗಿದೆ. ಈ ಮೂಲಕ ವಿದೇಶಿ ಮೂಲದ ಮಾಡ್ಯೂಲ್‌ಗಳ ಪಿತೂರಿಯನ್ನು ಎನ್‌ಐಎ ಭೇದಿಸಿದಂತಾಗಿದೆ. ಈ ಬೆಳವಣಿಗೆಯಿಂದ ಎನ್‌ಐಎ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಐಸಿಸ್ ಪ್ರಚಾರ ಚಟುವಟಿಕೆಯಲ್ಲಿ…

Read Full News

ಲೈಟ್ ಕಂಬವೇರಿ ದೀಪ ಅಳವಡಿಸುವಾಗ ವಿದ್ಯುತ್ ತಗುಲಿ ಗ್ರಾಪಂ ನೀರಗಂಟಿ ಸಾವು – ಹುಂಚ ಗ್ರಾಪಂ ವಿರುದ್ದ ಪ್ರಕರಣ ದಾಖಲು|electric shock

ಲೈಟ್ ಕಂಬವೇರಿ ದೀಪ ಅಳವಡಿಸುವಾಗ ವಿದ್ಯುತ್ ತಗುಲಿ ಗ್ರಾಪಂ ನೀರಗಂಟಿ ಸಾವು – ಹುಂಚ ಗ್ರಾಪಂ ವಿರುದ್ದ ಪ್ರಕರಣ ದಾಖಲು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆಯಲ್ಲಿ ಲೈಟ್ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸುವಾಗ ಗ್ರಾಪಂ ನೀರಗಂಟಿ ವಿದ್ಯುತ್ ತಗುಲಿ ಸಾವನ್ನಪ್ಪಿ ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ನಾಗರಹಳ್ಳಿ ನಿವಾಸಿ ನಾರಾಯಣ್ ಎಸ್ ಸಿ (60) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಗ್ರಾಪಂ ಅಟೆಂಡರ್ ಶ್ರೀಧರ್ ಗೆ ಗಂಭೀರ ಗಾಯಗಳಾಗಿವೆ. ದೂರಿನಲ್ಲೇನಿದೆ…??? ನಾರಾಯಣ ಎಸ್. ಸಿ…

Read Full News

ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಕಳವು – ದೇವಸ್ಥಾನದ ಸಿಸಿ ಕ್ಯಾಮರಾ ಹಾಗೂ ಡಿವಿಆರ್ ನ್ನು ಪುಷ್ಕರಣಿಗೆ ಎಸೆದ ಭೂಪರು|theft

ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಕಳವು – ದೇವಸ್ಥಾನದ ಸಿಸಿ ಟಿವಿಯನ್ನು ಪುಷ್ಕರಣಿಗೆ ಎಸೆದ ಭೂಪರು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗುಳುಗುಳಿ ಶಂಕರ ಗ್ರಾಮದ ಇತಿಹಾಸ ಪ್ರಸಿದ್ದ  ಶಂಕರೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಿಟಕಿಯ ರಾಡ್ ತುಂಡರಿಸಿ ದೇವಸ್ಥಾನದ ಒಳಹೊಕ್ಕಿರುವ ಖತರ್ ನಾಕ್‌ ಕಳ್ಳರು ಹುಂಡಿಯನ್ನು ಒಡೆದು ಹಣವನ್ನು ಕದ್ದಿದ್ದಾರೆ. ಕಳ್ಳತನದ ಬಳಿಕ ದೇವಸ್ಥಾನದಲ್ಲಿ ಭದ್ರತೆ ಹಿನ್ನಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಡಿವಿಆರ್ ನ್ನು ಕಿತ್ತು ಅಲ್ಲೆ ಸಮೀಪದಲ್ಲಿರುವ ಪುಷ್ಕರಣಿಗೆ ಎಸೆದು ಹೋಗಿದ್ದಾರೆ….

Read Full News

ರಿಪ್ಪನ್ ಪೇಟೆ ಸರ್ಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ|IISC

ರಿಪ್ಪನ್ ಪೇಟೆ ಸರ್ಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ ರಿಪ್ಪನ್‌ಪೇಟೆ;- ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನವು ಭಾನೆತ್ತರಕ್ಕೆ ಬೆಳದಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವಲ್ಲಿ ಐ.ಐ.ಎಸ್.ಸಿ.ಖುದಾಪುರ ತಂಡ ಬಹಳ ಮಹತ್ವದ ಪಾತ್ರ ವಹಿಸಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಸೈನ್ಸ್ ಮುಖ್ಯಸ್ಥ ಪ್ರೋ.ಡಿ.ಎನ್.ರಾವ್.ಹೇಳಿದರು. ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಳ್ಳಕೆರೆ ಖುದಾಪುರ ಐ.ಐ.ಎಸ್.ಸಿ. ಶಾಖೆಯವರು ಕಳೆದ ಮೂರು ವರ್ಷದ ಹಿಂದೆ 1.50 ಲಕ್ಷ ರೂ ವೆಚ್ಚದ ವಿಜ್ಞಾನ…

Read Full News

ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ 16 ಕಿ.ಮೀ ಪಾದಯಾತ್ರೆ – ಬಿಇಒ ಕಚೇರಿ ಮುಂದೆ ಧರಣಿ

ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ 16 ಕಿ.ಮೀ ಪಾದಯಾತ್ರೆ ಹೊಸನಗರ : ತಾಲ್ಲೂಕಿನ ಮೂಡುಗೊಪ್ಪ – ನಗರ ವ್ಯಾಪ್ತಿಯ ದುಬಾರ್‌ತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಈ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಆ ಶಾಲೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 16 ಕಿ.ಮೀ. ಕಾಲ್ನಡಿಗೆಯಲ್ಲಿ ಹೊಸನಗರ…

Read Full News

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ನಡೆಸುವುದರಿಂದ ಮಕ್ಕಳ ಕೌಶಲ್ಯ ವೃದ್ದಿ – ಬೇಳೂರು ಗೋಪಾಲಕೃಷ್ಣ|beluru

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ನಡೆಸುವುದರಿಂದ ಮಕ್ಕಳ ಕೌಶಲ್ಯ ವೃದ್ದಿ – ಬೇಳೂರು ರಿಪ್ಪನ್‌ಪೇಟೆ : ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯನ್ನು ಮಕ್ಕಳಲ್ಲಿ ಬೆಳಸುವುರಿಂದಾಗಿ ಮಕ್ಕಳ ಮನೋಸ್ಥರ್ಯ ವೃದ್ದಿಯಾಗುವುದು ಮತ್ತು ಮೊಬೈಲ್ ಬಳಕೆಯಿಂದಾಗಿ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆ ಕ್ಷೀಣಿಸುವಂತಾಗಿರುವುದರ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಜಾಗೃತರಾಗಿ ಮೊಬೈಲ್‌ನಿಂದ ಅದಷ್ಟು ದೂರವಿಡುವಂತಾಗಬೇಕು ಎಂದು ಸಾಗರ ವಿಧಾನ ಸಭಾಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದರು. ರಿಪ್ಪನ್‌ಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಶಾರದಾ ಶ್ರೀರಾಮಕೃಷ್ಣ ವಸತಿ ವಿದ್ಯಾಲಯ ಮತ್ತು ಕ್ಷೇತ್ರ…

Read Full News

ರಿಪ್ಪನ್‌ಪೇಟೆ : ಸಾಲಭಾದೆ ತಾಳಲಾರದೇ ರೈತ ಆತ್ಮಹತ್ಯೆ|crime news

ರಿಪ್ಪನ್‌ಪೇಟೆ : ಸಾಲಭಾದೆ ತಾಳಲಾರದೇ ರೈತ ಆತ್ಮಹತ್ಯೆ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕೋಡ್ರಿಗೆ ಗ್ರಾಮದ ರೈತನೊಬ್ಬ ಸಾಲಭಾದೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಲುಗುಡ್ಡೆ ಗ್ರಾಮದ ಕೋಡ್ರಿಗೆ ನಿವಾಸಿ ಕೃಷ್ಣಮೂರ್ತಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಭಾನುವಾರದಂದು ಬೆಳೆಗೆ ಸಿಂಪಡಿಸಿದ್ದ ಕ್ರಿಮಿನಾಶಕವನ್ನು ಸೇವನೆ ಮಾಡಿ ಅಸ್ವಸ್ಥಗೊಂಡವರನ್ನು ಅವರ ಹೆಂಡತಿ ಮಗ ಉಪಚರಿಸಿ ತಕ್ಷಣ ಚಿಕಿತ್ಸೆಗಾಗಿ ರಿಪ್ಪನ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ…

Read Full News

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|accident

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ರಿಪ್ಪನ್‌ಪೇಟೆ : ಇಲ್ಲಿನ ಬೆನವಳ್ಳಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಹೊಸನಗರದಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಮಾರುತಿ ಸ್ವಿಫ್ಟ್ ಡಿಜ಼ೈರ್ ಕಾರು ದೂನ ಹಾಗೂ ಬೆನವಳ್ಳಿ ನಡುವೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಉರುಳಿಬಿದ್ದಿದೆ. ಕಾರಿನಲ್ಲಿ ಹೊಸನಗರ ಮೂಲದ ಕುಟುಂಬವೊಂದರ ಐವರು ಪ್ರಯಾಣಿಸುತಿದ್ದರು ಇಬ್ಬರು ಮಹಿಳಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.ಉಳಿದವರು ಅದೃಷ್ಟವಶಾತ್ ಪಾರಾಗಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ…

Read Full News

ರಿಪ್ಪನ್‌ಪೇಟೆ : ಪೊಲೀಸ್ ವಸತಿ ನಿಲಯಗಳ ಬಳಿ NSS ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮ

ರಿಪ್ಪನ್‌ಪೇಟೆ : ಪೊಲೀಸ್ ವಸತಿ ನಿಲಯಗಳ ಬಳಿ NSS ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ರಿಪ್ಪನ್‌ಪೇಟೆ;-ಶಿವಮೊಗ್ಗ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಮತ್ತು ಜಿಲ್ಲಾ ಒಕ್ಕಲಿಗರ ಸಂಘ ಇವರ ಸಹಯೋಗದಲ್ಲಿ ಅಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷೀಕ ಶಿಬಿರ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ಜರುಗಿತು. ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಶಿಬಿರಾರ್ಥಿಗಳು ಮತ್ತು ಶಿಬಿರಾಧಿಕಾರಿ ಪ್ರಕಾಶ್ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಪಿ.ಪ್ರವಿಣ್ ಇವರ ನೇತೃತ್ವದಲ್ಲಿ ಪೊಲೀಸ್ ವಸತಿ ನಿಲಯದ…

Read Full News

ಕರ್ನಾಟಕದಲ್ಲಿ ಮಕ್ಕಳಿಗೆ ಮಾತೃಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ: ಸಚಿವ ಮಧು ಬಂಗಾರಪ್ಪ|soraba

ಕರ್ನಾಟಕದಲ್ಲಿ ಮಕ್ಕಳಿಗೆ ಮಾತೃಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ: ಸಚಿವ ಮಧು ಬಂಗಾರಪ್ಪ ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡ ಕಡ್ಡಾಯವಾಗಿದೆ. ಕನ್ನಡವನ್ನು ಎಲ್ಲ ಮಕ್ಕಳು ಮೊದಲ ವಿಷಯವಾಗಿ ತೆಗೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆ ಗ್ರಾಮದ ಶ್ರೀ ಸಿದ್ಧ ವೃಷಬೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 14 ವರ್ಷದೊಳಿಗಿನ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಮೂರು…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.