ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಏನು ಗೊತ್ತಾ ..?? ಈ ಸುದ್ದಿ ನೋಡಿ
ರಿಪ್ಪನ್‌ಪೇಟೆ : ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು ದೂರುದಾರರ ಮೇಲೆಯೇ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ರಿಪ್ಪನ್‌ಪೇಟೆಯ ಶ್ವೇತಾ ಎನ್ನುವವರ ಮೇಲೆ ಪಟ್ಟಣದ ಠಾಣೆಯಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪದ ಮೇಲೆ ದೂರುದಾರರಾದ ತೀರ್ಥಹಳ್ಳಿ ಮೂಲದ ಆದರ್ಶ್ ಹಾಗೂ ಶಿವಮೊಗ್ಗ ಮೂಲದ ನವೀನ್ ಪ್ರಕರಣ ದಾಖಲಿಸಿದ್ದರು.ಈ ಸಂಧರ್ಭದಲ್ಲಿ ಹೊಸನಗರದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಸೆರಾವ್ ವಂಚನೆಗೊಳಗಾದ ದೂರುದಾರರಿಗೆ ಬೆಂಬಲಿಸಿದ್ದರು.
ವೃತ್ತಿ ವೈಷಮ್ಯದಿಂದ ಏಳಿಗೆ ಸಹಿಸದೇ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಶ್ವೇತಾ ರವರು ಹೊಸನಗರ ನ್ಯಾಯಲಯದಲ್ಲಿ ಖಾಸಗಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೊಸನಗರದ ಸೀಮಾ ಸೆರಾವ್ ,ಆದರ್ಷ್ ಶೆಟ್ಟಿ , ನವೀನ್ ರವರ ಮೇಲೆ 409,384,420,504,506,509 ಐಪಿಸಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ…????
ಶ್ವೇತಾರವರು ರಿಪ್ಪನ್‌ಪೇಟೆಯಲ್ಲಿ ಟೈಲರಿಂಗ್ ಮತ್ತು ಬ್ಯೂಟಿಶಿಯನ್ ಕೆಲಸ ಮಾಡಿಕೊಂಡಿದ್ದು, ಸೀಮಾ ಸೆರಾವ್ ಬ್ಯೂಟಿಶಿಯನ್ ವೃತ್ತಿಯ ವಿಚಾರವಾಗಿ ಮೊದಲಿನಿಂದಲೂ ವೈಮನಸ್ಸು ಇರುತ್ತದೆ, ಶ್ವೇತಾ ರವರ ಕಾರ್ಯಚಟುವಟಿಕೆ ಗುರುತಿಸಿ ಏಶಿಯನ್ ಕಲ್ಚರಲ್ ಅಕಾಡೆಮಿ ಕೊಯಮತ್ತೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ್ದು, ಶ್ವೇತಾ ಏಳಿಗೆಯನ್ನು ಸಹಿಸದ ಆರೋಪಿಗಳು ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದು, ದಿನಾಂಕ: 30-08-2023 ರಂದು 1 ನೇ ಆರೋಪಿಯು ತನಗೆ ಸೇರಿದ 776********, 2 ನೇ ಆರೋಪಿಯು 938******* ಮತ್ತು 3 ನೇ ಆರೋಪಿಯು ತನಗೆ ಸೇರಿದ 767******** ಮೊಬೈಲ್ ನಂಬರ್ ಗಳಿಂದ ಶ್ವೇತಾ ಮತ್ತು ಅವರ ಗಂಡನಿಗೂ ಕರೆ ಮಾಡಿ, ಹಣದ ಬೇಡಿಕೆ ಇಟ್ಟು ಕೊಡದೇ ಇದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುತ್ತಾರೆ, ಆಲದೇ ಇತರೆ ಮೊಬೈಲ್ ನಂಬರ್ ಗಳಿ೦ದಲೂ ಕರೆ ಮಾಡಿ ಪಿರ್ಯಾದಿ ಮತ್ತು ಆಕೆಯ ಗಂಡನ ಮಾನ ಕಳೆದು ಬೀದಿಗೆ ಬರುವಂತೆ ಮಾಡುತ್ತೇವೆ ಎಂದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆ, ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಮುಖ ಆರೋಪಿಯನ್ನು ಬಂದಿಸಿದ್ದು 2 ನೇ ಆರೋಪಿಯಾದ ಶ್ವೇತಾ ಪತ್ತೆಯಾಗಿಲ್ಲ, ವಂಚಕಿಗೂ ಗೌರವ ಡಾಕ್ಟರೇಟ್ ಪದವಿ ಎಂಬಿತ್ಯಾದಿ ಪೋಸ್ಟರ್ ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಅಶ್ಲೀಲ ಪದಗಳಿಂದ ಮೆಸೇಜ್ ಇಮೇಲ್ ಮಾಡಿ ಬೆದರಿಕೆ ಹಾಕಿ ಇತರೆ ವ್ಯಕ್ತಿಗಳ ಫೋಟೋ ತಿದ್ದುಪಡಿ ಮಾಡಿ ಅಶ್ಲೀಲ ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಪಿರ್ಯಾದಿ ಮತ್ತು ಅವರ ಗಂಡನ ಮಾನಹಾನಿ ಮಾಡಿರುತ್ತಾರೆ, ಪಿರ್ಯಾದಿಯು ಪರ ಪುರುಷರೊಂದಿಗೆ ವ್ಯವಹರಿಸಿದ ಬಗ್ಗೆ, ಫೋಟೋ ಗಳು ಇವೆಯೆಂದು ಹೇಳಿ ಹತ್ತು ಲಕ್ಷ ಬೇಡಿಕೆ ಇಟ್ಟು ಕೊಡದೇ ಇದ್ದಲ್ಲಿ ಫೋಟೋ ಬಹಿರಂಗಪಡಿಸಿ ಮಾನ ಹರಾಜು ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದುದಾಗಿ ಆರೋಪಿತರುಗಳು ಪಿರ್ಯಾದಿಯ ಘನತೆ ಗೌರವಕ್ಕೆ ಧಕ್ಕೆ ತರುತ್ತಿದ್ದು ಸದರಿ ಮೇಲ್ಕಂಡ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ.