ರಾಜ್ಯದ್ಲಲಿಯೇ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸಿರುವ ಅಳಿವಿನಂಚಿನಲ್ಲಿರುವ ಡಯಾಸ್ ಪೋರಸ್ ಎಬನಮ್ ಎನ್ನುವ ಕರಿಮರಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರನಿಂದ ಶಿವಮೊಗ್ಗಕ್ಕೆ ಈ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರಿಗೆ ಶಂಕರ್ ವಲಯದ ಅರಣ್ಯಾಧಿಕಾರಿಗಳ ತಂಡ, ದಾಳಿ ನಡೆಸಿ, ಬೊಲೊರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದೆ. ದಾಳಿಯಲ್ಲಿ ಒಟ್ಟು 32 ಕರಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಳೆಹೊನ್ನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದುಬಾರಿ ಬೆಲೆಯ ಕರಿ ಮರದ ನಾಟಾ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು ಲಕ್ಷಾಂತರ ರೂ. ಮೌಲ್ಯದ ನಾಟಾ ವಶಪಡಿಸಿಕೊಳ್ಳಲಾಗಿದೆ.
ಹೊಳೆಹೊನ್ನೂರು ರಸ್ತೆಯಲ್ಲಿ ಬೊಲೇರೋ ಪಿಕಪ್ ವಾಹನದಲ್ಲಿ ಲಕ್ಷಾಂತರ ಮೌಲ್ಯದ ನಾಟಾ ತರಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಂಕರ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ಬೊಲೇರೋ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಬೀಟೆ ನಾಟಾದ ಜೊತೆಗೆ ಕರಿ ಮರದ ನಾಟಾ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ.
ರಾಜ್ಯದಲ್ಲೆ ಮೊದಲ ಬಾರಿ ಕರಿ ಮರದ ನಾಟಾ ವಶಕ್ಕೆ ಪಡೆಯಲಾಗಿದೆ ಎಂದು ಶಂಕರ ವಲಯದ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು. ಡಯಸ್ಪೋರಸ್ ಎಬಿನಂ ಎಂಬ ತಳಿಯ ಮರ ಷೆಡ್ಯೂಲ್ 1ರ ಅಡಿ ಅಪಾಯದ ಅಂಚಿನಲ್ಲಿದೆ. ಆದ್ದರಿಂದ ಈ ಮರದ ನಾಟಾ ಸಾಗಣೆ ಅಪರಾಧ. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ, ಕರಿ ಮರದ ನಾಟ ವಶಪಡಿಸಿಕೊಳ್ಳಲಾಗಿದೆ.
ಬೊಲೇರೋ ಪಿಕಪ್‌ನಲ್ಲಿ ಟೊಮ್ಯಾಟೋ ಸಾಗಣೆಗೆ ಟ್ರೇಗಳಿದ್ದವು. ಅದರ ಕೆಳಗೆ ಟಾರ್ಪಲ್ ಸುತ್ತಿ ಬೀಟೆ ಮತ್ತು ಕರಿ ಮರದ ನಾಟಾ ಇರಿಸಲಾಗಿತ್ತು. ಒಟ್ಟು 32 ನಾಟಾ ವಶಕ್ಕೆ ಪಡೆಯಲಾಗಿದೆ. ಆರೋಪಿ ನಾಟಾವನ್ನು ಎಲ್ಲಿಗೆ ಸಾಗಿಸುತ್ತಿದ್ದ ಎಂಬುದರ ವಿಚಾರಣೆ ನಡೆಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು. ಇದರ