w
Headlines
Home » Hosanagara | ಯಡೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ಸ್ಥಳದಲ್ಲಿ ಕೆಲಕಾಲ ಆತಂಕ

Hosanagara | ಯಡೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ಸ್ಥಳದಲ್ಲಿ ಕೆಲಕಾಲ ಆತಂಕ

ಯಡೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ಸ್ಥಳದಲ್ಲಿ ಕೆಲಕಾಲ ಆತಂಕ
ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.

ತೀರ್ಥಹಳ್ಳಿಯಲ್ಲಿ ಐಟಿಐ ವ್ಯಾಸಾಂಗ ಮಾಡುತ್ತಿರುವ ಯಡೂರು ಮೂಲದ ಹರ್ಷ ಎಂಬ ವಿದ್ಯಾರ್ಥಿಯ ಮೇಲೆ ತೀರ್ಥಹಳ್ಳಿ ಮತ್ತು ಆಗುಂಬೆ ಮೂಲದ ಯುವಕರು ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಶನಿವಾರ ಸಂಜೆ 4.30 ಸಮಯದಲ್ಲಿ ಯಡೂರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರು ರಾಘವೇಂದ್ರ ಭಟ್ಟರವರ ಮನೆಯಲ್ಲಿ ಅಡಿಕೆ ಸುಳಿಯುತಿದ್ದ ಹರ್ಷನ ಮೇಲೆ ಏಕಾಏಕಿ ಮಾರಾಕಾಸ್ತಗಳಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲಿ ಆತಂಕದ ವಾತವರಣವನ್ನು ಸೃಷ್ಟಿಸಿದ್ದಾರೆ.

ಏಕಾಏಕಿ ರಾಘವೇಂದ್ರ ಭಟ್ ರವರ ಮನೆ  ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ ಆತಂಕ ಸೃಷ್ಟಿಸಿದಾಗ ಮಹಿಳೆಯರು ಮಕ್ಕಳು ಕಿರುಚಿಕೊಂಡಿದ್ದಾರೆ ತಕ್ಷಣ ಅಕ್ಕ ಪಕ್ಕದ ಸ್ಥಳೀಯರು ಬರುತಿದ್ದಂತೆ ಬೈಕ್ ನಲ್ಲಿ ಪರಾರಿಯಾಗಿದ್ದರೆ.
ಯುವಕನನ್ನು ತಕ್ಷಣ ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿತೀಶ್ , ಮನೋಜ್,.ರಾಜೀವ್ ಬೈಕ್ ( KA 14EG2826) ಎಂಬ ಯುವಕರು
ಹರ್ಷ ಕೆ ಜಿ ಯವರನ್ನು ಕೊಲೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ನಗರ(ಬಿದನೂರು) ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು‌ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.