ಸಾಗರ – ಇಲ್ಲಿನ ಜನತಾ ಶಾಲೆಯ ಎದುರಿನ ನಿವೇಶನಕ್ಕೆ ಸಂಬಧಿಸಿದಂತೆ ಜುಲೈ 10 ರಂದು ನಡೆದ ಪ್ರತಿಭಟನೆಯ ಹಿನ್ನಲೆಯಲ್ಲಿ ಮಾಜಿ ಸಚಿವರಾದ ಹರತಾಳು ಹಾಲಪ್ಪ ಸೇರಿದಂತೆ 43 ಜನರ ವಿರುದ್ದ ಕೋರ್ಟ್ ಆದೇಶದಂತೆ ಸಾಗರದ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 10 ರಂದು ನಡೆದ ಪ್ರತಿಭಟನೆ ಸಂಧರ್ಭದಲ್ಲಿ ವಿಜಯ್ ಕುಮಾರ್ ಪಾಟೀಲ್ ರವರು ಪ್ರತಿಭಟನಕಾರರಿಗೆ ಮಾನ್ಯ ನ್ಯಾಯಾಲಯದ ಹಂಗಾಮಿ ಪ್ರತಿಬಂದಕ ಆದೇಶ ಇದೆ ಎಂದು ತೋರಿಸಿದರೂ ಸಹ ಅತಿಕ್ರಮಣ ಪ್ರವೇಶ ಮಾಡಿ ದೂರುದಾರ ಮತ್ತು ಅವರ ಕಡೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಪ್ರತಿಭಟನೆ ಮಾಡಿ ದೂರುದಾರನನ್ನು ಸ್ವತ್ತಿನಿಂದ ಹೊರಹಾಕಬೇಕೆಂಬ ಉದ್ದೇಶದಿಂದ ಪ್ರತಿಭಟನಕಾರರು ಗುಂಪುಕಟ್ಟಿಕೊಂಡು ಬಂದು ಜಾಗದಲ್ಲಿ ಅಶಾಂತಿಯನ್ನು ಉಂಟುಮಾಡಿ ಈ ದಿನ ಉಳಿದುಕೊಂಡಿದಿಯ ಇನ್ನೊಂದು ದಿನ ಸಿಕ್ಕರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದು, 5ನೇ ಆರೋಪಿ ನಾನು ಮಾಜಿ ಎಂ.ಎಲ್.ಎ ಎಷ್ಟು ಕೇಸು ನೋಡಿಲ್ಲಾ ಎಂದು ದೂರುದಾರನಿಗೆ ಜೀವ ಬೆದರಿಕೆ ಹಾಕಿ ಮಾದ್ಯಮದ ಎದುರು ಸುಳ್ಳು ಭಾಷಣ ಮಾಡಿರುತ್ತಾರೆ ಎಂದು ದೂರು ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ,ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ , ನಗರಸಭೆ ಮಾಜಿ ಅಧ್ಯಕ್ಷೆ ಮಧುರ ಶಿವಾನಂದ್ , ಗಣೇಶ್ ಪ್ರಸಾದ್ ,ಕುಗ್ವೆ ಅರುಣ್ ,ರವಿ ಬಸರಾಣಿ ಸೇರಿದಂತೆ ಒಟ್ಟು 43 ಜನರ ವಿರುದ್ದ ನ್ಯಾಯಲಯದ ಆದೇಶದಂತೆ ಪ್ರಕರಣ ದಾಖಲಾಗಿದೆ.