Headlines

ಸಾಗರ : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಅಕ್ರಮ ಗೋ ಕಳ್ಳರ ವಿರುದ್ಧ ಪ್ರತಿಭಟನೆ

ಸಾಗರ:ಗೋವು ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿ ಸಾಗರದ ಮಾರಿಕಾಂಬ ದೇವಸ್ಥಾನ ಎದುರು ಇಂದು ಸಾಗರದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾಗರದ ಮಾರಿಕಾಂಬ ದೇವಸ್ಥಾನದ ತವರು ಮನೆ ಎದುರು ಗೋವು ಪೂಜೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.   ಜಿಲ್ಲಾ ರಕ್ಷಣಾಧಿಕಾರಿಗಳು ಬರುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವ ತೀರ್ಮಾನವನ್ನು ವಿಹಿಂಪ ಮತ್ತು ಬಜರಂಗದಳ ತೆಗೆದುಕೊಂಡಿದೆ. ಸಾಗರದ ಬಿ.ಹೆಚ್.‌ರಸ್ತೆಯ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಮಾಡಲಾಗುವುದೆಂದು    ಪ್ರತಿಭಟನಾಕಾರರು ಹೇಳಿದ್ದಾರೆ. ಸರಕಾರದ ವಿರುದ್ದ, ಪೋಲೀಸರ ವಿರುದ್ದ…

Read More

ತಾಳಗುಪ್ಪದಲ್ಲಿ ವಿದ್ಯುತ್ ಲೈನ್ ನಲ್ಲಿ ಬೆಂಕಿ : ಜನರಲ್ಲಿ ಹೆಚ್ಚಿದ ಆತಂಕ

ಸಾಗರ ತಾಲೂಕು ತಾಳಗುಪ್ಪದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಲೈನ್ ಮರಕ್ಕೆ ತಗುಲಿ ಬೆಂಕಿ ಹೊತ್ತುಕೊಂಡಿದೆ. ಸ್ವಲ್ಪ ಹೊತ್ತು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸ್ಪೋಟ ಸಂಭವಿಸಿದೆ.ಈ ಘಟನೆಯಿಂದ ಸುಮಾರು ಮನೆಯ ಟಿವಿ ಗಳು ಸುಟ್ಟು ಭಸ್ಮವಾಗಿದೆ. ತಾಳಗುಪ್ಪದ ರಂಗಪ್ಪ ಗುಡ್ಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಕೆಪಿಟಿಸಿಎಲ್ ಮೂಲಕ ಇಲ್ಲಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಹೈಟೆನ್ಷನ್ ವಯರ್’ಗಳನ್ನು ಹಾಕಲಾಗಿದೆ. ಈ ಹೈಟೆನ್ಷನ್…

Read More

ಸೀರೆ ಉಟ್ಟರೆ ನಳಿನ್​ ಕುಮಾರ್​ ಕಟೀಲ್​ ಹೆಣ್ಣೋ.. ಗಂಡೋ ಅಂತಾ ಗೊತ್ತಾಗಲ್ಲ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​​ ಅವರು ಸೀರೆ ಉಟ್ಟುಕೊಂಡ್ರೆ, ಗಂಡೋ -ಹೆಣ್ಣೋ ಎಂದು ತಿಳಿಯುದಿಲ್ಲ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿಗೆ ಬೆಂಕಿ ಹಚ್ಚಲು ಹೋದವರು. ಅವರು ಸೀರೆ ಉಟ್ಟುಕೊಂಡ್ರೆ, ಗಂಡೋ- ಹೆಣ್ಣೋ ತಿಳಿಯುವುದಿಲ್ಲ. ಕಟೀಲ್​ ಅವರು ತಮ್ಮ ಪಕ್ಷದ ಹುಳುಕನ್ನು ತಾವು ಮುಚ್ಚಿಕೊಂಡ್ರೆ ಸಾಕು, ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು…

Read More

ಲಖಿಂಪುರದ ರೈತರ ಹತ್ಯೆ ಖಂಡಿಸಿ ಸಾಗರ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಹಾಗು ‘ಮೌನಚಾರಣೆ …!

  ಸಾಗರ: ಇಲ್ಲಿನ  ಕಾಂಗ್ರೆಸ್ ಪಕ್ಷದ ಕಛೇರಿ ಮುಂಭಾಗದಲ್ಲಿ   ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಇಂದು ಸಂಜೆ ನಗರ ಅಧ್ಯಕ್ಷರಾದ  ಸುರೇಶ್ ಬಾಬು ರವರ ನೇತೃತ್ವದಲ್ಲಿ ಉತ್ತರ ಪ್ರದೇಶದ ಲಖೀಂಪುರ ಗ್ರಾಮದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಜಯ್ ಮಿಶ್ರಾ ಅವರ ಪುತ್ರನಾದ ಆಶಿಶ್ ಮಿಶ್ರಾ ವಾಹನವನ್ನು ಚಲಾಯಿಸಿ ಹತ್ಯೆಯನ್ನು ಖಂಡಿಸಿ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಮೇಣದ ಬತ್ತಿ ಬೆಳಗಿಸಿ  ಶ್ರದ್ಧಾಂಜಲಿ ಹಾಗು ಮೌನಚಾರಣೆ …

Read More

ಸಾಗರ : ಶಾಸಕರು ಸಾಗರ ನಗರವನ್ನು ಎಣ್ಣೆ ಸಾಗರ ಮಾಡಲು ಹೊರಟಿದ್ದಾರೆ : ಗೋಪಾಲಕೃಷ್ಣ ಬೇಳೂರು

ಸಾಗರ : ನಗರಸಭೆಯಲ್ಲಿ ಒಂದು ವಾರದಿಂದ ನೀರು ಬಿಡಲು ಯಾಂತ್ರಿಕ ತೊಂದರೆ ಎಂಬ ಕಾರಣ ಕೊಟ್ಟಿದ್ದಾರೆ. ಹಿನ್ನೀರಿನಿಂದ ನೀರು ತರುವ ಕೆಲಸವನ್ನ ನನ್ನ ಅವಧಿಯಲ್ಲಿ ಮಾಡಿದ್ದೆ, ಅಲ್ಲಿನಿಂದ ನೀರನ್ನೇಕೆ ಸಾಗರದ ಜನತೆಗೆ ನೀಡಿಲ್ಲ. ಸಾಗರದಲ್ಲಿ ಬೀದಿ ನಾಯಿಗಳ ಹಾವಳಿ, ಬಿಡಾಡಿ ದನಗಳ ಹಾವಳಿ, ಹಂದಿಗಳ ಹಾವಳಿ ತಡೆಯಲು ನಗರಸಭೆ ಆಡಳಿತ ವಿಫಲವಾಗಿದೆ. ಶಾಸಕ ಹರತಾಳು ಹಾಲಪ್ಪ ಸಾಗರ ನಗರವನ್ನು ‘ಎಣ್ಣೆ’ ಸಾಗರ ಮಾಡಲು ಹೊರಟಿದ್ದಾರೆ ಎಂದರು. ಕಾರ್ಗಲ್ ಜೋಗ ಭಾಗಕ್ಕೆ ಇರುವ ಒಂದು ಪೋಲೀಸ್ ಠಾಣೆಯನ್ನು ತುಮರಿ ಭಾಗಕ್ಕೆ…

Read More

ಸಾಗರ : ಸಿಗಂದೂರಿನಲ್ಲಿ ಶರನ್ನವರಾತ್ರಿ : ಅವಧೂತ ವಿನಯ್ ಗುರೂಜಿಯಿಂದ ಆಶಿರ್ವಚನ

ಸಾಗರ: ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದಲ್ಲಿ ಅಕ್ಟೋಬರ್ 07 ರಿಂದ 15ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಸ್ ರಾಮಪ್ಪನವರು ತಿಳಿಸಿದರು. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಕ್ಟೋಬರ್ 07ರಂದು ಗೌರಿಗದ್ದೆಯ ಅರಿವಿನ ಗುರು ಅವದೂತ ಶ್ರೀ ವಿನಯ್ ಗುರೂಜಿ ಆಗಮಿಸಲಿದ್ದು ಅಂಧಕಾರದಿಂದ ಬೆಳಕಿನೆಡೆಗೆ ಎಂಬ ವಿಶೇಷ ಆಶೀರ್ವಚನ ನೀಡಲಿದ್ದಾರೆ. ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ಹಿನ್ನೆಲೆಯಲ್ಲಿ…

Read More

ಸಾಗರ : ಗಾಂಜಾ ಸೇವನೆ ಮಾಡಿದ್ದ ಮೂವರ ಬಂಧನ : ವಿಶೇಷ ಟೆಸ್ಟಿಂಗ್ ಕಿಟ್ ಮೂಲಕ ಪತ್ತೆ :

ಸಾಗರ: ಗಾಂಜಾ ಸೇವಿಸಿದ ಮೂವರನ್ನು ತಪಾಸಣೆಗೆ ಒಳಪಡಿಸಿದ್ದು, ಅವರು ಮಾದಕ ವಸ್ತು ಸೇವಿಸಿದ ವಿಚಾರ ದೃಢಪಟ್ಟಿದ್ದು, ಅವರನ್ನು ಎನ್.ಡಿ.ಪಿ.ಎಸ್.ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತಾಲೂಕಿನ ಆವಿನಹಳ್ಳಿ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಸಾಗರ ಗ್ರಾಮಾಂತರ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಆಗ ಗಾಂಜಾ ಸೇವಿಸಿರಬಹುದು ಎಂಬ ಅನುಮಾನ ಮೂಡಿದೆ.  ನಂತರ ಅವರನ್ನು ಗಾಂಜಾ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷಿಸಲಾಗಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಸೊರಬ ಮೂಲದ ಶಶಾಂಕ್, ಸುಮಂತ್, ಶಿಕಾರಿಪುರದ ಮಹೇಶ್ ಎಂಬುವವರನ್ನು…

Read More

ಸಾಗರ : ಗಾಂಧೀಜಿ -ಶಾಸ್ತ್ರೀಜಿ ಗೆ ನಮನ ಸಲ್ಲಿಸಿದ ಶ್ರೀನಗರ ಯುವಜನ ಸಂಘ

ಸಾಗರದ : ಇಲ್ಲಿನ ಶ್ರೀನಗರದ ಎಂಟನೇ ವಾರ್ಡಿನಲ್ಲಿ ಇಂದು ಮಹಾತ್ಮಾ ಗಾಂಧೀಜಿಯವರ 152 ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 117 ನೇ ಜನ್ಮದಿನದಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ನೇತ್ರತ್ವ ವಹಿಸಿದ್ದ ಶ್ರೀನಗರ ಯುವಜನ ಸಂಘದ ಪ್ರಮುಖರಾದ ಸುಬ್ರಹ್ಮಣ್ಯ ರವರು ಮಾತನಾಡಿ ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು ಅವರ ಹೆಸರು ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಉಳಿದಿದೆ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲೂ  ವರ್ಣಭೇದ ನೀತಿಯ ವಿರುದ್ಧ ಹೋರಾಡಿ…

Read More

ಸಾಗರ : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಚ್ಚಿ ಸಾವು

ಸಾಗರ : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಡಿದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಾಗರ ತಾಲೂಕಿನ ದೊಡ್ಡೇರಿಯಲ್ಲಿ ನಡೆದಿದೆ. ದೊಡ್ಡೇರಿಯ ಹಿರಿಯಪ್ಪ- ಮಮತಾ ದಂಪತಿಯ ಪುತ್ರಿ ಐಶ್ವರ್ಯಾ(7) ಮೃತ ದುರ್ಧೈವಿ.ಮನೆ ಬಳಿ ಆಟವಾಡುತ್ತಿದ್ದಾಗ ಹಾವು ಕಡಿದಿದೆ.ತಕ್ಷಣ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದಿದ್ದಾರೆ.ಬಾಲಕಿಯು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಜೀವ ರಕ್ಷಿಸಲು ಪ್ರಯತ್ನ ಪಟ್ಟ ಕೆಳದಿ ಅಬ್ಬಾಸ್ ನೋವಿನ ಮಾತು ಬಾಲಕಿಯ…

Read More

ಸಾಗರ ಗ್ರಾಮಾಂತರ ಪೋಲೀಸರ ಭರ್ಜರಿ ಕಾರ್ಯಾಚರಣೆ : ಮನೆಗಳ್ಳತನ ಆರೋಪಿ ಮಾಲು ಸಮೇತ ವಶ

  ಸಾಗರ : ಪಟ್ಟಣದ ಸಮೀಪದ ಆವಿನಹಳ್ಳಿ ಬಸ್ ನಿಲ್ದಾಣದ ಬಳಿ 30 ವರ್ಷದ ವ್ಯಕ್ತಿಯನ್ನು ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸಾಗರ ಗ್ರಾಮಾಂತರ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡಿದ್ದು ಗೊತ್ತಾಗಿದೆ. ಈ ವೇಳೆ ಆತನಿಂದ ಬಂಗಾರದ ಬಂಗಾರದ ಆಭರಣ,ಬೆಳ್ಳಿ,ನಗದು ಹಣ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.ಆರೋಪಿಯಿಂದ ಒಟ್ಟು 4.71.660 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾ.ಎಸ್.ಪಿ ಲಕ್ಷ್ಮಿ ಪ್ರಸಾದ್ ಮತ್ತು ಹೆಚ್ಚುವರಿ…

Read More