w
Headlines
Home » ಸಾಗರ : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಚ್ಚಿ ಸಾವು

ಸಾಗರ : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಚ್ಚಿ ಸಾವು

ಸಾಗರ : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಡಿದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಾಗರ ತಾಲೂಕಿನ ದೊಡ್ಡೇರಿಯಲ್ಲಿ ನಡೆದಿದೆ.

ದೊಡ್ಡೇರಿಯ ಹಿರಿಯಪ್ಪ- ಮಮತಾ ದಂಪತಿಯ ಪುತ್ರಿ ಐಶ್ವರ್ಯಾ(7) ಮೃತ ದುರ್ಧೈವಿ.ಮನೆ ಬಳಿ ಆಟವಾಡುತ್ತಿದ್ದಾಗ ಹಾವು ಕಡಿದಿದೆ.ತಕ್ಷಣ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದಿದ್ದಾರೆ.ಬಾಲಕಿಯು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಜೀವ ರಕ್ಷಿಸಲು ಪ್ರಯತ್ನ ಪಟ್ಟ ಕೆಳದಿ ಅಬ್ಬಾಸ್ ನೋವಿನ ಮಾತು

ಬಾಲಕಿಯ ತಂದೆ ಸಾಗರದ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಕೆಳದಿ ರಸ್ತೆಯ ಅಬ್ಬಾಸ್ ಅವರಲ್ಲಿ ನಾಟಿ ಔಷಧಿ ದೊರೆಯುವ ವಿಳಾಸ ಕೇಳಿದ್ದಾರೆ.ಬಾಲಕಿಯು ಅಸ್ವಸ್ಥ ಗೊಂಡಿದ್ದನ್ನು ನೋಡಿದ ಅಬ್ಬಾಸ್ ತಮ್ಮ ಬೈಕಿನಲ್ಲಿ ಬಾಲಕಿಯನ್ನು ಕುಳ್ಳಿರಿಸಿಕೊಂಡು ಬಂದಿದ್ದಾರೆ.

ಬಾಲಕಿಯ ಜೀವ ಉಳಿಸಲು ನಾನು ನನ್ನ ಬೈಕಿನಲ್ಲಿ ಆ ಬಾಲಕಿಯನ್ನು ಕುಳ್ಳಿರಿಸಿ ತುಂಬಾ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದೆ ಆದರೆ ಬಾಲಕಿ ಬದುಕುಳಿಯಲಿಲ್ಲಾ ಎಂದು ಅಬ್ಬಾಸ್ ತುಂಬಾ ಬೇಸರ
 ವ್ಯಕ್ತಪಡಿಸಿದರು.

 ಮಾಹಿತಿ : ಇಮ್ರಾನ್ ಸಾಗರ್

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.