ರಿಪ್ಪನ್ ಪೇಟೆ: ಶಿವಮೊಗ್ಗದ ನರ್ಸಿಂಗ್ ವಿಧ್ಯಾರ್ಥಿನಿ ಬೆಳ್ಳೂರು ಕಾಡಿನಲ್ಲಿ ಶವವಾಗಿ ಪತ್ತೆ : ಕೊಲೆ ಶಂಕೆ !!

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಕಾಡಿನ ಮಧ್ಯೆ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಶವ ಪತ್ತೆಯಾಗಿದೆ. ತಳಲೆ -ಬೆಳ್ಳೂರು ಮಾರ್ಗದ ಮಧ್ಯದಲ್ಲಿ ರಸ್ತೆಯಿಂದ ಸುಮಾರು ಅರ್ಧ ಕಿ.ಮೀ ಕಾಡಿನ ಒಳಗೆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.ಯುವತಿಯು ಶಿವಮೊಗ್ಗದ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು. ಯುವತಿಯ ಹೆಸರು ಕವಿತಾ(22) ಎಂದು ತಿಳಿದುಬಂದಿದ್ದು ಜೋಗ ಸಮೀಪದ ಕಾನೂರು ನಿವಾಸಿಯಾಗಿದ್ದಾಳೆ. ಕಳೆದ ಐದಾರು ವರ್ಷದ ಹಿಂದೆ ರಿಪ್ಪನ್‌ಪೇಟೆಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕಗ್ಗಲಿ ಗ್ರಾಮದ…

Read More

ರಿಪ್ಪನ್ ಪೇಟೆ: ಸರಳವಾಗಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವ

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಸಿದ್ದಪ್ಪನ ಗುಡಿ ಸಮೀಪದಲ್ಲಿರುವ ಶ್ರೀ ಗುರುಸಾರ್ವಭೌಮರ ದೇವಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ  ವಿಜೃಂಭಣೆಯಿಂದ ಮಂಗಳವಾರ ಸರಳವಾಗಿ ಕೋವಿಡ್ ನಿಯಮಾನುಸಾರ ಜರಗಿತು. ವೇದ ಬ್ರಹ್ಮ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾಕೈಂಕರ್ಯ ಜರಗಿತು.  ಈ ಪೂಜಾ ಸಂದರ್ಭದಲ್ಲಿ ನೂರಾರು ಭಕ್ತರು ದೇವರ ದರ್ಶನವನ್ನು ಪಡೆದು ಪುನೀತರಾದರು .ಈ ಪೂಜಾ ಕಾರ್ಯಕ್ರಮದಲ್ಲಿ ಗುರು ರಾಘವೇಂದ್ರ ಸ್ವಾಮಿ ಸಮಿತಿಯ ಅಧ್ಯಕ್ಷರಾದ ಟಿ. ಪುರುಷೋತ್ತಮ್ ರಾವ್. ಪ್ರಧಾನ ಕಾರ್ಯದರ್ಶಿಯಾದ ಕೆ.ಜಿ.ದೇವರಾಜ್ ಕೆರೆಹಳ್ಳಿ…

Read More

ರಿಪ್ಪನ್ ಪೇಟೆ : ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ

ರಿಪ್ಪನ್‌ಪೇಟೆ, 25 ಆಗಸ್ಟ್ 2021: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ವರ್ಚುವಲ್ ವೇದಿಕೆಯ ಮೂಲಕ 2021ರ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಾವಣೆಗೆ ಚಾಲನೆ ನೀಡಿದರು.  ಉದ್ಘಾಟನೆಯ ನಂತರ ಡಾ.ಬಲ್ಲಾಳ್ ಮಾತನಾಡುತ್ತಾ “ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವೀ 20 ವರ್ಷಗಳನ್ನು ಪೂರೈಸಿದ್ದೇವೆ ಎಂದು ತಿಳಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಕಳೆದ 20 ವರ್ಷಗಳಲ್ಲಿ, ನಾವು ಸಾಮಾಜಿಕ ಕಾಳಜಿಯೊಂದಿಗೆ ಉತ್ಕ್ರಷ್ಟ…

Read More

ರಿಪ್ಪನ್ ಪೇಟೆ : ದಯಾಮರಣದ ಮೊರೆ ಹೋದ ಎಂಬತ್ತರ ವೃದ್ದೆ :

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳು ಎಂಬಲ್ಲಿ ವಯೋವೃದ್ಧೆಯೋರ್ವರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದು, ಜೀವನ ನಡೆಸಲು ಆಸರೆಯಾಗಬೇಕಿದ್ದ ಪತಿಯು ಇಹಲೋಕ ತ್ಯಜಿಸಿದ್ದಾರೆ. ಒಬ್ಬಂಟಿಯಾಗಿರುವ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ಸುಮಾರು 80 ವರ್ಷದವರಾಗಿದ್ದಾರೆ.ಹಳೆಯ ಜೋರಾಗಿ ಮಳೆ ಬಂದರೆ ಬಿದ್ದು ಹೋಗುವಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ.ಯಾರೂ ನೆರವಿಗೆ ಬಾರದೇ ಇರುವ ಕಾರಣ ದಯಮರಣಕ್ಕೆ ಸರ್ಕಾರದ ಬಳಿ ಮೊರೆಹೋಗುವತ್ತ ಚಿಂತಿಸಿದ್ದಾರೆ. ತಮ್ಮ ಪತಿಯು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು,ಕೆಲವು  ಕೌಟುಂಬಿಕ ಸಮಸ್ಯೆಯಿಂದ ಬರಬೇಕಾಗಿದ್ದ ಸರ್ಕಾರದ ಪಿಂಚಣಿ ಹಣ ಈ ವಯೋವೃದ್ದೆಯ ಕೈ ಸೇರುತ್ತಿಲ್ಲ.ಈ ವೃದ್ದೆಯು…

Read More

ರಿಪ್ಪನ್ ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ

ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪುರದ ಸಮೀಪ ಸಾಗರ – ತೀರ್ಥಹಳ್ಳಿಯ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಘಟನೆ ಇಂದು ನಡೆದಿದೆ. ಕಲ್ಲೂರಿನ ನಿವಾಸಿಯಾದ ಆದರ್ಶ ಎಂಬುವವರು ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ಬಂದು ವಾಪಾಸ್ಸಾಗುವಾಗ ಸಂಧರ್ಭದಲ್ಲಿ ಸಾಗರ- ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರು ಘಟನೆ ನಡೆದಿದ್ದು,ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನು ಅದೃಷ್ಟಶಾವತ್ ಪಾರಾಗಿದ್ದು ಯಾವುದೇ ರೀತಿಯಾದ ಹಾನಿಯಾಗಿಲ್ಲ. ಘಟನೆಯ ಕುರಿತು ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ರಿಪ್ಪನ್ ಪೇಟೆ: ಕಾಂಗ್ರೆಸ್ ಮುಖಂಡ ಸುಳುಕೋಡು ನಾರಾಯಣಪ್ಪ ನಿಧನ : ಗಣ್ಯರ ಸಂತಾಪ

ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಕೋಡು ಗ್ರಾಮದ ನಾರಾಯಣಪ್ಪ (68) ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ ಅವರ ಆತ್ಮೀಯರಾಗಿದ್ದ ಸುಳುಗೋಡು ನಾರಾಯಣಪ್ಪ ಅವರು ಕಾಂಗ್ರೆಸ್ ಪಕ್ಷ ಹಾಗೂ ಈಡಿಗ ಸಮಾಜದಲ್ಲಿ ಪ್ರಮುಖ ನಾಯಕರಿಂದ ಗುರುತಿಸಿಕೊಂಡಿದ್ದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅವರು ಕೃಷಿಕರಾಗಿದ್ದರೂ ಸಹ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು,…

Read More

ರಿಪ್ಪನ್ ಪೇಟೆ: ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಡಾ. ಆರ್ ಎ ಅಬೂಬಕರ್ ನಿಧನ:

ರಿಪ್ಪನ್ ಪೇಟೆ: ಇಲ್ಲಿನ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ ಪಕ್ಷದ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಡಾ. ಆರ್ ಎ ಅಬೂಬಕರ್ (61) ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗುರುವಾರ ರಾತ್ರಿ ತೀವ್ರ ತರವಾದ ಎದೆನೋವು ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.ಶುಕ್ರವಾರ ಮಧ್ಯಾಹ್ನ 12ಕ್ಕೆ ರಿಪ್ಪನ್ ಪೇಟೆಯ ಖಬರ್ಸ್ಥಾನ್ ನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ….

Read More

ರಿಪ್ಪನ್ ಪೇಟೆ: ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮಂಜೂರಾದ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸಿ : ಗ್ರಾಪಂ ಸದಸ್ಯ ಆಸಿಫ಼್ ಭಾಷಾಸಾಬ್

ರಿಪ್ಪನ್ ಪೇಟೆ: ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸುವಂತೆ ಹಾಗೂ ಪೋಡಿ ಮಾಡಿಕೊಡುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಆಸೀಫ಼್ ಜಿಲ್ಲಾಧಿಕಾರಿಗಳಿಗೆ ರಿಪ್ಪನ್ ಪೇಟೆ ಉಪ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂಬರ್ 59 ರಲ್ಲಿ ರಿಪ್ಪನ್ ಪೇಟೆ ಜನತೆಯ ಬಹುದಿನಗಳ ಕನಸಿನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಈ ಹಿಂದೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ 5 ಎಕರೆ ಜಾಗ…

Read More

ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು :ಮಳಲಿ ಶ್ರೀ

ರಿಪ್ಪನ್ ಪೇಟೆ:ನಾನು ನನ್ನದು ಎಂಬುದಕ್ಕಿಂತ ನಾವು ನಮ್ಮದು ಎಂಬ ಮನೋಭಾವ ಇದ್ದಾಗ ಮಾತ್ರ ಬೆಳೆಯಲಿಕ್ಕೆ ಸಾದ್ಯ ಎಂದು ಮಳಲಿಮಠದ .ಡಾ.ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಬುಧವಾರ ಹೊಸನಗರ ತಾಲೂಕಿನ ಮಸರೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ. ಶ್ರಾವಣ ಮಾಸದ ಅಂಗವಾಗಿ  ಹಮ್ಮಿಕೊಂಡ. ವಿಶೇಷ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ  ಅವರು . ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು. ನಾನು ನನ್ನಿಂದಲೆ ಎಂಬ ಅಹಂಕಾರವನ್ನು ಬಿಡಬೇಕು ಎಂದರು….

Read More

ಸಮಾಜದಲ್ಲಿ ಶಾಂತಿ ಕದಡುವ ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ: ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ: ಆರ್‌ಎಸ್‌ಎಸ್‌, ಬಿಎಸ್‌ವೈ, ಸಿಎಂ ನನ್ನ ಮೇಲೆ ಭರವಸೆ ಇಟ್ಟು ಗೃಹಖಾತೆ ಕೊಟ್ಟಿದ್ದಾರೆ ನನಗೆ ನೀಡಿರುವ ಸ್ಥಾನ ಮತ್ತು ಜವಾಬ್ದಾರಿಯನ್ನು ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತೇನೆ ಎಂದು ನೂತನ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಇಂದಿಲ್ಲಿ ಹೇಳಿದರು. ಅವರು ಇಂದು ಶಿಕಾರಿಪುರಕ್ಕೆ ತೆರಳುವ ಮಾರ್ಗದ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಹೇಳಲಾಗಿದ್ದರೂ ಕೂಡಾ ಕೆಲವು ವ್ಯಕ್ತಿಗಳು ದೇಶದ್ರೋಹದ ಕೃತ್ಯದಲ್ಲಿ ತೊಡಗಿಕೊಂಡಿದ್ದು ಆಂತಹವರನ್ನು ಆರಂಭದಲ್ಲಿ ಚಿವುಟುವ ಕಾರ್ಯ…

Read More