ಆವಿನಹಳ್ಳಿ ಸಮೀಪದಲ್ಲಿ ರಸ್ತೆ ಅಪಘಾತ – ಗಂಡು ಕಾಡುಕೋಣ ಸಾವು|accident
ರಸ್ತೆ ಅಪಘಾತದಲ್ಲಿ ಕಾಡುಕೋಣ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯದಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ಸಾಗರ ಮತ್ತು ಹೊಸನಗರದ ಸುತ್ತಮುತ್ತ ಕಾಡು ಕೋಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕಾಡುಕೋಣಗಳ ವಲಯವಾಗಿದ್ದರಿಂದ ವಾಹನಗಳಿಗೆ ಸಿಲುಕಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಘಟನೆ ಹೆಚ್ಚುತಿದೆ. ಸಾಗರ ಮತ್ತು ಸಿಗಂದೂರು ರಸ್ತೆಯಲ್ಲಿ ಸುಮಾರು 5 ವರ್ಷದ ಗಂಡು ಕಾಡುಕೋಣ ರಕ್ತ ಕಾರಿಕೊಂಡು ರಸ್ತೆಯ ಬಲಭಾಗಕ್ಕೆ ಬಿದ್ದಿದೆ. ಲಾರಿ ಅಥವಾ ದೊಡ್ಡ ವಾಹನಗಳೇ ಈ ಕಾಡು ಪ್ರಾಣಿಯ ಸಾವಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಆವಿನಹಳ್ಳಿ…
