Headlines

“ಮೋದಿ ರಾಂಗ್ ನಂಬರ್”-“ಬಿಜೆಪಿ ರಾಂಗ್ ನಂಬರ್ ” : ವಿನೂತನ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿ ಸಂಘಟನೆ|modi-wrong-number

ಶಿವಮೊಗ್ಗ : ಬೆಲೆ ಏರಿಕೆ, ಭ್ರಷ್ಠಾಚಾರ, ಕಳಪೆ ಕಾಮಗಾರಿ, ಜಾತಿ ಧರ್ಮದ ನಡುವಿನ ವೈಷಮ್ಯ ಕುರಿತು ವಿದ್ಯಾರ್ಥಿ ಸಂಘಟನೆ ವಿನೂತನ ಪ್ರತಿಭಟನೆಗೆ ಮುಂದಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಈ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ.




ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪಕರ ಅಧ್ಯಕ್ಷ ವಿನಯ್ ಕೆ ಸಿ ರಾಜವತ್ “ಮೋದಿ ರಾಂಗ್ ನಂಬರ್” “ಬಿಜೆಪಿ ರಾಂಗ್ ನಂಬರ್ ” ಎಂಬ ಘೋಷಣೆ ಅಡಿ ಮಾ.30 ರಂದು  ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಇದಾಗಿದ್ದು, ಅಣಕು ಪ್ರದರ್ಶನಗಳ ಮುಖಾಂತರ ಶಿವಮೊಗ್ಗ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಮೋದಿ ರಾಂಗ್ ನಂಬರ್ ಬಿಜೆಪಿ ರಾಂಗ್ ನಂಬರ್ ಘೋಷಣೆಗಳ ಮುಖಾಂತರ ಭ್ರಷ್ಟಾಚಾರ ಕಳಪೆ ಕಾಮಗಾರಿ,




ಜಾತಿ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಹೋರಾಟಗಾರರನ್ನು ಹತ್ತಿಕ್ಕುವುದು ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ಗ್ಯಾಸ್ ನ ಬೆಲೆ ಏರಿಕೆ ಹೀಗೆ ನೂರಾರು ವಿಷಯಗಳ ಬಗ್ಗೆ ಅಣಕು ಪ್ರದರ್ಶನದ ಜೊತೆ ಜೊತೆಗೆ ಪ್ರತಿಭಟಿಸಲಾಗುವುದು ಎಂದರು.



Leave a Reply

Your email address will not be published. Required fields are marked *