ತೀರ್ಥಹಳ್ಳಿ : ಇಲ್ಲಿನ ಚಕ್ರತೀರ್ಥದಲ್ಲಿ ಕಿಡಿಗೇಡಿಗಳು ಹಸುವಿನ ಕತ್ತನ್ನು ಕಡಿದು ಬಳಿಕ ರುಂಡವನ್ನು ತುಂಗಾ ನದಿಗೆ ಎಸೆದು ಪರಾರಿ ಆಗಿರುವ ಘಟನೆ ನಡೆದಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ವಿಕೃತಿ ಮೆರೆದಿದ್ದು, ಸ್ಥಳೀಯರು ದುಷ್ಕೃತ್ಯಕ್ಕೆ ಕಿಡಿಕಾರಿದ್ದಾರೆ.
ಸ್ಥಳೀಯರು ಸ್ನಾನ ಮಾಡಲು ಹೊಳೆಗೆ ಇಳಿದಾಗ ವಿಷಯ ಬೆಳಕಿಗೆ ಬಂದಿದ್ದು ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ಹೋಗಲಾಗಿದೆ.
ಇದು ತೀರ್ಥಹಳ್ಳಿ ಪೊಲೀಸರ ವೈಫಲ್ಯ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಿ ಪಿ ಐ ಅಶ್ವಥ್, ಪ. ಪಂ ಅಧ್ಯಕ್ಷೆ ಸುಶೀಲ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಕೋಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.