ಕ್ರೈಂ ಸುದ್ದಿ:
ಶಾಲಾ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ
ಶಾಲಾ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ಸಾಗರ : ನಮ್ಮ ಶಾಲೆ ನಮ್ಮ ಜವಾಬ್ದಾರಿ ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ. ಈ ಯೋಜನೆಯಡಿ 500 ರೂಪಾಯಿಯಿಂದ 6.50 ಕೋಟಿ ರೂ. ವರೆಗೆ ಶಾಲಾಭಿವೃದ್ಧಿಗೆ ದೇಣಿಗೆ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಆ.1ರ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್‌ಜೀ ಫೌಂಡೇಶನ್‌ನಿಂದ ನೀಡಲಾದ ಅನುದಾನದಲ್ಲಿ ಶಾಲಾ…
HOSANAGARA | ಅಕ್ರಮವಾಗಿ ಸಾಗಿಸುತಿದ್ದ 20 ಗೋವುಗಳ ರಕ್ಷಣೆ
HOSANAGARA | ಅಕ್ರಮವಾಗಿ ಸಾಗಿಸುತಿದ್ದ 20 ಗೋವುಗಳ ರಕ್ಷಣೆ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಗೋವುಗಳನ್ನ ಸಾಗಿಸಲು ಯತ್ನಿಸುತ್ತಿದ್ದ ವಾಹನವನ್ನ ತಡೆದು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಕ್ಕೂ ಹೆಚ್ಚು ಗೋವುಗಳನ್ನು ಹೊಸನಗರ ತಾಲ್ಲೂಕಿನ ನಗರದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅಡ್ಡಗಟ್ಟಿ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಗೋವುಗಳನ್ನು ಅಕ್ರಮವಾಗಿ ಕ್ಯಾಂಟರ್ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿರುವ ಖಚಿತ ಮಾಹಿತಿಯನ್ನರಿತ ಸಂಘಟನೆಯ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ…
ಆಂಬುಲೆನ್ಸ್ ಡಿಕ್ಕಿಯಾಗಿ ಸೊನಲೆಯ ಪ್ರವೀಣ್ ಸಾವು | ವರ್ಷದ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಅನಾಥಳಾದ ತಾಯಿ
ಆಂಬುಲೆನ್ಸ್ ಡಿಕ್ಕಿಯಾಗಿ ಸೊನಲೆಯ ಪ್ರವೀಣ್ ಸಾವು | ವರ್ಷದ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಅನಾಥಳಾದ ತಾಯಿ ಆಂಬುಲೆನ್ಸ್ ಡಿಕ್ಕಿಯಾಗಿ ಹೊಸನಗರ ಮೂಲದ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿಲುವಾಗಿಲು ಬಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೊನಲೆ ಗ್ರಾಮದ ಪ್ರವೀಣ್ (30) ಎಂದು ಗುರುತಿಸಲಾಗಿದೆ. ನಿಲುವಾಗಿಲು ಬಳಿಯಲ್ಲಿ ಬೈಕ್ ಹಾಗೂ ಆಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪ್ರವೀಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಕೊಪ್ಪ…
ಅಂದಾಸುರ ರೈಲ್ವೆ ಹಳಿ ಮೇಲೆ ಪುರುಷನ ಶವ ಪತ್ತೆ – ಕೊಲೆ ಶಂಕೆ !?
ಅಂದಾಸುರ ರೈಲ್ವೆ ಹಳಿ ಮೇಲೆ ಪುರುಷನ ಶವ ಪತ್ತೆ – ಕೊಲೆ ಶಂಕೆ !? ರೈಲ್ವೆ ಹಳಿಯ ಮೇಲೆ ಅನುಮಾನಸ್ಪದ ರೀತಿಯಲ್ಲಿ ಪುರುಷನೊಬ್ಬನ ಶವ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ನಡೆದಿದೆ. ಅಂದಾಸುರ ರೈಲ್ವೆ ಗೇಟ್ ಸಮೀಪದಲ್ಲಿರುವ ದೇವಸ್ಥಾನವೊಂದರ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು , ಮೃತ ವ್ಯಕ್ತಿಯನ್ನು ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎನ್ನಲಾಗುತಿದ್ದು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಾಗಿದೆ. ರೈಲು ಹಳಿಯ ಮೇಲೆ ಮೃತದೇಹ…
ಅಕ್ರಮವಾಗಿ ಸಾಗಿಸುತಿದ್ದ 37 ಗೋವುಗಳ ರಕ್ಷಣೆ
ಅಕ್ರಮವಾಗಿ ಸಾಗಿಸುತಿದ್ದ 37 ಗೋವುಗಳ ರಕ್ಷಣೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಿಂದ ಮಂಗಳೂರಿನ ಬಿ.ಸಿ ರಸ್ತೆಗೆ ಗೋವುಗಳನ್ನ ಸಾಗಿಸಲು ಯತ್ನಿಸುತ್ತಿದ್ದ 407 ಐಷರ್ ವಾಹನವನ್ನ ಬಜರಂಗದಳ ಯುವಕರು ತಡೆದು ಜಯನಗರ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನವನ್ನ ಉಷ ನರ್ಸಿಂಗ್ ಹೋಮ್ ವೃತ್ತದ ಬಳಿ ಹಿಂದೂ ಸಂಘಟನೆಗಳು ತಡೆದಿದ್ದಾರೆ. ನಂತರ 112 ಪೊಲೀಸರಿಗೆ ಕರೆಯಲಾಗಿದೆ. 407 ಐಷರ್ ವಾಹನದಲ್ಲಿ ಟಾರ್ಪಲ್ ಮುಚ್ಚಿ ಸಾಗಿಸಲಾಗುತ್ತಿತ್ತು. ಟಾರ್ಪಲ್ ಸಮೇತ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನ ತಂದು ನಿಲ್ಲಿಸಲಾಗಿದೆ. ಟಾರ್ಪಲ್ ಬಿಚ್ಚಿ ನೋಡಿದಾಗ…
ಬೈಕ್ ಅಪಘಾತದಲ್ಲಿ ಯುವಕ ಸಾವು
ಬೈಕ್ ಅಪಘಾತದಲ್ಲಿ ಯುವಕ ಸಾವು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ 22 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಗರ ತಾಲ್ಲೂಕು ಸಾಗರ ಟೌನ್ ಗಾಂಧಿನಗರ ನಿವಾಸಿ ಸಮೀರ್ ಎಂಬುವವರು ನಿನ್ನೆ ದಿನ ಅಣಲೇಕೊಪ್ಪದಲ್ಲಿರುವ ಅವರ ಅಕ್ಕನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮೀರ್ ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣದ ಆಂಬುಲೆನ್ಸ್ ಮೂಲಕ ಸಮೀರ್‌ರವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ…
RIPPONPETE | ಮಳವಳ್ಳಿ ಗೋಪಾಲಣ್ಣ ಇನ್ನಿಲ್ಲ
RIPPONPETE | ಮಳವಳ್ಳಿ ಗೋಪಾಲಣ್ಣ ಇನ್ನಿಲ್ಲ ರಿಪ್ಪನ್‌ಪೇಟೆ : ತಳಲೆ ಸೊಸೈಟಿಯ ಮಾಜಿ ಅಧ್ಯಕ್ಷರು , ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಳವಳ್ಳಿ ಗ್ರಾಮದ ಗೋಪಾಲಣ್ಣ ರವರು ಇಂದು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯದ ಕಾರಣ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಬುಧವಾರ ಬೆಳಗಿನಜಾವ ಮೃತಪಟ್ಟಿದ್ದಾರೆ. ತಳಲೆ ಪ್ರಾಥಮಿಕ ಸಹಕಾರ ಸಂಘದ ಮಾಜಿ…
ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು
ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು ಶಿಕಾರಿಪುರ : ಲಾರಿ ಪಂಚರ್ ಆಗಿದ್ದ ಕಾರಣ ಟಯರ್ ಬದಲಾವಣೆ ಮಾಡುತ್ತಿರುವ ವೇಳೆ ಬೈಕ್ ಒಂದು ಗುದ್ದಿದ ಪರಿಣಾಮ ರಸ್ತೆಯಲ್ಲಿಲಾರಿ ಚಾಲಕ ದುರ್ಮರಣ ಹೊಂದಿದ ಘಟನೆ ಇಂದು ಸಂಜೆ ನಡೆದಿದೆ. ತೀರ್ಥಹಳ್ಳಿಯ ಯಡೇಹಳ್ಳಿಕೆರೆಯ ರಮೇಶ್ (54 ವರ್ಷ ) ಮೃತ ದುರ್ಧೈವಿ. ಶಿಕಾರಿಪುರ ಸಮೀಪದ ಕೆಂಗಟ್ಟಿ ಮತ್ತು ಸಿದ್ದನ್ಪುರ ಗ್ರಾಮದ ಮುಖ್ಯ ರಸ್ತೆಯ ಬಳಿ ಲಾರಿ ಪಂಚರ್ ಆಗಿದ್ದಕ್ಕಾಗಿ ಲಾರಿಯನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿಕೊಂಡು ಟಯರ…
ಕೆಲಸಕ್ಕೆಂದು ಮನೆಯಿಂದ ಹೋಗಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಚಾನಲ್ ನಲ್ಲಿ ಪತ್ತೆ
ಕೆಲಸಕ್ಕೆಂದು ಹೋಗಿದ್ದ ಯುವತಿ ನಾಪತ್ತೆ – ಚಾನಲ್ ನಲ್ಲಿ ಮೃತದೇಹ ಪತ್ತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಿವರಾಮನಗರದ ವಾಸಿಯೊಬ್ಬರ ಮಗಳು 17 ವರ್ಷದ ಯುವತಿ ಸೆ.19 ರಂದು ಪ್ಯಾಕ್ಟರಿ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು,ಇದೀಗ ಆಕೆಯ ಮೃತದೇಹ ಬಿದರೆ ಬಳಿಯ ಭದ್ರಾ ಚಾನಲ್‌ನಲ್ಲಿ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗಳು ಪ್ಯಾಕ್ಟರಿ ಕೆಲಸಕ್ಕೆ ಎಂದು ಹೋದವರು ನಾಪತ್ತೆಯಾಗಿದ್ದರು. ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ಬಳಿಯಲ್ಲಿ ಆಕೆಯ ಬ್ಯಾಗ್, ಚಪ್ಪಲಿ ಮತ್ತು ಐ.ಡಿ.ಕಾರ್ಡ್ ಸಿಕ್ಕಿರುತ್ತದೆ.ಯುವತಿಯ …
ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಸರ್ಕಾರಿ ಶಾಲೆಯ ಹಿಂಭಾಗದ ತುಂಗಾನದಿಯಲ್ಲಿ ಅಪರಿಚಿತ ಶವ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಸಮೀಪದ ಕುಟ್ರ ನಿವಾಸಿ ಕೃಷ್ಣಮೂರ್ತಿ ಎಂದು ತಿಳಿದುಬಂದಿದೆ. ಗುಡ್ಡೆಕೊಪ್ಪ ನಿವಾಸಿ 14-07-2024 ರಂದು ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಮೃತದೇಹದ ಸೊಂಟದಲ್ಲಿ ಸೇಫ಼್ಟಿ ಪಿನ್ ಆಧಾರದ ಮೇಲೆ ಕುಟುಂಬಸ್ಥರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತದೇಹವು ಪ್ರಮಾಣದಲ್ಲಿ ಕೊಳೆತಿದ್ದು ಮುಖ, ದೇಹವನ್ನು…