ಕಾಡುಹಂದಿ ಬೇಟೆಯಾಡಿದ ಇಬ್ಬರ ಬಂಧನ
ಶಿಕಾರಿಪುರ: ಕಾಡು ಹಂದಿಯನ್ನು ಬೇಟೆಯಾಡಿದ ಅಪರಾಧ ಸಂಬಂಧ ಇಬ್ಬರನ್ನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಬಂಧಿಸಲಾಗಿದೆ.
ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಬಳಿಯ ಗಂಗಹೊನಸರ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಹಳೇಜೋಗದ ಲೋಕೇಶ್ ಹಾಗೂ ಮೈಲಾರಿ ಎನ್ನುವವರನ್ನು ಬಂಧಿಸಿದ್ದಾರೆ.
ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಪಾಲು ಮಾಡಿಕೊಳ್ಳುವಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೂ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನಕುಮಾರ್, ಶಿಕಾರಿಪುರ ವಲಯ ಅರಣ್ಯಧಿಕಾರಿ ರೇವಣಸಿದ್ಧಯ್ಯ ಬಿ ಹಿರೇಮಠ್, ಉಪ ವಲಯ ಅರಣ್ಯಾಧಿಕಾರಿಗಳಾದ ಹರೀಶ್ ಅಜ್ಜಪ್ಪನವರ, ಕುಮಾರನಾಯ್ಕ್, ದೊಡ್ಡಮಧುಸೂಧನ್, ಕೊಟ್ರೇಶ್, ಗಸ್ತು ವನಪಾಲಕರಾದ ಶೇಖಪ್ಪ, ಶಿವಪ್ಪ ರಾಥೋಡ್, ಸಿಬ್ಬಂದಿಗಳಾದ ರಿಯಾಜ್ ಅಹ್ಮದ್, ಸುನಿಲ್, ಬೊಮ್ಮ, ರಾಮು ಪಾಲ್ಗೊಂಡಿದ್ದರು