POSTMANNEWS

ನೈಜ ಸುದ್ದಿ ನೇರ ಬಿತ್ತರ..

ಪತಿ ಬೈಕ್ ಅಪಘಾತದಲ್ಲಿ ಸಾವು – ವಿಷಯ ತಿಳಿದು ಪತ್ನಿ ಆತ್ಮಹತ್ಯೆ | ಸಾವಿನಲ್ಲೂ ಒಂದಾದ ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಪತಿ ಬೈಕ್ ಅಪಘಾತದಲ್ಲಿ ಸಾವು – ವಿಷಯ ತಿಳಿದು ಪತ್ನಿ ಆತ್ಮಹತ್ಯೆ | ಸಾವಿನಲ್ಲೂ ಒಂದಾದ ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಹೊಸನಗರ : ಇಲ್ಲಿನ ಮೇಲಿನ ಬೆಸಿಗೆ ಗ್ರಾಮದ ಯುವ ದಂಪತಿಗಳು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ.

ಹೊಸನಗರ ತಾಲೂಕು ಮೇಲಿನ ಬೆಸಿಗೆ ಗ್ರಾಮ ಪಂಚಾಯತಿಯ ಸುತ್ತ ಗ್ರಾಮದ ಕಿಲ್ಲೆ ಕ್ಯಾತರ ಕ್ಯಾಂಪಿನ 25ರ ಹರೆಯದ ಮಂಜುನಾಥ ಎಂಬುವವರು ಡಿಸೆಂಬರ್ 31ರ ಸಂಜೆ ಬೈಕಿನಲ್ಲಿ ಶಿಕಾರಿಪುರಕ್ಕೆ ಹೋಗಿದ್ದು ಶಿಕಾರಿಪುರದ ಬಳಿ ಬೈಕ್  ಅಪಘಾತವಾಗಿದ್ದು ಇಂದು ಬೆಳಿಗ್ಗೆ 9:30 ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ ಮೃತಪಟ್ಟಿದ್ದು ಸುದ್ದಿ ತಿಳಿದ ಆತನ ಪತ್ನಿ ಅಮೃತ(21) ಮನೆ ಶೆಡ್ಡಿನ ಜಂತಿಗೆ ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ವಾಸಿಯಾಗಿದ್ದ ಅಮೃತ ರನ್ನು ಮಂಜುನಾಥ್ ಪ್ರೇಮಿಸಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು.

ಸುದ್ದಿ ತಿಳಿದಾಕ್ಷಣ ಹೊಸನಗರ ಪೊಲೀಸ್ ನವರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಕ್ರಮ ಜರುಗಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ

About The Author

Leave a Reply

Your email address will not be published. Required fields are marked *