ಹೊಸ ವರ್ಷಾಚರಣೆಯ ಮತ್ತಿನಲ್ಲಿ ನಿಯಂತ್ರಣ ತಪ್ಪಿ ಎಗರಿದ ಕಾರು ಬೈಕ್ ಗೆ ಡಿಕ್ಕಿ – ಓರ್ವ ಸಾವು
ಚೇಸ್ ಮಾಡಲು ಹೋಗಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಸಿದ್ದಯ್ಯ ರೋಡ್ ಸರ್ಕಲ್ ಬಳಿ ನಡೆದಿದೆ.
ಹೊಸ ವರ್ಷದ ಮತ್ತಿನಲ್ಲಿ ಕಾರಿಗೆ ಕಲ್ಲು ಹೊಡೆದು ಬೈಕ್ ಸವಾರ ಪರಾರಿಯಾಗುತ್ತಿದ್ದ. ಇದರಿಂದ ಸಿಟ್ಟಗೆದ್ದ ಕಾರು ಚಾಲಕ ಬೈಕ್ ಚೇಸ್ ಮಾಡಿಕೊಂಡು ಬಂದಿದ್ದ. ಈ ವೇಳೆ ಗಾಯತ್ರಿ ಶಾಲೆ ಬಳಿ ಹಂಪ್ ಕಾಣದೆ ಇಬ್ಬರು ಸವಾರರು ಕಾರು ಮತ್ತು ಬೈಕ್‌ನ್ನು ಹಾರಿಸಿದ್ದರು. ಈ ಹಿನ್ನೆಲೆ ಕಾರು ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ನಿನ್ನೆ ತಡರಾತ್ರಿ ಎಂಕೆಕೆ ರೋಡ್‌ನಲ್ಲಿ ಹೊಸ ವರುಷದ ಸಂಭ್ರಮದ ನಡುವೆ ಸಣ್ಣದೊಂದು ಕಿರಿಕ್ ನಡೆದಿದೆ. ಕಾರೊಂದರಲ್ಲಿ ಇಬ್ಬರು ಹುಡುಗಿಯರು ಹಾಗೂ ಓರ್ವ ಹುಡುಗ ಬರುತ್ತಿದ್ದಾಗ, ಅವರ ಕಾರಿಗೆ ಬೈಕ್ ಸವಾರನೊಬ್ಬ ಕಲ್ಲಿನಿಂದ ಹೊಡೆದ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಕಾರನ್ನ ಸ್ಪೀಡಾಗಿ ಚಾಲನೆ ಮಾಡುತ್ತಾ, ಬೈಕ್ ಚೇಸ್ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದವ ಬಂದಿದ್ದಾನೆ. ಆದರೆ ಇರುವ ಐದುವರೆ ಅಡಿ ಅಗಲದ ರಸ್ತೆಯಲ್ಲಿ ಅಷ್ಟೊಂದು ಸ್ಫೀಡಾಗಿ ಬಂದರೆ ಪರಿಸ್ಥಿತಿ ಏನಾಗಬೇಡ. ಅದರಲ್ಲಿಯು ಗಾಯತ್ರಿ ಸ್ಕೂಲ್ ಬಳಿಯಲ್ಲಿ ರಾಕ್ಷಸ ಗಾತ್ರ ಹಂಪ್‌ವೊಂದಿದೆ. ಕಾರು ಚಾಲಕನಿಗೆ ಅದು ಗಮನಕ್ಕೆ ಬಂದಿಲ್ಲ. ಬಂದ ವೇಗದಲ್ಲಿಯೇ ಹಂಪ್ ಹಾರಿಸಿದ್ದಾನೆ. ಕಾರು ಗಾಳಿಯಲ್ಲಿ ಹಾರಿ ಬೈಕ್‌ಗೆ ಡಿಕ್ಕಿಯಾಗಿ ಉಲ್ಟಾ ಬಿದ್ದಿದೆ. ಪರಿಣಾಮ ಒಬ್ಬ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಬೈಕ್‌ಗೂ ಡ್ಯಾಮೇಜ್ ಆಗಿದ್ದು ಆತನೂ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸವರುಷದ ನಡುವೆ ಇಂತವು ನಡೆಯುತ್ತವೆ ಎಂದೇ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಆದಾಗ್ಯು ಘಟನೆಯೊಂದು ನಡೆದಿದೆ. ಕಾರಿನಲ್ಲಿದ್ದವರು ಓವರ್ ಸ್ಪೀಡಾಗಿ ಬರುವುದನ್ನ ಪೊಲೀಸರು ಸಹ ಗಮನಿಸಿದ್ದಾರೆ. ಅವರನ್ನ ನಿಯಂತ್ರಿಸುವಷ್ಟರಲ್ಲಿಯೇ ಅಪಘಾತ ಸಂಭವಿಸಿದೆ. ಮತ್ತೆ ಕೆಲವರು ಹೇಳುವ ಪ್ರಕಾರ ಕಾರಿನಲ್ಲಿದ್ದವರು ಯಾರ ಕಂಟ್ರೋಲ್‌ಗೂ ಸಿಗುತ್ತಿರಲಿಲ್ಲ. ಮೇಲಾಗಿ ಸ್ಥಳಿಯರು ಹೇಳುವಂತೆ ಜೀವಹಾನಿಯಾದರೂ ಕಾರಿನಲ್ಲಿದ್ದವರು ತಮ್ಮ ತಪ್ಪಿಲ್ಲ ಎಂದು ಸ್ಥಳೀಯರ ಜೊತೆಗೆ ವಾದಿಸಿದ್ದಾರೆ. ಈ ದೃಶ್ಯಗಳನ್ನ ಸ್ಥಳಿಯರು ಮೊಬೈಲ್ ಕ್ಯಾಮರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.
ಕಾರಿನಲ್ಲಿದ್ದ ಇಬ್ಬರು ಹುಡುಗಿಯರು ಅಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.