SHIVAMOGGA | ಪಾದಚಾರಿಗೆ ಬೈಕ್ ಡಿಕ್ಕಿ – ಸಾವು
ಶಿವಮೊಗ : ಸಾಗರ ರಸ್ತೆಯ ಎಪಿಎಂಸಿ ಬಳಿ ಹೊರಭಾಗದಲ್ಲಿ ಹಿಟ್ ಅಂಡ್ ರನ್ ಘಟನೆ ನಡೆದಿದ್ದು ಈ ಘಟನೆಯಲ್ಲಿ ಪಾದಚಾರಿಯೊಬ್ಬರು ಸಾವಿಗೀಡಾಗಿದ್ದಾರೆ.
ಸಾಗರದ ರಸ್ತೆಯಲ್ಲಿ ಬರುವ ಸಾನ್ವಿ ಹೋಟೆಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ವಾಹನವೊಂದು ಅಪಘಾತ ಪಡಿಸಿ ನಿಲ್ಲಿಸದೆ ಮುಂದೆ ಸಾಗಿದೆ. ಅಪಘಾತದಲ್ಲಿ ಗಾಯಗೊಂಡವನನ್ನು ಸುಧಾಕರ (55) ಎಂದು ಗುರುತಿಸಲಾಗಿದೆ.
ಸುಧಾಕರ್ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದ ನಿವಾಸಿಯಾಗಿದ್ದು, ಶಿವಮೊಗ್ಗದಲ್ಲಿ ಪರಿಚಯಸ್ಥರು ಮನೆಕಟ್ಟಿಸುತ್ತಿದ್ದರಿಂದ ವಾಚರ್ ಕೆಲಸಕ್ಕೆ ಸುಧಾಕರ್ ನೇಮಕಗೊಂಡಿದ್ದರು.
ಗಾಜನೂರಿನಲ್ಲಿರುವ ತಂಗಿಯ ಮನೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ತಂಗಿ ಮನೆಗೆ ಹೊರಟಿದ್ದ ಸುಧಾಕರ್ ಸಾಗರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವಾಹನವೊಂದು ಅಪಘಾತಪಡಿಸಿದೆ.
ಸುಧಾಕರ್ ಅವರನ್ನು ತಕ್ಷಣ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಡಿ.30 ರಂದು ಅವರು ಅಸುನೀಗಿದ್ದಾರೆ. ಸುಧಾಕರ್ ಅವರ ಪತ್ನಿ 5 ವರ್ಷದ ಹಿಂದೆ ತೀರಿಕೊಂಡಿದ್ದರೆ. ಇವರಿಗೆ ಇಬ್ಬರು ಮಕ್ಕಳಿದ್ದು,3 ವರ್ಷದ ಹಿಂದೆ ಹಿರಿಯ ಪುತ್ರ ಚಂದು ಹೃದಯಾಘಾತದಲ್ಲಿ ಸಾವನ್ಬಪ್ಪಿದ್ದರು.