ವಯೋ ನಿವೃತ್ತಿ ಹೊಂದಿದ ಎಎಸ್ ಐ ಮಂಜಪ್ಪ ಸೇರಿದಂತೆ ಅಧಿಕಾರಿಗಳಿಗೆ ಎಸ್ ಪಿ ಆತ್ಮೀಯ ಬೀಳ್ಕೊಡುಗೆ
ಶಿವಮೊಗ್ಗ: ಡಿ. 31 ರಂದು ವಯೋನಿವೃತ್ತಿ ಹೊಂದಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮಂಜಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‌ಕುಮಾರ್ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮಂಜಪ್ಪ , ದೊಡ್ಡಪೇಟೆ ಎಎಸ್‌ಐ ಆರ್. ಶ್ರೀನಿವಾಸ್, ಶಿಕಾರಿಪುರ ಗ್ರಾಮಾಂತರ ಠಣೆಯ ಪಿಎಸ್‌ಐ ಕೆ. ಮಂಜುನಾಥ್ ವಯೋನಿವೃತ್ತಿ ಹೊಂದಿದ ಅಧಿಕಾರಿಗಳಾಗಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಸತೀಶ್, ಶಾಖಾಧಿಕಾರಿ ಎಂ ಎಂ ಮಾಳಗಿ ಉಪಸ್ಥಿತರಿದ್ದರು.