Headlines

ಎರಡು ಪ್ರತ್ಯೇಕ ಪ್ರಕರಣ – ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಎರಡು ಪ್ರತ್ಯೇಕ ಪ್ರಕರಣ – ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ ಶಿವಮೊಗ್ಗ,: ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ದಾಳಿ ನಡೆದಿದೆ. ಎರಡು ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜೆ. ಹೆಚ್. ಪಟೇಲ್ ಬಡಾವಣೆ ತುಂಗಾ ಚಾನಲ್ ದಂಡೆಯಲ್ಲಿ ವ್ಯಕ್ತಿಯೊಬ್ಬನು ದ್ವಿಚ ಕ್ರ ವಾಹನವನ್ನು ನಿಲ್ಲಿಸಿಕೊಂಡು, ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು   ಗಾಂಜಾ ಮಾರಾಟ ಮಾಡುತ್ತಿದ್ದ ಸಾಗರ ತಾಲೂಕಿನ ಬಿಲಗೋಡಿ ಗ್ರಾಮದ ಪ್ರತಾಪ್ ಎಸ್,…

Read More

ವ್ಹೀಲಿಂಗ್ ಮಾಡಿದ ಯುವಕನಿಗೆ 5 ಸಾವಿರ ರೂ. ದಂಡ

ವ್ಹೀಲಿಂಗ್ ಮಾಡಿದ ಯುವಕನಿಗೆ 5 ಸಾವಿರ ರೂ. ದಂಡ ಶಿವಮೊಗ್ಗ: ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯೇ ವೀಲಿಂಗ್ ಮಾಡಿ ಸಿಕ್ಕಿಬಿದ್ದ ಸವಾರನಿಗೆ 5 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ. ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಗೌರವ್ಲಾಡ್ಜ್ ಸಮೀಪ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್‌ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರನೋರ್ವ ವೀಲಿಂಗ್ ಮಾಡಿದ್ದನು. ಆತನ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದು, ಇದೀಗ ಶಿವಮೊಗ್ಗದ ಜಿಲ್ಲಾ…

Read More

ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಎಟಿಎಂ ಕಾರ್ಡ್ ಕಳ್ಳತನ

ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಎಟಿಎಂ ಕಾರ್ಡ್ ಕಳ್ಳತನ ಶಿವಮೊಗ್ಗ : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ, ನಗದು ಕಳ್ಳತನ ಮುಂದುವರೆದಿದೆ. ನಗರದ KSRTC ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತುವಾಗ ವ್ಯಾನಿಟಿ ಬ್ಯಾಗ್‌ನಿಂದ ಕಳ್ಳತನವಾಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯ ಆರೋಗ್ಯ ವಿಚಾರಿಸಿದ್ದ ಗೀತಾ ಎಂಬುವವರು ನ್ಯಾಮತಿಗೆ ಹಿಂತಿರುಗುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ಗಮನಿಸಿದಾಗ ಜಿಪ್‌ ತೆರೆದಿರುವುದು ಗೊತ್ತಾಗಿದೆ….

Read More

ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ನಡುವೆ ಕಿರಿಕ್ : ಚಾಕು ಇರಿತಕೊಳಗಾದ ಓರ್ವ ಆಸ್ಪತ್ರೆಗೆ ದಾಖಲು

ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ನಡುವೆ ಕಿರಿಕ್ : ಚಾಕು ಇರಿತಕೊಳಗಾದ ಓರ್ವ ಆಸ್ಪತ್ರೆಗೆ ದಾಖಲು ಶಿವಮೊಗ್ಗ: ಮದ್ಯ ಸೇವನೆ ವೇಳೆ ಪ್ರಸ್ತಾಪವಾದ ವಿಷಯದಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ  ಇರಿದು ಗಾಯಗೊಳಿಸಿರುವ ಘಟನೆ ನಗರದಲ್ಲಿ ಸಂಭವಿಸಿದೆ. ಜ.೧೩ ರಂದು ಈ ಬಗ್ಗೆ  ಕಿರಣ್ ಎಂಬುವರು ವಿನೋಬನಗರ ಪೊಲೀಸ್  ಠಾಣೆಯಲ್ಲಿ   ಆನಂದ್, ನಿತಿನ್, ಮೋಹನ್, ಮಾಲತೇಶ,, ರಾಕೇಶ್ ಅಡ್ಡು ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ. ಕಿರಣ್ ಎಂಬುವರ ಸ್ನೇಹಿತನಾದ ಸದಾನಂದ ಇವರಿಗೆ ಆನಂದ ಬಿನ್ ಜಯರಾಮ, ನಿತಿನ್ ಬಿನ್ ನಾಗರಾಜ,…

Read More

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ ಶಿವಮೊಗ್ಗ :   ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು ೪೩ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಳ್ಳಲಾದ ಅಂದಾಜು ಮೌಲ್ಯ ೨೧,೮೪,೬೬೦ ರೂಗಳ ಒಟ್ಟು ೫೬ ಕೆಜಿ ೭೪೦  ಗ್ರಾಂ ತೂಕದ ಗಾಂಜಾವನ್ನು ಗುರುವಾರ ನಾಶಪಡಿಸಲಾಯಿತು. ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ಇಲ್ಲಿ ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷ ಮಿಥುನ್‌ಕುಮಾರ್ ಸಮ್ಮುಖದಲ್ಲಿ…

Read More

ಸ್ತ್ರೀ ಪೀಡಕರಿದ್ದರೆ 112ಕ್ಕೆ ಕರೆ ಮಾಡಿ – ಪಿಎಸ್ ಐ ಸ್ವಪ್ನಾ

ಸ್ತ್ರೀ ಪೀಡಕರಿದ್ದರೆ 112ಕ್ಕೆ ಕರೆ ಮಾಡಿ – ಪಿಎಸ್ ಐ ಸ್ವಪ್ನಾ ಶಿವಮೊಗ್ಗ : ಜ. 16: ‘ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ನಿಮಗೆ ಸಮಸ್ಯೆ, ಉಪಟಳ, ಕಿರಿಕಿರಿ ಉಂಟು ಮಾಡಿದರೆ ಕೂಡಲೇ 112 ಸಂಖ್ಯೆಯ ಸಹಾಯವಾಣಿ ಅಥವಾ ಚೆನ್ನಮ್ಮ ಪಡೆಗೆ ಕರೆ ಮಾಡಿ ಮಾಹಿತಿ ನೀಡಿ. ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳೆಯರ ರಕ್ಷಣೆಗೆಂದೆ ಜಿಲ್ಲಾ ಪೊಲೀಸ್ ಇಲಾಖೆ ಅಸ್ತಿತ್ವಕ್ಕೆ ತಂದಿರುವ ‘ಚನ್ನಮ್ಮ ಪಡೆ’ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾಮಾಂತರ ಠಾಣೆ ಸಬ್ ಇನ್ಸ್’ಪೆಕ್ಟರ್…

Read More

ವಿಳಾಸ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ, ಇರಿತ

ವಿಳಾಸ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ, ಇರಿತ ಶಿವಮೊಗ್ಗ : ನಗರದಲ್ಲಿ ನಿನ್ನೆ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ನಗರದ ಕಸ್ತೂರಿ ಬಾ ರಸ್ತೆಯಲ್ಲಿ ನಡೆದಿದೆ, ವ್ಯಾಪಾರ ಕೇಂದ್ರವಾಗಿರುವ ಮುರುಡೇಶ್ವರ ದೇವಾಲಯದ ಬಳಿ,  ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ವರು ಇಲ್ಲಿನ ಅಂಗಡಿಯೊಂದರ ಬಳಿ ಬಂದು ವಿಳಾಸ ಕೇಳಿದ್ದಾರೆ. ಅಂಗಡಿಯ ಮಾಲೀಕ ಕೇಳಿದ ವಿಳಾಸ ಎಲ್ಲಿದೆ ಎಂದು ತೋರಿಸಿದ್ದಾನೆ. ಅಲ್ಲಿಗೆ ತೆರಳಿದ ನಾಲ್ವರು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊರಕ್ಕೆ…

Read More

ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ; ಆರೋಪಿ ಪೊಲೀಸ್‌ ವಶಕ್ಕೆ

ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ; ಆರೋಪಿ ಪೊಲೀಸ್‌ ವಶಕ್ಕೆ ಅಣ್ಣನೇ ತಮ್ಮನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ�ಅನುಪಿನಕಟ್ಟೆಯ ಲಂಬಾಣಿ ತಾಂಡಾದಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಗಿರೀಶ್‌ ನಾಯ್ಕ (30) ಮೃತ ವ್ಯಕ್ತಿ. ಲಂಬಾಣಿ ತಾಂಡಾದ ಮನೆಯೊಳಗೆ ಲೋಕೇಶ್‌ ನಾಯ್ಕ ಎಂಬಾತ ತನ್ನ ಸಹೋದರ ಗಿರೀಶ್‌ನನ್ನು ಕೊಲೆ ಮಾಡಿದ್ದಾನೆ. ವೈಯಕ್ತಿಕ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಗಿರೀಶನ ತಲೆ ಭಾಗಕ್ಕೆ ತೀವ್ರ ಗಾಯವಾಗಿ, ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ. ಲೋಕೇಶ್‌ನನ್ನು ವಶಕ್ಕೆ ಪಡೆಯಲಾಗಿದೆ….

Read More

SORABA | ನರ್ಸ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳರು

SORABA | ನರ್ಸ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳರು ಸೊರಬ: ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು ಮಾಂಗಲ್ಯ ಸರವನ್ನು ಕಳ್ಳರು ಕಿತ್ತು ಪರಾರಿಯಾದ ಘಟನೆ ಶನಿವಾರ ರಾತ್ರಿ 10.30ರ ಸುಮಾರಿಗೆ ಪಟ್ಟಣದ ಚಾಮರಾಜ ಪೇಟೆಯಲ್ಲಿ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀ ಬಾಯಿ  ಮಾಂಗಲ್ಯ ಸರ ಕಳೆದುಕೊಂಡವರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಮರಳುವಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಮಹಿಳೆಯ ಗಮನವನ್ನು ಬೇರೆಡೆ…

Read More

ವಯೋ ನಿವೃತ್ತಿ ಹೊಂದಿದ ಎಎಸ್ ಐ ಮಂಜಪ್ಪ ಸೇರಿದಂತೆ ಅಧಿಕಾರಿಗಳಿಗೆ ಎಸ್ ಪಿ ಆತ್ಮೀಯ ಬೀಳ್ಕೊಡುಗೆ

ವಯೋ ನಿವೃತ್ತಿ ಹೊಂದಿದ ಎಎಸ್ ಐ ಮಂಜಪ್ಪ ಸೇರಿದಂತೆ ಅಧಿಕಾರಿಗಳಿಗೆ ಎಸ್ ಪಿ ಆತ್ಮೀಯ ಬೀಳ್ಕೊಡುಗೆ ಶಿವಮೊಗ್ಗ: ಡಿ. 31 ರಂದು ವಯೋನಿವೃತ್ತಿ ಹೊಂದಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮಂಜಪ್ಪ ಸೇರಿದಂತೆ  ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‌ಕುಮಾರ್  ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮಂಜಪ್ಪ , ದೊಡ್ಡಪೇಟೆ ಎಎಸ್‌ಐ ಆರ್. ಶ್ರೀನಿವಾಸ್, …

Read More