Headlines

ಹೊಸ ವರ್ಷಾಚರಣೆಗೆ ಬಂದವರನ್ನು ನಿಮ್ಮಲ್ಲಿಯೇ ಉಳಿಸಿಕೊಳ್ಳಿ – ಹೋಮ್ ಸ್ಟೇ, ಲಾಡ್ಜ್ ಮಾಲೀಕರಿಗೆ ಎಸ್ ಪಿ ಖಡಕ್ ಸೂಚನೆ

ಹೊಸ ವರ್ಷಾಚರಣೆಗೆ ಬಂದವರನ್ನು ನಿಮ್ಮಲ್ಲಿಯೇ ಉಳಿಸಿಕೊಳ್ಳಿ – ಹೋಮ್ ಸ್ಟೇ, ಲಾಡ್ಜ್ ಮಾಲೀಕರಿಗೆ ಎಸ್ ಪಿ ಖಡಕ್ ಸೂಚನೆ ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಖ್ಯಾತಿಯ ಶಿವಮೊಗ್ಗ ನಗರದಲ್ಲಿ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಗೆ ಯಾವುದೇ ನಿರ್ಬಂಧಗಳನ್ನು ಸರ್ಕಾರದಿಂದ ವಿಧಿಸಲಾಗಿಲ್ಲ. ಆದರೆ, ಮಧ್ಯರಾತ್ರಿ 1 ಗಂಟೆವರೆಗೂ ಹೊಸ ವರ್ಷಾಚರಣೆಗೆ ಆಚರಿಸಲು ಅವಕಾಶ ನೀಡಲಾಗಿದ್ದು, ಮಧ್ಯರಾತ್ರಿ 1 ಗಂಟೆಯ ನಂತರ ನಿಮ್ಮ ಹೋಟೆಲ್, ಲಾಡ್ಜ್ ಹಾಗೂ ಹೋಮ್‌ ಸ್ಟೇಗಳಿಗೆ ಬರುವ ಗ್ರಾಹಕರನ್ನು ಅಲ್ಲಿಯೇ ಉಳಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು ಇಲ್ಲವೇ ಅವರನ್ನು ಸುರಕ್ಷಿತವಾಗಿ…

Read More

ಅಡಿಕೆ ಕಳ್ಳತನಗೈದಿದ್ದ ದಂಪತಿಗಳ ಬಂಧನ

ಅಡಿಕೆ ಕಳ್ಳತನಗೈದಿದ್ದ ದಂಪತಿಗಳ ಬಂಧನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಶಿವಮೊಗ್ಗದ ಲಕ್ಕಿನಕೊಪ್ಪದ ದಂಪತಿ ಅರೆಸ್ಟ್‌ ಆಗಿದ್ದಾರೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ ನಡೆದ ಅಡಕೆ ಕಳ್ಳತನ ಪ್ರಕರಣ ಸಂಬಂದ ಪೊಲೀಸರು ತನಿಖೆ ನಡೆಸಿ ಶಿವಮೊಗ್ಗದ ಲಕ್ಕಿನಕೊಪ್ಪ ನಿವಾಸಿ ಸಾದಿಕ್‌ ಹಾಗೂ ಸಲ್ಮಾ ಎಂಬವರನ್ನ ಬಂಧಿಸಿದ್ದಾರೆ. ಎನ್‌ಆರ್‌ಪುರದ ಮುತ್ತಿನಕೊಪ್ಪದಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣದ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಸಂಶಯದ ಮೇರೆಗೆ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆಡೆಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಗೊತ್ತಾಗಿದೆ….

Read More

ಕೌಟುಂಬಿಕ ಕಲಹ : ಶಿವಮೊಗ್ಗದಲ್ಲಿ ಆನಂದಪುರದ ರುಕ್ಸಾನಳ ಬರ್ಬರ ಹತ್ಯೆ – ಗಂಡನಿಂದಲೇ ನಡೆಯಿತು ಘೋರ ಕೃತ್ಯ

ಕೌಟುಂಬಿಕ ಕಲಹ : ಶಿವಮೊಗ್ಗದಲ್ಲಿ ಆನಂದಪುರದ ರುಕ್ಸಾನಳ ಹತ್ಯೆ – ಗಂಡನಿಂದಲೇ ನಡೆಯಿತು ಘೋರ ಕೃತ್ಯ ಶಿವಮೊಗ್ಗ: ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿಯೋರ್ವ ಪತ್ನಿಗೆ ಚೂರಿಯಿಂದ ಇರಿದು ಕೊ*ಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ವಾದಿ ಎ ಹುದಾ ಬಡಾವಣೆ ಯಲ್ಲಿ ಭಾನುವಾರ ನಡೆದಿದೆ. ಆನಂದಪುರದ ನಿವಾಸಿ ರುಕ್ಸನಾ (೩೮) ಹತ್ಯೆಗೀಡಾದ ದುರ್ಧೈವಿಯಾಗಿದ್ದಾರೆ. ಎಸಿ ಮೆಕಾನಿಕ್ ಕೆಲಸ ಮಾಡುವ ಪತಿ ಯೂಸೂಫ್ ರೌಫ್ (೪೫) ರನ್ನು  ತುಂಗಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಕೌಟುಂಬಿಕ ವಿಚಾರಕ್ಕೆ…

Read More

ಹಣಗೆರೆಕಟ್ಟೆ ಲಾಡ್ಜ್ ನಲ್ಲಿ ಯುವತಿಯ ಕೊಲೆಗೈದಿದ್ದ ಆರೋಪಿಯ ಬಂಧನ

ಹಣಗೆರೆಕಟ್ಟೆ ಲಾಡ್ಜ್ ನಲ್ಲಿ ಯುವತಿಯ ಕೊಲೆಗೈದಿದ್ದ ಆರೋಪಿಯ ಬಂಧನ ಶಿವಮೊಗ್ಗ : ಇಲ್ಲಿನ ಹಣಗೆರೆಕಟ್ಟೆಯ ಲಾಡ್ಜ್‌ವೊಂದರಲ್ಲಿ ಎಂಟು ತಿಂಗಳ ಹಿಂದೆ ನಡೆದಿದ್ದ ಯುವತಿಯ ಕೊಲೆ ಪ್ರಕರಣದ ಆರೋಪಿಯನ್ನ ಮಾಳೂರು ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಮಾಳೂರು ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಇದೀಗ ಮುಂದಿನ ಕಾನೂನು ಪ್ರಕ್ರಿಯೆಗಳನ್ನ ನಡೆಸುತ್ತಿದ್ದಾರೆ. 2024 ರ ಏಪ್ರಿಲ್‌ 4 ರಂದು ಹಣಗೆರೆ ಕಟ್ಟೆಯ ಲಾಡ್ಜ್‌ ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು….

Read More

ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು

ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು ಶಿವಮೊಗ್ಗ: ದಾರಿಯಲ್ಲಿ ಸಿಗುವ ವ್ಯಕ್ತಿಗಳು ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಹೇಗೆಲ್ಲಾ ಯಾಮಾರಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನುವಂತಹ ಪ್ರಕರಣವೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ವೀರಶೈವ ರುದ್ರಭೂಮಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮಾತನಾಡಿಸಿದ್ದಾರೆ. ಕರುಬರಪಾಳ್ಯದ ದುರ್ಗಮ್ಮನ ದೇವಸ್ಥಾನದ ಹುಂಡಿಗೆ ಹಣ ಹಾಕಬೇಕು. ಆದರೆ ದೇವಸ್ಥಾನದ ಬಾಗಿಲು ಹಾಕಿದೆ. ಆ ದುಡ್ಡನ್ನ ನಿಮಗೆ ಕೊಡುತ್ತೇವೆ. ಸಂಜೆ ನೀವೆ ಹಾಕಬಹುದಾ ಎಂದು ಕೇಳಿದ್ದಾರೆ….

Read More

ತಾರಕಕ್ಕೇರಿದ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು

ತಾರಕಕ್ಕೇರಿದ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಶಿಕಾರಿಪುರ : ಅನೈತಿಕ ಸಂಬಂಧದ ವಿಚಾರಕ್ಕೆ ರಾತ್ರಿ ಇಡೀ ನಡೆದ ಜಗಳ ತಾರಕಕ್ಕೇರಿ ಪತಿ ಕಂದಲಿಯಿಂದ ಕೊಚ್ಚಿ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ ಶಿಕಾರಿಪುರ ಟೌನ್ ರಾಘವೇಂದ್ರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ರೇಣುಕಾ (40) ಕೊಲೆಯಾದ ದುರ್ದೈವಿ. ಈಕೆಯನ್ನು ಪತಿ ನಾಗರಾಜ್ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ….

Read More

ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಶಿವಮೊಗ್ಗ:ಬೊಮ್ಮನಕಟ್ಟೆಯ ಗರಡಿ ಮನೆ ಬಳಿಯಿರುವ ತೋಟದಲ್ಲಿನ ಮಾವಿನ ಮರಕ್ಕೆ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣವೆಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳವಾರ  ಬೆಳಿಗ್ಗೆ ೬-೩೦ ಕ್ಕೆ  ವಾಕಿಂಗ್‌ಗೆ ತೆರಳಿದ್ದ ಮಹಿಳೆ ಹೇಮಾವತಿ (೫೦) ತಮ್ಮ ತೋಟದಲ್ಲಿಯೇ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬೊಮ್ಮನಕಟ್ಟೆಯಲ್ಲಿ ಪತಿ ದೇವೇಂದ್ರಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಹೇಮಾವತಿ  ಪ್ರತಿನಿತ್ಯ…

Read More

ಬೇಲಿ ಹಾಕುವ ವಿಚಾರ – ಕೊಡಲಿಯಿಂದ ಹಲ್ಲೆ

ಬೇಲಿ ಹಾಕುವ ವಿಚಾರ – ಕೊಡಲಿಯಿಂದ ಹಲ್ಲೆ ಸೊರಬ : ತಾಲೂಕಿನ ಆನವಟ್ಟಿ ಗ್ರಾಮದ ತಿಮ್ಮಾಪುರ ಗ್ರಾಮದಲ್ಲಿ ಖಾಲಿ ನಿವೇಶನಕ್ಕೆ ಬೇಲಿ ಹಾಕುವ ವಿಚಾರದಲ್ಲಿ ಮಾರಾಮಾರಿ ನಡೆದ ಬಗ್ಗೆ ವರದಿಯಾಗಿದೆ. ಅಣ್ಣಪ್ಪ (58) ಎನ್ನುವವರ ಪಕ್ಕದ ಮನೆಯ ರಿಜ್ವಾನ್ ಎಂಬಾತ ಕೊಡಲಿಯಿಂದ ಹಲ್ಲೆ ನಡೆಸಿ ಅಣ್ಣಪ್ಪ ದಂಪತಿಗಳಿಗೆ ಅವಾಚ್ಯ ಶಬ್ದ ಮತ್ತು ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ರಿಜ್ವಾನ್, ಸಹೋದರ ಕರೀಮುಲ್ಲಾ, ರುಕ್ಸನಾ ಮತ್ತು  ಶಬಾನಾ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಣ್ಣಪ್ಪನವರ…

Read More

ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್

ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್ ಹಳೆಯ ಬೊಮ್ಮನಕಟ್ಟೆಯಲ್ಲಿ ಶನಿವಾರ ನಡೆದ ರೌಡಿ ಶೀಟರ್ ರಾಜೇಶ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರ ಹಾಡಹಗಲೇ ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ರಾಜೇಶ್ ಶೆಟ್ಟಿಯನ್ನು ಬರ್ಬರ ಹತ್ಯೆಗೈದಿದ್ದರು. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ  ಚಿಟ್ಟೆ ನಾಗ, ಗಣೇಶ, ಕಿರಣ್‌ ಗೌಡ, ವೆಂಕಟೇಶ್‌ ರನ್ನು…

Read More

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಶಿವಮೊಗ್ಗ ನಗರದಲ್ಲಿ ವ್ಯಕ್ತಿಯೊಬ್ಬನನ್ನ ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ. ನಗರದ ಹಳೆಬೊಮ್ಮನ ಕಟ್ಟೆಯ ಮಾರಮ್ಮಗುಡಿ ಸಮೀಪದ ಗ್ಯಾರೇಜ್‌ ಒಂದರ ಬಳಿಯಲ್ಲಿ ಕಬಡ ರಾಜೇಶ್‌ ಶೆಟ್ಟಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸುಮಾರು ಒಂದು ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು ವಿನೋಬನಗರ ಪೊಲೀಸರು ದೌಡಾಯಿಸಿದ್ದಾರೆ. ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸ್ ನಲ್ಲಿದ್ದ ಎನ್ನಲಾಗುತಿದ್ದು,ಇತ್ತೀಚೆಗಷ್ಟೇ ತನ್ನ ವಿರೋಧಿ…

Read More