ವಿಳಾಸ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ, ಇರಿತ
ಶಿವಮೊಗ್ಗ : ನಗರದಲ್ಲಿ ನಿನ್ನೆ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ.
ನಗರದ ಕಸ್ತೂರಿ ಬಾ ರಸ್ತೆಯಲ್ಲಿ ನಡೆದಿದೆ, ವ್ಯಾಪಾರ ಕೇಂದ್ರವಾಗಿರುವ ಮುರುಡೇಶ್ವರ ದೇವಾಲಯದ ಬಳಿ, ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ವರು ಇಲ್ಲಿನ ಅಂಗಡಿಯೊಂದರ ಬಳಿ ಬಂದು ವಿಳಾಸ ಕೇಳಿದ್ದಾರೆ. ಅಂಗಡಿಯ ಮಾಲೀಕ ಕೇಳಿದ ವಿಳಾಸ ಎಲ್ಲಿದೆ ಎಂದು ತೋರಿಸಿದ್ದಾನೆ.
ಅಲ್ಲಿಗೆ ತೆರಳಿದ ನಾಲ್ವರು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊರಕ್ಕೆ ಬಂದು ದೂರದಿಂದಲೇ ವಿಳಾಸ ಹೇಳಿದ ಅಂಗಡಿಯವನಿಗೆ ನಿಂದಿಸಿದ್ದಾರೆ. ಆಗ ಅಂಗಡಿಯಾತ ತನ್ನ ಅಂಗಡಿಯಿಂದ ಹೊರಬಂದು ಯುವಕರನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಓರ್ವ ಯುವಕ ತನ್ನ ಬಳಿ ಇದ್ದ ಮಾರಕಾಸ್ತ್ರ ತೆಗೆದು ಅಂಗಡಿಯಾತನಿಗೆ ಚುಚ್ಚಿದ್ದಾನೆ. ಅದೇ ವೇಳೆ ಉಳಿದ ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಸ್ಥಳೀಯ ವ್ಯಾಪಾರಸ್ಥರು, ಹಲ್ಲೆಗೆ ಮುಂದಾದವರ ಮೇಲೆ ದಾಳಿ ಮಾಡಿ, ಅಂಗಡಿಯವನನ್ನು ರಕ್ಷಿಸಿದ್ದಾರೆ.ಈ ನಡುವೆ ಓರ್ವ ಯುವಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೆಟ್ಟು ತಿಂದಿದ್ದಾನೆ.

