POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೆದ್ದಾರಿಯಲ್ಲಿ ಜೀಪ್ ಪಲ್ಟಿ – ಮೂವರು ಸಾವು , ನಾಲ್ವರ ಸ್ಥಿತಿ ಗಂಭೀರ

Screenshot 20250115 142550 Chrome.jpg

ಹೆದ್ದಾರಿಯಲ್ಲಿ ಜೀಪ್ ಪಲ್ಟಿ – ಮೂವರು ಸಾವು , ನಾಲ್ವರ ಸ್ಥಿತಿ ಗಂಭೀರ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನೆಗವಾಡಿ ಗ್ರಾಮ ಸಮೀಪದ ಹಿರೇಮಾಗಡಿ ಕ್ರಾಸ್‌ನ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಘಟನೆ ನಡೆದಿದೆ.

ಕಣಸೋಗಿಯಿಂದ ಎಸ್.ಎನ್. ಕೊಪ್ಪ ಕಡೆಗೆ ಹೋಗುತ್ತಿದ್ದ ಜೀಪ್‌ನಲ್ಲಿ ಕಬ್ಬೂರು, ಕೊಪ್ಪ, ಕಣಸೋಗಿ ಗ್ರಾಮದ 8 ಜನ ಪ್ರಯಾಣಿಸುತ್ತಿದ್ದರು. ಹೆದ್ದಾರಿ ಅಂಚಿನಲ್ಲಿದ್ದ ಸಿಮೆಂಟ್ ಕಂಬಗಳಿಗೆ ಜೀಪ್‌ ಡಿಕ್ಕಿ ಹೊಡೆದ ಪರಿಣಾಮ ಗದ್ದೆಗೆ ಉರುಳಿ ಪಲ್ಟಿಯಾಗಿದೆ.

ಚಿಕ್ಕಕಣ್ಣೂರು ಗ್ರಾಮದ ಹನುಮಂತಪ್ಪ (50) . ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಮತ್ತು ಕಣಸೋಗಿ ಗ್ರಾಮದ ರೇಣುಕಮ್ಮ . (65) ಶಿಕಾರಿಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.