Headlines

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ

ಶಿವಮೊಗ್ಗ :   ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು ೪೩ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಳ್ಳಲಾದ ಅಂದಾಜು ಮೌಲ್ಯ ೨೧,೮೪,೬೬೦ ರೂಗಳ ಒಟ್ಟು ೫೬ ಕೆಜಿ ೭೪೦  ಗ್ರಾಂ ತೂಕದ ಗಾಂಜಾವನ್ನು ಗುರುವಾರ ನಾಶಪಡಿಸಲಾಯಿತು.

ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ಇಲ್ಲಿ ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷ ಮಿಥುನ್‌ಕುಮಾರ್ ಸಮ್ಮುಖದಲ್ಲಿ ಈ ಕಾಯ್ ನಡೆಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಎ. ಜಿ. ಕಾರ್ಯಪ್ಪ, ಮೇ|| ಶುಶ್ರುತ ಬಯೋ ಮೆಡಿಕಲ್ ಪ್ರೈವೇಟ್ ಲಿಮಿಟೆಡ್ ಸೊಸೈಟಿಯ ಸಂಸ್ಥಾಪಕ ಶೇಖರ್,  ಕಾರ್ಯದರ್ಶಿ ಡಾ|| ಗಿರೀಶ್ ಸಿ. ಎಸ್, ಪರಿಸರ ಅಧಿಕಾರಿಗ ರಮೇಶ್,  ಡಿಎಸ್ಪಿ ಬಾಬು ಆಂಜನಪ್ಪ, ಭದ್ರಾವತಿ ಡಿಎಸ್ಪಿ ನಾಗರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *