
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ ಶಿವಮೊಗ್ಗ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು ೪೩ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಳ್ಳಲಾದ ಅಂದಾಜು ಮೌಲ್ಯ ೨೧,೮೪,೬೬೦ ರೂಗಳ ಒಟ್ಟು ೫೬ ಕೆಜಿ ೭೪೦ ಗ್ರಾಂ ತೂಕದ ಗಾಂಜಾವನ್ನು ಗುರುವಾರ ನಾಶಪಡಿಸಲಾಯಿತು. ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ಇಲ್ಲಿ ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷ ಮಿಥುನ್‌ಕುಮಾರ್ ಸಮ್ಮುಖದಲ್ಲಿ…