ಕ್ರೈಂ ಸುದ್ದಿ:
ಆಸ್ಪತ್ರೆ ಮುಂಭಾಗದ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಸಾವು
ಆಸ್ಪತ್ರೆ ಮುಂಭಾಗದ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಸಾವು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿರುವ ತೆರೆದ ನೀರಿನ ತೊಟ್ಟಿಯಲ್ಲಿ ಶುಕ್ರವಾರ ಮೂರು ವರ್ಷದ ಮಗು ಬಿದ್ದು ಮೃತಪಟ್ಟಿದೆ. ಮೃತ ಮಗು ಮತ್ತಿಕೋಟೆ ಗ್ರಾಮದ ನಿವಾಸಿ ಇಮ್ರಾನ್ ಪುತ್ರ ಮೊಹಮದ್ ಅಯಾನ್(3) ಎಂದು ತಿಳಿದು ಬಂದಿದೆ. ಇಮ್ರಾನ್ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಸಂಬಂಧಿಕರ ಆರೋಗ್ಯ ವಿಚಾರಿಸಲು ಮಗುವನ್ನು ಜೊತೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು…
ANANDAPURA | ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ANANDAPURA | ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಆನಂದಪುರ : ಸಾಲಭಾದೆ ತಾಳಲಾರದೆ ರೈತರೊಬ್ಬರು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡೆಹಳ್ಳಿ ಗ್ರಾಪಂ ವ್ಯಾಪ್ತಿಯ ಗೇರುಬೀಸ್ ನಲ್ಲಿ ನಡೆದಿದೆ. ಗೇರುಬೀಸು ನಿವಾಸಿ ರಾಮಚಂದ್ರ (48) ಮೃತ ದುರ್ಧೈವಿಯಾಗಿದ್ದಾರೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವ್ಯವಸಾಯಕ್ಕಾಗಿ ಸಾಲ ಮಾಡಿದ್ದು ಬೆಳೆಯು ಕೈಕೊಟ್ಟ ಹಿನ್ನಲೆಯಲ್ಲಿ ಮನನೊಂದು ಮನೆಯ ಹಿಂಭಾಗದಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RIPPONPETE | ಕೊಡಚಾದ್ರಿ ಮಹಿಳಾ ಸೊಸೈಟಿಯಲ್ಲಿ ಲಕ್ಷಾಂತರ ರೂ ಅವ್ಯವಹಾರ – ವ್ಯವಸ್ಥಾಪಕಿಯ ಬಂಧನ
ಕೊಡಚಾದ್ರಿ ಮಹಿಳಾ ಸೊಸೈಟಿಯಲ್ಲಿ ಲಕ್ಷಾಂತರ ರೂ ಅವ್ಯವಹಾರ – ವ್ಯವಸ್ಥಾಪಕಿಯ ಬಂಧನ ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕೊಡಚಾದ್ರಿ ಮಹಿಳಾ ಸೌಹಾರ್ಧ ಪತ್ತಿನ ಸಹಕಾರಿ ಸಂಘದಲ್ಲಿ ರೂ. 31,59,164/-ರೂ ಅವ್ಯವಹಾರ ನಡೆದಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸೊಸೈಟಿಯ ವ್ಯವಸ್ಥಾಪಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ನಿವಾಸಿ ಪವಿತ್ರಾ ಎನ್ ಬಂಧಿತ ಆರೋಪಿಯಾಗಿದ್ದಾರೆ. ಕೊಡಚಾದ್ರಿ ಮಹಿಳಾ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಮುಖ್ಯ ಶಾಖೆ ತೀರ್ಥಹಳ್ಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿತಾ ರವರು ದಾಖಲಿಸಿದ…
ಹುಲಿಕಲ್ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ
ಹುಲಿಕಲ್ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ರಾತ್ರಿ 8 ಗಂಟೆಯ ಸುಮಾರಿಗೆ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಧರ್ಮದರ್ಶಿ ಮೋಹನ್ ನಂಬಿಯಾರ್ ಅವರ ಬೊಲೆರೋ…
ಸಿಗಂದೂರು ಬಳಿಯಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ
ಸಿಗಂದೂರು ಬಳಿಯಲ್ಲಿ ತೆಪ್ಪ ಮುಳುಗಿ ಮೂವರು ಕಣ್ಮರೆ ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆಯಾಗಿರುವ ಘಟನೆ ಇಂದು ಸಂಜೆ ನಡೆದಿದೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಇವತ್ತು ಘಟನೆ ಸಂಭವಿಸಿದ್ದು ಮೂವರು ಯುವಕರು ಕಣ್ಮರೆಯಾಗಿದ್ದಾರೆ. ಚೇತನ್, ಸಂದೀಪ್ ಮತ್ತು ರಾಜು ಎಂಬುವವರು ಕಣ್ಮರೆಯಾಗಿದ್ದಾರೆ.ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರಾದ ಯುವಕರು ಕಣ್ಮರೆಯಾಗಿದ್ದಾರೆ. ತೆಪ್ಪದಲ್ಲಿ ಐವರು ಯುವಕರು ತೆರಳುತಿದ್ದು ಈ ವೇಳೆಯಲ್ಲಿ ತೆಪ್ಪ ಮಗುಚಿ ಮೂವರು ಕಣ್ಮರೆಯಾಗಿದ್ದಾರೆ ಇನ್ನಿಬ್ಬರು ಈಜಿ ದಡ ಸೇರಿದ್ದಾರೆ ಎನ್ನಲಾಗುತ್ತಿದೆ. ಸಿಗಂದೂರು,…
ಆಸ್ತಿ ವಿಚಾರದಲ್ಲಿ ಚಿಕ್ಕಪ್ಪನಿಂದಲೇ ಚಾಕು ಇರಿತ
ಆಸ್ತಿ ವಿಚಾರದಲ್ಲಿ ಚಿಕ್ಕಪ್ಪನಿಂದಲೇ ಚಾಕು ಇರಿತ SHIVAMOGGA | ಸಂಬಧಿಕರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದು ಒರ್ವನಿಗೆ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಗೌರವ್ ಹೋಟೆಲ್ ಬಳಿ ನಡೆದಿದೆ. ಸ್ಥಳೀಯ ನಿವಾಸಿ ಶ್ರೀರಂಗ ಎಂಬಾತನಿಗೆ ಅವರ ಚಿಕ್ಕಪ್ಪ ಚಾಕು ಇರಿದಿದ್ದಾರೆ.ಈ ಹಿಂದೆಯೂ ಸಹ ಇವರಿಬ್ಬರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕಳೆದ ಭಾನುವಾರ ಮತ್ತೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಶ್ರೀರಂಗನಿಗೆ ಚಿಕ್ಕಪ್ಪ ಚಾಕುವಿನಿಂದ ಇರಿದಿದ್ದಾರೆ. ಈ ಸಂಬಂಧ ದೊಡ್ಡಪೇಟೆ…
ಕಡವೆ ಭೇಟೆ -ಓರ್ವನ ಬಂಧನ , ನಾಲ್ವರು ಪರಾರಿ
ಕಡವೆ ಭೇಟೆ -ಓರ್ವನ ಬಂಧನ , ನಾಲ್ವರು ಪರಾರಿ ಕಡವೆ ಬೇಟೆಯಾಡಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿದ್ದು ಉಳಿದ ನಾಲ್ವರು ಪರಾರಿಯಾಗಿರುವ ಘಟನೆ ಜಿಲ್ಲೆಯ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ಮಂಗಳವಾರ(ನ.12) ನಡೆದಿದೆ. ಬಂಧಿತ ಆರೋಪಿಯನ್ನು ಮಂಜುನಾಥ್ ಎನ್ನಲಾಗಿದ್ದು ಬಂಧಿತನಿಂದ ಕಡವೆ ಮಾಂಸ ಬೇಟೆಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶಿಶ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ನಾಲ್ವರು ಪರಾರಿಯಾಗಿದ್ದು ಅವರ ಪತ್ತೆಗೆ…
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತಿದ್ದ ನಟೋರಿಯಸ್ ಖದೀಮನ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತಿದ್ದ ನಟೋರಿಯಸ್ ಖದೀಮನ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು ಹಲವು ವರ್ಷಗಳಿಂದ ಮನೆಗಳ್ಳತನವೆಸಗುತ್ತಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಪರಾರಿಯಾಗುತಿದ್ದ ನಟೋರಿಯಸ್ ಖದೀಮನನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಬಂಕಾಪುರ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ. ಖಾಜಾ ತಂದೆ ಹಜರೇಸಾಬ ಹಾವೇರಿ, 26 ವರ್ಷ, 3ನೇ ಕ್ರಾಸ್, ಈಶ್ವರನಗರ, ಹುಬ್ಬಳ್ಳಿ, ಧಾರವಾಡ ಜಿಲ್ಲೆ, ಬಂಧಿತ ಆರೋಪಿಯಾಗಿದ್ದಾನೆ. ದಿನಾಂಕ 5-10-2024ರಂದು ರಾತ್ರಿ ಬಂಕಾಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಮನೆಗೆ ನುಗ್ಗಿದ್ದ ಯಾರೋ, ಮನೆಯಲ್ಲಿದ್ದ…
RIPPONPETE | ದುರ್ಗಾಂಬ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ
RIPPONPETE | ದುರ್ಗಾಂಬ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ ಬಸ್ ಪಲ್ಟಿಯಾಗಿ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿಯಲ್ಲಿ ನಡೆದಿದೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತಿದ್ದ ದುರ್ಗಾಂಬ ಬಸ್ ಗೆ ಹೊಸನಗರದಿಂದ ಬರುತಿದ್ದ ಭತ್ತ ಕಟಾವು ಯಂತ್ರವನ್ನು ಕೊಂಡೊಯ್ಯುತಿದ್ದ ತಮಿಳುನಾಡಿನ ಲಾರಿಗೆ ಡಿಕ್ಕಿಯಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣತಪ್ಪಿ ಬಸ್ ಪಲ್ಟಿಯಾಗಿದ್ದು, ಬಸ್ ನಲ್ಲಿ 20 ಪ್ರಯಾಣಿಕರಿದ್ದು…
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ – 62ವರ್ಷದ ವೃದ್ದನಿಗೆ ಶಿಕ್ಷೆ ಪ್ರಕಟ
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ – 62ವರ್ಷದ ವೃದ್ದನಿಗೆ ಶಿಕ್ಷೆ ಪ್ರಕಟ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 27 ವರ್ಷದ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡ 62 ವರ್ಷದ ವೃದ್ಧನಿಗೆ ಇಲ್ಲಿನ 2ನೇ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2016ನೇ ಸಾಲಿನಲ್ಲಿ ಶಿವಮೊಗ್ಗ ಟೌನ್ ನ 62 ವರ್ಷದ ವ್ಯಕ್ತಿಯೊಬ್ಬ 27 ವರ್ಷದ ಮಹಿಳೆಯೊಬ್ಬಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು. ಆಕೆಯ ಫೋಟೋಗಳನ್ನು…