POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬೈಕ್  ವೀಲಿಂಗ್ ಮಾಡಿದ್ದ ಯುವಕನಿಗೆ ದಂಡ

Screenshot 20241228 203733 Chrome.jpg

ಬೈಕ್  ವೀಲಿಂಗ್ ಮಾಡಿದ್ದ ಯುವಕನಿಗೆ ದಂಡ

ಶಿವಮೊಹ್ಹ: ನಗರದಲ್ಲಿ ಬೈಕ್ ವೀಲಿಂಗ್ ಮಾಡಿದ್ದ ವಿದ್ಯಾರ್ಥಿಯೊಬ್ಬನಿಗೆ 6 ಸಾವಿರ ರೂಪಾಯಿ ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಆರೋಪಿಯು ನಂಬರ್ ಪ್ಲೇಟ್ ಇಲ್ಲದೇ ನಗರದಲ್ಲಿ ಬೈಕ್ ಓಡಿಸುತ್ತಿದ್ದಾಗ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ನೇತೃತ್ವದಲ್ಲಿ ತಡೆದು ವಿಚಾರಣೆ ಮಾಡಲಾಗಿದೆ. ಆ ವೇಳೆ, ಮೊಬೈಲ್ ಪರಿಶೀಲಿಸಿದಾಗ ಬೈಕ್ ವೀಲಿಂಗ್ ಮಾಡಿದ ವಿಡಿಯೊ ಚಿತ್ರೀಕರಿಸಿದ್ದು, ಇನ್ ಸ್ಟಾಗ್ರಾಂನಲ್ಲಿ ಪತ್ತೆಯಾಗಿತ್ತು. ಆತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು.

ಹೊಸ ವರ್ಷದಲ್ಲಿ ಸೈಬರ್‌ ಅಪರಾಧ ಪ್ರಕರಣಗಳಿಂದ ಜಾಗೃತರಾಗಿರುವಂತೆ ಎಚ್ಚರಿಕೆ ನೀಡುವ ಸಂಬಂದ ಯೂಟ್ಯೂಬರ್‌ ವಿಕ್ಕಿಪೀಡಿಯಾ ಮತ್ತು ಅಮಿತ್ ಚಿಟ್ಟೆ ರಚಿಸಿರುವ ಹೊಸ ಹಾಡಿಗೆ ಪೊಲೀಸ್‌ ಇಲಾಖೆ ಕೈ ಜೋಡಿಸಿದೆ. ಈ ವಿಡಿಯೋವನ್ನು ಎಸ್‌ಪಿ ಮಿಥುನ್‌ ಕುಮಾರ್‌ ತಮ್ಮ ಟ್ವಿಟ್ಟರ್‌ ಅಕೌಂಟ್‌ ನಲ್ಲಿ ಷೇರ್‌ ಮಾಡಿದ್ದು ಜಾಗೃತಿ ಮೂಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.