ತಾಳಗುಪ್ಪ – ಮೈಸೂರು ರೈಲಿನಲ್ಲಿ ಮಾಂಗಲ್ಯ ಸರ ಕಳವು – 72 ಗಂಟೆಗಳಲ್ಲಿ ಪತ್ತೆ

ತಾಳಗುಪ್ಪ – ಮೈಸೂರು ರೈಲಿನಲ್ಲಿ ಮಾಂಗಲ್ಯ ಸರ ಕಳವು – 72 ಗಂಟೆಗಳಲ್ಲಿ ಪತ್ತೆ

ತಾಳಗುಪ್ಪ – ಮೈಸೂರು ರಾತ್ರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ರೈಲ್ವೆ ಪೊಲೀಸರು ಮೂರೇ ದಿನದಲ್ಲಿ ಬೇಧಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು ಆತನಿಂದ 3 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಧರ್ಮನಾಯ್ಕ್‌ ಬಂಧಿತ ಆರೋಪಿಯಾಗಿದ್ದಾನೆ. ಕದ್ದ ಮಾಂಗಲ್ಯ ಸರವನ್ನು ತನ್ನೂರಿನಲ್ಲಿ ಮಾರಾಟ ಮಾಡಲು ತೆರಳುವಾಗ ಈತ ಸಿಕ್ಕಿಬಿದ್ದಿದ್ದಾನೆ.

ಡಿಸೆಂಬರ್‌ 23ರಂದು ರೈಲಿನಲ್ಲಿ ಮಾಂಗಲ್ಯ ಸರ ಕಳ್ಳತನ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈ ಹಿನ್ನೆಲೆ ಜಿಲ್ಲೆಯಲ್ಲಿ ಪೊಲೀಸರು ಮತ್ತಷ್ಟು ಮುಂಜಾಗ್ರತೆ ವಹಿಸಿದ್ದರು. ಆನಂದಪುರ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ವಿಚಾರಣೆ ತೀವ್ರಗೊಳಿಸಿದಾಗ ಮಾಂಗಲ್ಯ ಸರ ಕಳ್ಳತನ ಮಾಡಿದ್ದನ್ನು ಬಾಯಿಬಿಟ್ಟಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ 72 ಗಂಟೆಯಲ್ಲಿ ಆರೋಪಿಯನ್ನ ಪತ್ತೆಹಚ್ಚಿದ ಆರ್ ಪಿ ಎಫ್ ಇನ್ ಸ್ಪೆಕ್ಟರ್ ಆದ ಬಿ.ಕೆ.ಪ್ರಕಾಶ್ ಮತ್ತು ತಂಡಕ್ಕೆ ಐಜಿ ಗೌರವಿಸಿ ಅಭಿನಙದಿಸಿದ್ದಾರೆ.

Leave a Reply

Your email address will not be published. Required fields are marked *