ಅಬಕಾರಿ ಇಲಾಖೆ ದಾಳಿ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ
ಶಿವಮೊಗ್ಗ ನಗರದ ಸವಳಂಗ ರಸ್ತೆಯ ಫ್ಲೆ ಓವರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳು ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ದಾವಣಗೆರೆ ವಿಭಾಗ, ದಾವಣಗೆರೆ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರು, ಶಿವಮೊಗ್ಗ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ವಲಯ-1 ರ ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಇವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎ-1 ಹರೀಶ, ಎ-2 ಶಿವು ಚನ್ನಗಿರಿ ತಾಲ್ಲೂಕು ಇವರು ಮದ್ಯವನ್ನು ನೋಂದಣಿ ಸಂಖ್ಯೆ ಕೆಎ 17 ಹೆಚ್‌ಕ್ಯು 0728 ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ಜಪ್ತಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಚಂದ್ರಪ್ಪ ಎಸ್.ಡಿ, ಅಬಕಾರಿ ಮುಖ್ಯ ಪೇದೆಗಳಾದ ಜಯರಂಜ್ ಡಿ, ಮಹಮ್ಮದ್ ಅಸ್ರಾವುದ್ದೀನ್ ಖಾನ್, ಅಬಕಾರಿ ಪೇದೆಗಳಾದ ನಾಗಪ್ಪ ಶಿರೋಳ್, ನಾಗಪ್ಪ, ರವಿ ಹೆಚ್, ನವೀನ್ ಹೆಚ್ ಬಿ ಹಾಗೂ ಇತರ ಅಬಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರೆಂದು ಅಬಕಾರಿ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.