Headlines

HOSANAGARA | ಮನೆಯ ಹೆಂಚು ತೆಗೆದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನ

ಹೊಸನಗರ 20241227 143540 0000.jpg

HOSANAGARA | ಮನೆಯ ಹೆಂಚು ತೆಗೆದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನ

ಹೊಸನಗರ ಗೋರಗೋಡು ಗ್ರಾಮದ ನಿವಾಸಿಯೊಬ್ಬರ ಮನೆಯ ಹೆಂಚು ತೆಗೆದು ಬರೋಬ್ಬರಿ 9 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಗೊರಗೋಡು ಗ್ರಾಮದ ನಿವಾಸಿ ಪ್ರತಿಭಾ ಕೃಷ್ಟೋಜಿರಾವ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಳರು ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿರುವ ಕಳ್ಳರು ಗೋದ್ರೇಜ್ ಬೀರುವಿನಲ್ಲಿಟ್ಟಿದ್ದ ಬಳೆ, ಸರ, ಓಲೆ ಸೇರಿದಂತೆ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದಾರೆ.ಈ ವೇಳೆ ಮನೆಯವರು ಶುಭ ಕಾರ್ಯವೊಂದರ ಹಿನ್ನಲೆಯಲ್ಲಿ ಹೈದರಾಬಾದ್‌ಗೆ ತೆರಳಿದ್ದರು ಎನ್ನಲಾಗಿದೆ.

ಹೈದರಬಾದ್‌ನಿಂದ ವಾಪಸ್‌ ಬಂದ ಬಳಿಕ ನಡೆದ ಘಟನೆ ಬೆಳಕಿಗೆ ಬಂದಿದ್ದು ಈ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.