w
Headlines
Home » ಬೈಕ್ ಗೆ ಅಡ್ಡ ಬಂದ ಪ್ರಾಣಿ ತಪ್ಪಿಸಲು ಹೋಗಿ ಅಪಘಾತ: ಚಿಕಿತ್ಸೆ ಫಲಿಸದೆ ಫೈನಾನ್ಸ್ ಸಿಬ್ಬಂದಿ ಸಾವು

ಬೈಕ್ ಗೆ ಅಡ್ಡ ಬಂದ ಪ್ರಾಣಿ ತಪ್ಪಿಸಲು ಹೋಗಿ ಅಪಘಾತ: ಚಿಕಿತ್ಸೆ ಫಲಿಸದೆ ಫೈನಾನ್ಸ್ ಸಿಬ್ಬಂದಿ ಸಾವು

GridArt 20260626

ಬೈಕ್ ಗೆ ಅಡ್ಡ ಬಂದ ಪ್ರಾಣಿ ತಪ್ಪಿಸಲು ಹೋಗಿ ಅಪಘಾತ: ಚಿಕಿತ್ಸೆ ಫಲಿಸದೆ ಫೈನಾನ್ಸ್ ಸಿಬ್ಬಂದಿ ಸಾವು

A 25-year-old finance company collection executive died after losing control of his bike while trying to avoid an animal on the road near Kallapura in Channagiri, Shivamogga district.

ಶಿವಮೊಗ್ಗ: ಚನ್ನಗಿರಿ ತಾಲ್ಲೂಕಿನ ಜೋಳದಾಳ್ ರಸ್ತೆಯ ಕಲ್ಲಾಪುರ ಗ್ರಾಮದ ಬಳಿ ರಸ್ತೆಗೆ ಅಡ್ಡ ಬಂದ ಪ್ರಾಣಿಯನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತರನ್ನು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗೌಡೇಹಟ್ಟಿ ಗ್ರಾಮದ ಪುನೀತ್ ಜಿ.ಆರ್. (25) ಎಂದು ಗುರುತಿಸಲಾಗಿದೆ. ಅವರು ಭದ್ರಾವತಿಯ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕಲೆಕ್ಷನ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾಹಿತಿಯ ಪ್ರಕಾರ, ಪುನೀತ್ ಅವರು ಚನ್ನಗಿರಿಯಲ್ಲಿ ಕಲೆಕ್ಷನ್ ಕಾರ್ಯ ಮುಗಿಸಿಕೊಂಡು ಬೈಕ್‌ನಲ್ಲಿ ಭದ್ರಾವತಿಗೆ ಹಿಂದಿರುಗುತ್ತಿದ್ದ ವೇಳೆ ಕಲ್ಲಾಪುರ ಗ್ರಾಮದ ಸಮೀಪ ರಸ್ತೆಗೆ ಏಕಾಏಕಿ ಪ್ರಾಣಿಯೊಂದು ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತಪಟ್ಟಿದ್ದಾರೆ.

ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.