ವೈದ್ಯೆಗೆ ಲೈಂಗಿಕ ಕಿರುಕುಳ – ಪ್ರಕರಣ ದಾಖಲು
ಹೊಸನಗರ : ಪತ್ನಿಯ ರಕ್ತ ಪರೀಕ್ಷಾ ವರದಿಯನ್ನು ತೋರಿಸಲು ವೈದ್ಯೆಯೊಬ್ಬರ ಬಳಿ ಹೋದ ಸಂದರ್ಭದಲ್ಲಿ ಆಕೆ ಏಕಾಂಗಿಯಾಗಿರುವುದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ ವ್ಯಕ್ತಿಯ ವಿರುದ್ಧ ತಾಲ್ಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿಗೌಡ ದೋದೋರು (ಕಾನ್‌ಬೈಲು) ಆರೋಪಿತ ವ್ಯಕ್ತಿಯಾಗಿದ್ದು, ಡಿಸೆಂಬರ್ 29ರಂದು ಈತ ತನ್ನ ಪತ್ನಿಯ ರಕ್ತ ಪರೀಕ್ಷಾ ವರದಿಯನ್ನು ತೋರಿಸಲು ವೈದ್ಯೆಯೊಬ್ಬರ ಬಳಿ ಹೋಗಿದ್ದಾನೆ. ವರದಿಯನ್ನು ತೋರಿಸುವ ಸಂದರ್ಭದಲ್ಲಿ ವೈದ್ಯೆ ಒಬ್ಬರೇ ಇರುವುದನ್ನು ಗಮನಿಸಿ, ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ತಕ್ಷಣವೇ ಆಕೆ ಪ್ರತಿಭಟಿಸಿ ಬೈದು ಮನೆಯಿಂದ ಹೊರಗೆ ಕಳಿಸಿದ್ದಾರೆ.
ಆನಂತರ ಈತನ ಪತ್ನಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿ, ಮಾನಸಿಕ ಒತ್ತಡದಿಂದಾಗಿ ತಡವಾಗಿ ಡಿಸೆಂಬರ್ 31ರಂದು ಪೊಲೀಸರಿಗೆ ದೂರು ನೀಡಿದ್ದಾಗಿ ವೈದ್ಯೆ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.