ಭದ್ರಾವತಿ ನಗರಸಭೆ: ಜೆಡಿಎಸ್​​ ಅಭ್ಯರ್ಥಿಗೆ ಭರ್ಜರಿ ಗೆಲುವು, ಠೇವಣಿ ಕಳೆದುಕೊಂಡ ಬಿಜೆಪಿ

ಭದ್ರಾವತಿ : ಇಲ್ಲಿನ ನಗರಸಭೆ 29ನೇ ವಾರ್ಡ್‌ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ ಕುಮಾರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 450 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಗೆಲುವಿನಿಂದ ಭದ್ರಾವತಿ ನಗರಸಭೆ ಯಲ್ಲಿ ಜೆಡಿಎಸ್ ಸ್ಥಾನ 12ಕ್ಕೆ ಏರಿಕೆಯಾಗಿದೆ. ಇನ್ನು ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್​ನ ನಾಗರತ್ನ ಅನಿಲ್‌ ಕುಮಾರ್ 1,282 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಲೋಹಿತಾ ನಂಜಪ್ಪ 832 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ…

Read More

ಭದ್ರಾವತಿ : ಈಜಲು ಅಣೆಕಟ್ಟೆಗೆ ಹೋದ ಇಬ್ಬರು ಕಾಲೆಜು ವಿದ್ಯಾರ್ಥಿಗಳು ಸಾವು

ಭದ್ರಾವತಿ ಸಮೀಪದ ಗೊಂದಿ ಅಣೆಕಟ್ಟೆಯಲ್ಲಿ ಈಜಲು ಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು ಕಂಡ ಹೃದಯ ವಿದ್ರಾವಕ ಘಟನೆ ಇಂದು ಮಧ್ನಾಹ್ನ ಗೊಂದಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಗಾಡಿಕೊಪ್ಪ ಹಾಗೂ ಕೊಮ್ಮನಾಳ್‌ ಗ್ರಾಮದ ಕಿರಣ್‌ ಹಾಗೂ ಶಶಾಂಕ್‌ (19 ವರ್ಷ) ಎಂಬುವರೇ ಸಾವು ಕಂಡ ನತದೃಷ್ಟ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಶಿವಮೊಗ್ಗದ ಎಡುಕೇರ್‌ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಈ ನತದೃಷ್ಟರು ಸ್ನೇಹಿತರೊಂದಿಗೆ ಗೊಂದಿ ಗ್ರಾಮದಲ್ಲಿರುವ ನೈಸರ್ಗಿಕ ಸೊಬಗನ್ನು ನೋಡಲು ಬಂದಿದ್ದಾರೆ, ಒಟ್ಟು ಐವರು ಕಾಲೇಜು ವಿದ್ಯಾರ್ಥಿಗಳಲ್ಲಿ…

Read More

ಭದ್ರಾವತಿ : KSRTC ಬಸ್ ನಿಲ್ದಾಣಕ್ಕೆ ಎಂ ಜೆ ಅಪ್ಪಾಜಿ ಹೆಸರಿಡಲು ಆಗ್ರಹ

ಭದ್ರಾವತಿ: ನಗರದ ಕೆಎಸ್‌ಆರ್‌ ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ದಿ: ಎಂ.ಜೆ ಅಪ್ಪಾಜಿಯವರ ಹೆಸರನ್ನು ನಾಮಕರಣ ಗೊಳಿಸುವಂತೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾ ಣಕ್ಕೆ ಅಗತ್ಯವಿರುವ  ಅನುದಾನ ಶೀಘ್ರ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಸಚಿವ ಕೆ.ಎಸ್ ಈಶ್ವರಪ್ಪ ರವರಿಗೆ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಎಲ್ಲಾ ವರ್ಗದ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿರುವ ದಿ: ಎಂ.ಜೆ…

Read More

ಭದ್ರಾವತಿ: ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಜಯಂತಿ:

ಭದ್ರಾವತಿ: ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಂದು ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸುರವರ 106 ನೇ ಜಯಂತಿ ಆಚರಿಸಲಾಯಿತು. ಶಾಸಕ ಬಿ.ಕೆ.ಸಂಗಮೇಶ್ವರ್  ಕಾರ್ಯಕ್ರಮ ಉದ್ಘಾಟಿಸಿ,  ಹಿಂದುಳಿದ ವರ್ಗಗಳ ಹರಿಕಾರ ದಿ: ದೇವರಾಜ ಅರಸುರವರ ಸಾಧನೆಗಳನ್ನು ಕುರಿತು ಮಾತನಾಡಿದರು. ತಹಸೀಲ್ದಾರ್ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಗ್ರೇಡ್-2 ತಹಸೀಲ್ದಾರ್ ರಂಗಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್ವರಿ, ಮೇಲ್ವಿಚಾರಕ ರಮೇಶ್, ಕಂದಾಯಾಧಿಕಾರಿ ಪ್ರಶಾಂತ್, ಮುಖಂಡ ಟಿ.ವೆಂಕಟೇಶ್, ಮುಂತಾದವರು…

Read More

ಭದ್ರಾವತಿ ಮಹಿಳಾ ಸಮಾಜದಿಂದ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ:

ಭದ್ರಾವತಿ:ಕರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ನೆರೆವೆರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳನ್ನು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.      ಕರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರೆವೇರಿಸಲು ಕುಟುಂಬ ವರ್ಗದವರೇ ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಅದರಲ್ಲೂ ಉಚಿತವಾಗಿ ಮೃತ ದೇಹಗಳ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಾಗಿ ನಿಂತಿರುವ ಬಜರಂಗದಳ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದ್ದು, ಈ ಯುವಕರ ಸೇವೆಯನ್ನು ನಗರದ ವಿವಿಧ ಸಂಘ-ಸಂಸ್ಥೆಗಳು…

Read More

ಭದ್ರೆ ಪ್ರತಿ ಬಾರಿ ಪೂರ್ಣ ಪ್ರಮಾಣದಲ್ಲಿ ತುಂಬಲಿ, ಕೊನೆಯ ಭಾಗದ ರೈತರಿಗೂ ನೀರು ತಲುಪಲಿ : ಬಿ ಕೆ ಸಂಗಮೇಶ್ವರ್

ಭದ್ರಾವತಿ : ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ವರ್ ಮಂಗಳವಾರ ಸರ್ವ ಧರ್ಮ ಗುರುಗಳ ಹಾಗು ಕಾರ್ಯಕರ್ತರು ಅಭಿಮಾನಿಗಳು ಮತ್ತು ಮುಖಂಡರ ಸಮ್ಮುಖದಲಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಣೆ ಹಾಗು ಗಂಗೆ ಪೂಜೆ ನೆರೆವೇರಿಸಿದರು.  ತಾಲೂಕಿನ ಜೀವನದಿಯಾದ ಭದ್ರಾ  ಜಲಾಶಯ ಪ್ರತಿ ವರ್ಷ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಮೂಲಕ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತಾಗಲಿ ಎಂದು ಶಾಸಕ ಬಿ ಕೆ ಸಂಗಮೇಶ್ವರ್ ಹೇಳಿದರು.    ಅವರು ಮಂಗಳವಾರ ಸರ್ವ ಧರ್ಮ ಗುರುಗಳ ಹಾಗು ಕಾರ್ಯಕರ್ತರು,…

Read More

ಮನೆ ಕಳ್ಳತನ ಆರೋಪಿ ಬಂಧನ:ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ವಶ:

ಭದ್ರಾವತಿ: ಹೊರ ಜಿಲ್ಲೆಗಳಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು  ಪಟ್ಟಣದ ಪೊಲೀಸರು ಬಂಧಿಸಿ ಕಳವು ಮಾಡಿದ್ದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿ ಪ್ರಸಾದ್ ಮತ್ತು ಮಾನ್ಯ ಹೆಚ್ಚುವರಿ ಅಧೀಕ್ಷಕರಾದ ಶೇಖರ್ ಹೆಚ್ ಟಿ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗದ ಎಎಸ್ಪಿ ಯವರಾದ ಸಾಹಿಲ್ ಬಾಗ್ಲಾ ರವರ ನೇತೃತ್ವದ ಪೊಲೀಸ್ ತಂಡ ಹೊರ ಜಿಲ್ಲೆಯಲ್ಲಿ ಬೀಗ ಹಾಕಿದ ಮನೆ ಕಳ್ಳತನ ಮಾಡುತ್ತಿದ್ದ ಭದ್ರಾವತಿ ಸತ್ಯಸಾಯಿ…

Read More