ಭದ್ರಾವತಿ: ಹೊರ ಜಿಲ್ಲೆಗಳಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸಿ ಕಳವು ಮಾಡಿದ್ದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿ ಪ್ರಸಾದ್ ಮತ್ತು ಮಾನ್ಯ ಹೆಚ್ಚುವರಿ ಅಧೀಕ್ಷಕರಾದ ಶೇಖರ್ ಹೆಚ್ ಟಿ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗದ ಎಎಸ್ಪಿ ಯವರಾದ ಸಾಹಿಲ್ ಬಾಗ್ಲಾ ರವರ ನೇತೃತ್ವದ ಪೊಲೀಸ್ ತಂಡ ಹೊರ ಜಿಲ್ಲೆಯಲ್ಲಿ ಬೀಗ ಹಾಕಿದ ಮನೆ ಕಳ್ಳತನ ಮಾಡುತ್ತಿದ್ದ ಭದ್ರಾವತಿ ಸತ್ಯಸಾಯಿ ನಗರ ವಾಸಿ ಆರೋಪಿ ರವಿ ಅಲಿಯಾಸ್ ಸೈಕಲ್ ರವಿ ಎಂಬಾತನನ್ನು ಬಂದಿಸಿದ್ದು,ಬಂಧಿತನಿಂದ 15,52,020 ರೂ ಮೌಲ್ಯದ 361 ಗ್ರಾಂ 530 ಮಿಲೀ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಪ್ರಕರಣ ಪತ್ತೆ ಮಾಡಿದ ಭದ್ರಾವತಿ ಗ್ರಾಮಾಂತರ ಪಿಎಸ್ಐ ಚೈತನ್ಯ ಸಿ ಜೆ,ಎಎಸ್ಐ ದಿವಾಕರ್ ರಾವ್ ಹಾಗೂ ಠಾಣಾ ಸಿಬ್ಬಂಧಿಗಳಾದ ನಾಗರಾಜ್ ಎಂ,ಆದರ್ಶ್ ಶೆಟ್ಟಿ,ಚಂದ್ರಶೇಖರ ಟಿ ಜಿ,ಉದಯಕುಮಾರ ಕೆ ವಿ,ಗಿರೀಶ್ ನಾಯ್ಕ್,ರಾಮಕೃಷ್ಣ, ಪ್ರಭು ರವರುಗಳನ್ನು ಪೋಲಿಸ್ ಅಧೀಕ್ಷಕರಾದ ಲಕ್ಷ್ಮಿ ಪ್ರಸಾದ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್ ಟಿ ರವರು ಅಭಿನಂದಿಸಿರುತ್ತಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..